‘ಲೈಗರ್’ ಸೋಲು.. ಮತ್ತೆ ಬಾಲಿವುಡ್‌ಗೆ ಲಗ್ಗೆ ಇಟ್ಟ ಪುರಿ.

 

‘ಲೈಗರ್’ ಸಿನಿಮಾ ಈ ವರ್ಷ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಆಕ್ಷನ್ ಎಂಟರ್‌ಟೈನರ್‌ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ವಿಜಯ್ ದೇವರಕೊಂಡ ಹೀರೊ ಆಗಿ ಅಬ್ಬರಿಸಿದರೂ ಪ್ರಯೋಜನವಾಗಿರಲಿಲ್ಲ.’ಲೈಗರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಬಂಡವಾಳ ಹಾಕಿ ಪುರಿ ಜಗನ್ನಾಥ್ ಕೈ ಸುಟ್ಟುಕೊಂಡಿದ್ದರು. ‘ಲೈಗರ್’ ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ವಿಜಯ್ ದೇವರಕೊಂಡ ಆಸೆ ಕೂಡ ಈಡೇರಲಿಲ್ಲ. ಈ ಸಿನಿಮಾ ನಂತರ ಇದೇ ಕಾಂಬಿನೇಷನ್‌ನಲ್ಲಿ ‘ಜನ ಗಣ ಮನ’ ಸಿನಿಮಾ ಕೂಡ ಘೋಷಣೆ ಆಗಿತ್ತು. ಚಿತ್ರದ ಮುಹೂರ್ತ ಕೂಡ ನೆರವೇರಿತ್ತು. ಆದರೆ ಸದ್ಯಕ್ಕೆ ಆ ಸಿನಿಮಾ ಬರುವುದು ಡೌಟ್ ಎನ್ನಲಾಗ್ತಿದೆ.ನಿರ್ದೇಶಕ ಪುರಿ ಜಗನ್ನಾಥ್‌ಗೆ ಬಾಲಿವುಡ್ ಹೊಸತಲ್ಲ. 18 ವರ್ಷಗಳ ಹಿಂದೆಯೇ ತೆಲುಗಿನ ಸೂಪರ್ ಹಿಟ್ ‘ಬದ್ರಿ’ ಚಿತ್ರವನ್ನು ಬಾಲಿವುಡ್‌ಗೆ ತೆಗೆದುಕೊಂಡು ಹೋಗಿದ್ದರು. ‘ಬುದ್ದಾ ಹೋಗಾ ತೇರಾ ಬಾಪ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್‌ಗೆ ಆಕ್ಷನ್ ಕಟ್ ಹೇಳಿದ್ದರು. ಇದೀಗ ಸಲ್ಮಾನ್ ನಟನೆಯ ಚಿತ್ರವನ್ನು ಪುರಿ ನಿರ್ದೇಶನ ಮಾಡುತ್ತಾರೆ ಎನ್ನಲಾಗ್ತಿದೆ.ಪುರಿ ಜಗನ್ನಾಥ್ ‘ಆಟೋ ಜಾನಿ’ ಅನ್ನುವ ಕಥೆಯನ್ನು ಬಹಳ ಹಿಂದೆಯೇ ಮಾಡಿಕೊಂಡಿದ್ದರು. ಚಿರಂಜೀವಿ ರೀಎಂಟ್ರಿಗೆ ಮಾಡಿದ್ದ ಕಥೆ ಅದು. ಆದರೆ ಆಗ ಅದನ್ನು ಚಿರು ಒಪ್ಪಿರಲಿಲ್ಲ. ಈಗ ಮೆಗಾಸ್ಟಾರ್ ಸಹಾಯದಿಂದಲೇ ಈ ಕಥೆಯನ್ನು ಸಲ್ಮಾನ್‌ ಖಾನ್‌ಗೆ ಪುರಿ ಹೇಳಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಚಿರು ಹಾಗೂ ಸಲ್ಲು ‘ಗಾಡ್‌ಫಾದರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಪುರಿ ಹೇಳಿದ ಕಥೆ ಸಲ್ಲುಗೂ ಇಷ್ಟ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಜಿ. ವಿ. ಅಯ್ಯರ್ ಅವರು ಸಿನಿಮಾದಲ್ಲಿ ನಟನೆಯು ಹಾಗೂ ಕವಿ ಹಾಗಿದ್ದಾರೆ.

Wed Dec 21 , 2022
   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣಾ ಸಮಾರಂಭ. ಆ ವರ್ಷ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದವರು ಅಖಿಲ ಭಾರತ ಮಟ್ಟದಲ್ಲಿ ಪ್ರಖ್ಯಾತರಾದ ಕೆ. ಬಾಲಚಂದರ್. ಕೆ. ಬಾಲಚಂದರ್ ಅವರು ಆ ವರ್ಷದ ಶ್ರೇಷ್ಠ ಚಲನಚಿತ್ರವಾದ ‘ಆದಿ ಶಂಕರಚಾರ್ಯ’ ಚಿತ್ರದ ಹೆಸರು ಹೇಳುತ್ತಾ, “ಈ ಚಿತ್ರಕ್ಕೆ ‘ಸ್ವರ್ಣಕಮಲ’ಕ್ಕಿಂತ ದೊಡ್ಡ ಪ್ರಶಸ್ತಿ ನೀಡಲು ಸಾಧ್ಯವಿದ್ದಿದ್ದರೆ ಚೆನ್ನಿತ್ತು ಎನಿಸುತ್ತಿದೆ” ಎಂದರು. ಆ ಚಿತ್ರದ ನಿರ್ದೇಶಕರು ನಮ್ಮ ಜಿ. ವಿ. ಅಯ್ಯರ್. ಜಿ. ವಿ. ಅಯ್ಯರ್ ಅವರು […]

Advertisement

Wordpress Social Share Plugin powered by Ultimatelysocial