ಲೈಂಗಿಕ ಆರೋಗ್ಯಕ್ಕೆ ಮದ್ದು ಈ ಅಣಬೆ!

ವಿವಿಧ ಆಹಾರ ಪದಾರ್ಥಗಳಲ್ಲಿ ಅಣಬೆಯನ್ನು ಸೇರಿಸಿ ಅದರ ರುಚಿಯನ್ನು ದ್ವಿಗುಣಗೊಳಿಸಲಾಗುವುದು.
ಅಣಬೆ ಬಾಯಿಗೆ ರುಚಿ ಮಾತ್ರವಲ್ಲ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ.

ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕ. ಮಶ್ರೂಮ್ ನಲ್ಲಿ ದೇಹಕ್ಕೆ ಅಗತ್ಯವಾದ ಇನ್ನೂ ಹಲವು ಅಂಶಗಳಿವೆ.

ಅಣಬೆಯಲ್ಲಿಯೇ ವಿವಿಧ ಬಗೆಗಳಿರುವುದರಿಂದ ಕೆಲವು ಆಹಾರ ಪದಾರ್ಥಗಳಿಗೆ ಆಯಾ ಅಣಬೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುವುದು.ಹೀಗಾಗಿಯೇ ಅಣಬೆ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ.

ತೂಕ ಇಳಿಕೆ

ಅಣಬೆಯು ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಒಳಗೊಂಡಿದೆ. ಅಣಬೆಯು ಅಧಿಕ ಪ್ರಮಾಣದ ಪ್ರೋಟೀನ್ಗಳಿಂದ ಕೂಡಿದೆ. ಇದು ದೇಹದಲ್ಲಿ ಇರುವ ಕೊಬ್ಬುಗಳನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುವುದು.

ಮಧುಮೇಹ
ಮಧುಮೇಹಿಗಳಿಗೆ ಅಣಬೆ ಉತ್ತಮ ಆಹಾರ. ಏಕೆಂದರೆ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಇಲ್ಲ. ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಮತ್ತು ಎಂಜೈಮುಗಳು ಸೇವಿಸಿದ ಆಹಾರದಲ್ಲಿನ ಸಕ್ಕರೆ ಮತ್ತು ಸ್ಟಾರ್ಚ್ ಅಂಶವನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಅಣಬೆಯಲ್ಲಿ ಕಾರ್ಬೋಹೈಡ್ರೇಟ್ಸ್ ಮಟ್ಟವು ತುಂಬಾ ಕಡಿಮೆಯಾಗಿರುವ ಕಾರಣ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.

ಮೊಡವೆ
ಅಣಬೆಯಲ್ಲಿ ವಿಟಮಿನ್ ಡಿ ಅಧಿಕವಾಗಿರುತ್ತದೆ. ಇದು ಮೊಡವೆಯನ್ನು ಕಡಿಮೆ ಮಾಡಲು ಹಾಗೂ ಅದಕ್ಕೆ ಉತ್ತಮ ಚಿಕಿತ್ಸೆ ನೀಡಲು ಸಹಾಯ ಮಾಡುವುದು. ಅಣಬೆಯು ಹೈಲುರಾನಿಕ್ ಆಮ್ಲದ ಕ್ರಿಯೆಯನ್ನು ಅನುಕರಿಸುತ್ತದೆ. ಇದರಲ್ಲಿ ಇರುವ ಪಾಲಿಸ್ಯಾಕರೈಡ್ಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಜೊತೆಗೆ ಚರ್ಮವನ್ನು ಸದಾ ಕಾಲ ಮೃದು ಹಾಗೂ ಆರೋಗ್ಯದಿಂದ ಇರುವಂತೆ ಮಾಡುವುದು.
ಕ್ಯಾನ್ಸರ್

ಅಣಬೆಯಲ್ಲಿರುವ ಆಯಂಟಿಆಕ್ಸಿಡೆಂಟ್ಗಳು ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಸಾಬೀತು ಮಾಡಿದೆ. ಅಣಬೆಯಲ್ಲಿರುವ ಫೈಬರ್, ಪೊಟ್ಯಾಶಿಯಂ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ರೋಗ ನಿರೋಧಕ ಶಕ್ತಿ

ಎರ್ಗೊಥಿಯಾನೈನ್ ಎಂಬ ಅತಿ ಶಕ್ತಿಯುತ ಆಂಟಿ ಯಾಕ್ಸಿಡಂಟ್ ಇದರಲ್ಲಿರುವದರಿಂದ ರೋಗಗಳಿಂದ ದೂರವಿರಿಸಲು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಇದರಲ್ಲಿನ ಆಂಟಿ ಬಯಾಟಿಕ್ ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.

