ವಯಸ್ಸು ಮೀರಿದ ಮದುವೆ ತರಬಹುದು ಸಮಸ್ಯೆ!

 

ಬಹಳಷ್ಟು ಮಂದಿ ವಯಸ್ಸು ಮೀರುತ್ತಿದ್ದರೂ ಲೈಫ್ ನಲ್ಲಿ ಸೆಟ್ಲ್ ಆಗಲಿ ಆಮೇಲೆ ಆದರಾಯಿತು ಅಂಥ ಮದುವೆಯನ್ನು ಮುಂದೂಡುತ್ತಲೇ ಬರುತ್ತಿರುತ್ತಾರೆ ಅದು ಕಡೆಯಾದರೆ ಮತ್ತೊಂದು ಕಡೆ ಮದುವೆ ಆದ ಮೇಲೆ ದಂಪತಿ ಬೇಡ ಒಂದಷ್ಟು ವರ್ಷ ಹಾಯಾಗಿರೋಣ ಆಮೇಲೆ ಮಾಡಿಕೊಂಡರಾಯಿತು ಎಂಬ ತೀರ್ಮಾನ ಮಾಡುತ್ತಾರೆ.ಆದರೆ ಅಂತಹ ತೀರ್ಮಾನ ಕೈಗೊಳ್ಳುವ ಮುನ್ನ ವೈದ್ಯರಾದ ಡಾ.ದೇವಿಕಾ ಗುಣಶೀಲ ಅವರು ಏನು ಹೇಳುತ್ತಾರೆ ಎಂಬುದನ್ನು ನೋಡಿ.ಮದುವೆಯಾದ ಬಳಿಕ ದಂಪತಿ ಮಗು ಬೇಕೆಂದು ಬಯಸುವುದು ಸಹಜ. ಆದರೆ ಕೆಲವರು ಮದುವೆಯಾದ ಕೂಡಲೇ ಮಕ್ಕಳು ಬೇಡ ಒಂದಷ್ಟು ವರ್ಷದ ಬಳಿಕ ನೋಡೋಣ ಎನ್ನುತ್ತಾ ಮುಂದೂಡುತ್ತಾರೆ. ಆದರೆ ಅಂತಹ ತೀರ್ಮಾನಗಳು ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗಿ ಬಿಡುತ್ತದೆ. ವಯಸ್ಸು ಮೀರಿದ ಬಳಿಕ ಮಗುವನ್ನು ಪಡೆಯುತ್ತೇವೆ ಎಂಬ ನಿರ್ಧಾರಕ್ಕೆ ಬರುವವರು ಒಂದಷ್ಟು ವಿಚಾರಗಳನ್ನು ಅರಿತುಕೊಳ್ಳುವುದು ಬಹು ಮುಖ್ಯವಾಗುತ್ತದೆ.ವೈದ್ಯರು ಹೇಳುವ ಪ್ರಕಾರ ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ವಂಶಾವಳಿಯ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳಾಗಿವೆ. ಅಂದರೆ, ತಂದೆಗೆ ವಯಸ್ಸಾಗುತ್ತಿದ್ದಂತೇ ಹುಟ್ಟುವ ಮಗುವಿಗೆ ಮುಂದೆ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಿಂಡ್ರೋಮ್‌ಗಳು ಕಾಣಿಸಿಕೊಳ್ಳಬಹುದಂತೆ. ಈ ವಿಷಯವನ್ನು ಆಳವಾಗಿ ನೋಡುವುದಾದರೆ, ತಂದೆಯಾಗುವ ಪ್ರಕ್ರಿಯೆಯಲ್ಲಿ ವಯಸ್ಸಾದಂತೆ ಹುಟ್ಟುವ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.ಅಧ್ಯಯನದ ಪ್ರಕಾರ 30-34 ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45ವಯಸ್ಸಿನಲ್ಲಿ ತಂದೆಯಾದರೆ ಅಂಥವರಲ್ಲಿ 1000ಕ್ಕೆ 4 ಅಥವಾ 5 ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37ಮಕ್ಕಳಿಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ! ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವ ಅನೇಕ ತೊಂದರೆಗಳಿಗೆ ತಂದೆಯಾಗುವಾಗಿನ ವಯಸ್ಸು 40 ದಾಟಿರುವುದೇ ಮುಖ್ಯ ಕಾರಣವಾಗಿರುತ್ತದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಕ್ಷಾಂತರ ರೂಪಾಯಿ ಲಾಭ ತಂದುಕೊಡುತ್ತೆ ಈ ಬೆಳೆ.

Sun Jan 30 , 2022
ನೌಕರಿಯೊಂದೇ ಜೀವನೋಪಾಯವಲ್ಲ. ನೀವು ಬಯಸಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ಅನೇಕರು ನೌಕರಿ ಬಿಟ್ಟು ಕೃಷಿ ಕ್ಷೇತ್ರಕ್ಕಿಳಿದು ಸಾಧನೆ ಮಾಡಿದ್ದಾರೆ.ಹೊಸ ಹೊಸ ತಂತ್ರಜ್ಞಾನ, ಕೃಷಿ ವಿಧಾನಗಳನ್ನು ಬಳಸಿಕೊಂಡು, ಹೊಸ ಹೊಸ ಪ್ರಯೋಗಗಳನ್ನು ಮಾಡಿ ಉತ್ತಮ ಬೆಳೆ ಬೆಳೆದು ಲಾಭ ಪಡೆಯುತ್ತಿದ್ದಾರೆ.ಈಗ ಕೃಷಿ ಹಿಂದಿನಷ್ಟು ಕಠಿಣವಲ್ಲ.ಒಂದು ಎಕರೆ ಪ್ರದೇಶದಲ್ಲಿ ಸೋರೆಕಾಯಿ ಬೆಳೆದು ನೀವು ಕೈತುಂಬಾ ಹಣ ಮಾಡಬಹುದು. ಅನೇಕ ಕಂಪನಿಗಳು ಸೋರೆಕಾಯಿ ಜ್ಯೂಸ್ ಮಾರಾಟ […]

Advertisement

Wordpress Social Share Plugin powered by Ultimatelysocial