ಜಿ. ವಿ. ಅಯ್ಯರ್ ಅವರು ಸಿನಿಮಾದಲ್ಲಿ ನಟನೆಯು ಹಾಗೂ ಕವಿ ಹಾಗಿದ್ದಾರೆ.

 

 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣಾ ಸಮಾರಂಭ. ಆ ವರ್ಷ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದವರು ಅಖಿಲ ಭಾರತ ಮಟ್ಟದಲ್ಲಿ ಪ್ರಖ್ಯಾತರಾದ ಕೆ. ಬಾಲಚಂದರ್. ಕೆ. ಬಾಲಚಂದರ್ ಅವರು ಆ ವರ್ಷದ ಶ್ರೇಷ್ಠ ಚಲನಚಿತ್ರವಾದ ‘ಆದಿ ಶಂಕರಚಾರ್ಯ’ ಚಿತ್ರದ ಹೆಸರು ಹೇಳುತ್ತಾ, “ಈ ಚಿತ್ರಕ್ಕೆ ‘ಸ್ವರ್ಣಕಮಲ’ಕ್ಕಿಂತ ದೊಡ್ಡ ಪ್ರಶಸ್ತಿ ನೀಡಲು ಸಾಧ್ಯವಿದ್ದಿದ್ದರೆ ಚೆನ್ನಿತ್ತು ಎನಿಸುತ್ತಿದೆ” ಎಂದರು. ಆ ಚಿತ್ರದ ನಿರ್ದೇಶಕರು ನಮ್ಮ ಜಿ. ವಿ. ಅಯ್ಯರ್. ಜಿ. ವಿ. ಅಯ್ಯರ್ ಅವರು ಇಡೀ ಚಲನಚಿತ್ರರಂಗದಲ್ಲಿ ಮಾಡಿದ ಸಾಧನೆ ಅಂತಿಂತದ್ದಲ್ಲ. ಇಡೀ ಭಾರತದ ಶ್ರೇಷ್ಠತೆಯನ್ನೇ ಚಲನಚಿತ್ರರಂಗದಲ್ಲಿ ಮೂಡಿಸಲು ಪ್ರಯತ್ನಿಸಿದ ಅದ್ವಿತೀಯರವರು. ಎಲ್ಲ ರೀತಿಯಲ್ಲೂ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ ಆಚಾರ್ಯರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಗಣಪತಿ ವೆಂಕಟರಮಣ ಅಯ್ಯರ್ 1917ರ ಸೆಪ್ಟೆಂಬರ್ 3ರಂದು ನಂಜನಗೂಡಿನಲ್ಲಿ ಜನಿಸಿದರು. ಜಿ. ವಿ. ಅಯ್ಯರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಎಂ. ವಿ. ರಾಜಮ್ಮನವರು ನಿರ್ಮಿಸಿದ ರಾಧಾರಮಣ ಚಿತ್ರದಿಂದ. ಅದೇ ಚಿತ್ರ ಬಾಲಕೃಷ್ಣ ಅವರನ್ನೂ ತೆರೆಗೆ ಪರಿಚಯಿಸಿತು. ಅದಕ್ಕೂ ಮುನ್ನ ಮೈಸೂರಿನ ‘ಸದಾರಮೆ’ ನಾಟಕ ಕಂಪನಿಯಲ್ಲಿ, ಹಾಗು ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವವರಾಗಿ ಹೀಗೆ ವಿಧವಿಧದಲ್ಲಿ ಅಯ್ಯರ್ ಚಾಕರಿ ಮಾಡಿದ್ದರು. ಆ ನಂತರ ಅವಕಾಶಗಳನ್ನರಸಿ ಪುಣೆಗೆ ಹೋದ ಅಯ್ಯರ್, ಅಲ್ಲಿ ಹೋಟೆಲ್ ಮಾಣಿಯಾಗಿದ್ದುಕೊಂಡೇ ಚಿತ್ರರಂಗದಲ್ಲಿನ ಅವಕಾಶಗಳಿಗೆ ಪ್ರಯತ್ನಿಸಿದರು. ಅದು ಫಲಕಾರಿಯಾಗದೆ ಕರ್ನಾಟಕಕ್ಕೆ ಹಿಂದಿರುಗಿದರು.
