ಯಾಕೆ ಲತಾ ಮಂಗೇಶ್ಕರ್ ಮದುವೆಯಾಗಿಲ್ಲ?

ಭಾರತೀಯ ಸಿನಿ ಸಂಗೀತ ಪ್ರಪಂಚದಲ್ಲಿ ಒಂದು ಶಿಖರವನ್ನು ಏರಿದ ಹಿರಿಯ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಲತಾ ಮಂಗೇಶ್ಕರ್ ಅವರ ಸಾವು ಇಡೀ ದೇಶವನ್ನು ನೋವಿನ ಮಡುವಿನಲ್ಲಿಟ್ಟಂತಾಗಿದೆ.

ಕೋಟ್ಯಂತರ ಅಭಿಮಾನಿಗಳ ಸಂಗೀತ ದೇವತೆ ಎಂದು ಆರಾಧಿಸುವ ಲತಾ ಮಂಗೇಶ್ಕರ್ ಅವರ ಜೀವನವು ತುಂಬಾ ಸ್ಫೂರ್ತಿದಾಯಕವಾಗಿದೆ.

ಆಕೆಯ ಕೀರ್ತಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಆದರೂ ಅವರ ವೈಯಕ್ತಿಕ ಜೀವನವು ಅಸಂಪೂರ್ಣವಾಗಿ ಉಳಿದುಹೋಯಿತು. ಈ ದಿಗ್ಗಜ ಗಾಯಕಿ ಯಾಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇನ್ನೂ ಉಳಿದಿದೆ. ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲತಾ ಮಂಗೇಶ್ಕರ್ ಅವರು ಪ್ರತಿಕ್ರಿಯಿಸಿದ್ದರು. ‘ಜೀವನದಲ್ಲಿ ಎಲ್ಲವೂ ದೇವರ ನಿರ್ಧಾರದ ಮೇಲೆ ನಿಂತಿದೆ. ಏನೇ ಆಗಲಿ ಅದು ನಮ್ಮ ಒಳಿತಿಗಾಗಿಯೇ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಮದುವೆಯಾಗಲು ಇಷ್ಟಪಡದ ಹುಡುಗಿಯರಿದ್ದಾರೆಯೇ? ಈ ಪ್ರಶ್ನೆಯನ್ನು ನಲವತ್ತು ವರ್ಷಗಳ ಹಿಂದೆ ಕೇಳಿದ್ದರೆ ನನ್ನ ಉತ್ತರ ಬೇರೆಯೇ ಇರುತ್ತಿತ್ತೇನೋ. ಈ ವಯಸ್ಸಿನಲ್ಲಿ ಅಂತಹ ಯೋಚನೆಯೇ ಆಸ್ಪದವಿಲ್ಲ ಎಂದು ಅವರು ಉತ್ತರಿಸಿದ್ದರು. ಈ ಸಂದರ್ಶನದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ 82 ವರ್ಷ ವಯಸ್ಸಾಗಿತ್ತು.

ಲತಾ ಮಂಗೇಶ್ಕರ್ ಅವರು ಮದುವೆಯ ಬಗ್ಗೆ ಮತ್ತೊಂದು ಹೇಳಿಕೆಯನ್ನೂ ಸಹ ಸಂದರ್ಶನದಲ್ಲಿ ನೀಡಿದ್ದರು. ನನ್ನ ತಂದೆ ತೀರಿಕೊಂಡಾಗ ನನಗೆ ಕೇವಲ 13 ವರ್ಷ, ಕುಟುಂಬದ ಹಿರಿಯ ಮಗಳಾದ ನಾನು ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ ಬಂದಿತ್ತು. ಒಂದು ಹಂತದಲ್ಲಿ ಮದುವೆಯಾಗುವ ಯೋಚನೆ ಬಂದಿದ್ದರೂ, ಇದರಿಂದ ಸಾಧ್ಯವಾಗಲಿಲ್ಲ ಎಂದು ಖಾಸಗಿ ಮಾದ್ಯಮಕ್ಕೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಈ ರೀತಿಯಾಗಿ ಮದುವೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಲ್ಮಾನ್ ಖಾನ್ ನೃತ್ಯ ಮಾಡುವಾಗ ಪ್ರಜ್ಞೆ ಬರುತ್ತಿತ್ತು ಎಂದು 90 ರ ದಶಕದ ತನ್ನ ಸಹನಟಿ ಆಯೇಷಾ ಜುಲ್ಕಾ ಬಹಿರಂಗಪಡಿಸಿದ್ದಾರೆ

Mon Feb 7 , 2022
  ಬಾಲಿವುಡ್ ನಟಿ ಮತ್ತು 90 ರ ದಶಕದ ತಾರೆ ಆಯೇಶಾ ಜುಲ್ಕಾ ಇತ್ತೀಚೆಗೆ ಮಾತನಾಡಿದ್ದಾರೆ ಸಲ್ಮಾನ್ ಖಾನ್ ಚಿತ್ರದಲ್ಲಿನ ನೃತ್ಯದ ಬಗ್ಗೆ ಅವರ ಆತಂಕ. ನಟಿ ಮಧು ಜೊತೆಗೆ ರಿಯಾಲಿಟಿ ಶೋ ಸಾ ರೆ ಗಮಾ ಪಾದಲ್ಲಿ ಸ್ಟಾರ್ಲೆಟ್ ಕಾಣಿಸಿಕೊಂಡಿದ್ದರು ಮತ್ತು ಅವರ ಮೊದಲ ಹಿಂದಿ ಚಿತ್ರ ‘ಕುರ್ಬಾನ್’ ನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಶೂಟಿಂಗ್ ಮಾಡಿರುವುದನ್ನು ನೆನಪಿಸಿಕೊಂಡರು. “ನನ್ನ ಮೊದಲ ಹಿಂದಿ ಚಿತ್ರ ಕುರ್ಬಾನ್‌ನಲ್ಲಿ ನಾನು ಸಲ್ಮಾನ್ […]

Advertisement

Wordpress Social Share Plugin powered by Ultimatelysocial