ಚಯಾಪಚಯ ಕ್ರಿಯೆ
ವಿಟಮಿನ್ ಬಿಯು ಅಣಬೆಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತವೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕೆಲಸ ಮಾಡುತ್ತದೆ. ಇದರಲ್ಲಿರುವ ವಿಟಮಿನ್ಗಳು ನಮ್ಮ ದೇಹಕ್ಕೆ ತೀರಾ ಅಗತ್ಯವಾಗಿರುತ್ತವೆ.ಇನ್ನು ನಮ್ಮ ದೇಹ ಸುಗಮವಾಗಿ ಕೆಲಸ ಮಾಡಲು ಬೇಕಾದ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸಲು ಅಣಬೆಗಳು ಅಗತ್ಯ ಶಕ್ತಿಯನ್ನು ನೀಡುತ್ತವೆ.

ಲೈಂಗಿಕ ಆರೋಗ್ಯ ವೃದ್ಧಿ
ಅಣಬೆಯು ಸಮೃದ್ಧವಾದ ಸತುವನ್ನು ಒಳಗೊಂಡಿದೆ. ದಣಿದ ಜೀವಕ್ಕೆ ಪುನಃಶ್ಚೇತನ ನೀಡುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಉತ್ತಮ ಫಲವತ್ತತೆ ಹಾಗೂ ಲೈಂಗಿಕ ಆರೋಗ್ಯವನ್ನು ವೃದ್ಧಿಸುವುದು. ಪುರುಷರಿಗೆ ಜನನಾಂಗದ ಅಂಗಗಳ ಪುನಃಸ್ಥಾಪನೆಗೆ ಸಹಾಯ ಮಾಡುವುದು. ಜೊತೆಗೆ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪರಿಸರ ಸ್ನೇಹಿ 'ಸೂಪರ್ ಬಾಟಮ್' ಡೈಪರ್‌

Tue Dec 28 , 2021
ಇಂದಿನ ತಾಯಂದಿರಿಗೆ ಚಿಕ್ಕ ಮಕ್ಕಳ ಪಾಲನೆ-ಪೋಷಣೆ ನಿಜಕ್ಕೂ ಸವಾಲು. ಅದರಲ್ಲೂ ಪುಟ್ಟ ಮಕ್ಕಳಿಗೆ ಡೈಪರ್‌ ತೊಡಿಸುವುದು ಅವರಿಗೆ ಸಂಕಟವೇ ಸರಿ. ಯಾಕೆಂದರೆ ದಿನಪೂರ್ತಿ ಡೈಪರ್‌ ತೊಡಿಸುವುದರಿಂದ ಹಸುಗೂಸಿನಲ್ಲಿ ಚರ್ಮದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬ ಆತಂಕ ತಾಯಂದಿರನ್ನು ಕಾಡಬಹುದು. ಈ ಭಯವನ್ನು ದೂರ ಮಾಡುವ ಸಲುವಾಗಿಯೇ ‘ಸೂಪರ್ ಬಾಟಮ್‌’ ಎಂಬ ಸಂಸ್ಥೆ ಪರಿಸರ ಸ್ನೇಹಿ ಡೈಪರ್‌ ಹಾಗೂ ಮಕ್ಕಳ ಒಳ ಉಡುಪುಗಳನ್ನು ತಯಾರಿಸಿದೆ. ಪಲ್ಲವಿ ಉಟಗಿ ಎನ್ನುವವರು ಸೂಪರ್‌ ಬಾಟಮ್ ಸಂಸ್ಥೆಯ […]

Advertisement

Wordpress Social Share Plugin powered by Ultimatelysocial