1954ರಲ್ಲಿ ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರಿಗೆ ಪ್ರಾರಂಭ ಒದಗಿಸಿದ ಎಚ್ ಎಲ್ ಎನ್ ಸಿಂಹರ ಬೇಡರ ಕಣ್ಣಪ್ಪ ಚಿತ್ರ ಜಿ.ವಿ. ಅಯ್ಯರ್ ಅವರಿಗೂ ಪ್ರಸಿದ್ಧಿ ತಂದಿತು. ಚಲನಚಿತ್ರ ಮತ್ತು ರಂಗಭೂಮಿ ಎರಡೂ ಕ್ಷೇತ್ರಗಳಲ್ಲಿ ಜಿ. ವಿ. ಅಯ್ಯರ್ ಮುಂದುವರೆಯತೊಡಗಿದರು. ‘ಸೋದರಿ’, ‘ಮಹಾಕವಿ ಕಾಳಿದಾಸ’, ‘ಹರಿಭಕ್ತ’, ‘ಹೇಮಾವತಿ’ ಅಯ್ಯರ್ ಅವರು ಅಭಿನಯಿಸಿದ ಇತರ ಕೆಲವು ಚಿತ್ರಗಳು. ಹವ್ಯಾಸಿ ರಂಗಭೂಮಿಯಲ್ಲೂ ಆಸಕ್ತಿ ತಳೆದಿದ್ದ ಅಯ್ಯರ್ ಅಂದಿನ ದಿನಗಳಲ್ಲಿ ಪ್ರಸಿದ್ಧವಾಗಿದ್ದ ‘ಸತ್ತವರ ನೆರಳು’ ಅಂತಹ ನಾಟಕಗಳಲ್ಲಿ ಕೂಡಾ ನಟಿಸಿದ್ದರು ಎಂಬುದು ಗಮನಾರ್ಹ.
1955ರಲ್ಲಿ ತೆರೆಕಂಡ ಸೋದರಿ ಚಿತ್ರದ ಮೂಲಕ ಜಿ. ವಿ. ಅಯ್ಯರ್ ಅವರ ಲೇಖನಿ ಚಿತ್ರರಂಗದಲ್ಲಿ ಕಾರ್ಯಾರಂಭ ಮಾಡಿತು. ಆ ಚಿತ್ರದಲ್ಲಿ ಅಯ್ಯರ್ ಗೀತೆಗಳನ್ನೂ ಸಂಭಾಷಣೆಗಳನ್ನೂ ಬರೆದರು. ಮುಂದೆ ಅಯ್ಯರ್ ಬಹಳಷ್ಟು ಶ್ರೇಷ್ಠ ಗೀತೆಗಳನ್ನು ಬರೆದರು. ದಶಾವತಾರ ಚಿತ್ರದ ‘ಗೋದಾವರಿ ದೇವಿ ಮೌನವಾಗಿಹೆ ಏಕೆ, ವೈದೇಹಿ ಏನಾದಳು’, ಕಿತ್ತೂರು ಚೆನ್ನಮ್ಮ ಚಿತ್ರದ ‘ಸನ್ನೆ ಏನೇನೋ ಮಾಡಿತು ಕಣ್ಣು’, ರಣಧೀರ ಕಠೀರವ ಚಿತ್ರದ ‘ಕರುನಾಡ ಕಣ್ಮಣಿಯೇ ಕಠೀರವ’, ರಾಜಶೇಖರ ಚಿತ್ರದ ‘ಮುತ್ತಂತ ಮಗನಾಗಿ ಹೆತ್ತವಳ ಸಿರಿಯಾಗಿ’, ಸಂಧ್ಯಾರಾಗದ ‘ನಂಬಿದೆ ನಿನ್ನ ನಾದ ದೇವತೆಯೇ’, ‘ಕನ್ನಡತಿ ತಾಯೆ ಬಾ’, ಕಣ್ತೆರೆದು ನೋಡು ಚಿತ್ರದ ‘ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ’, ಗಾಳಿಗೋಪುರ ಚಿತ್ರದ ‘ಗಾಳಿಗೋಪುರ ನಿನ್ನಾಶಾ ತೀರ ನಾಳೆ ಕಾಣುವ’, ‘ನನ್ಯಾಕೆ ನೀ ಹಾಗೇ ನೋಡುವೆ ಮಾತಾಡೇ ಬಾಯಿಲ್ಲವೇ’, ಪೋಸ್ಟ್ ಮಾಸ್ಟರ್ ಚಿತ್ರದ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ’, ತಾಯಿ ಕರುಳು ಚಿತ್ರದ ‘ಬಾ ತಾಯೆ ಭಾರತಿಯೇ ಭಾವ ಭಾಗೀರಥಿಯೇ’ ಇಂತಹ ಅನೇಕ ಮನೋಜ್ಞ ಗೀತೆಗಳನ್ನು ಅಯ್ಯರ್ ಬರೆದಿದ್ದಾರೆ.
1962ರ ವರ್ಷದಲ್ಲಿ ಜಿ. ವಿ. ಅಯ್ಯರ್ ಭೂದಾನ ಚಿತ್ರ ನಿರ್ದೇಶಿಸಿದರು. ಆ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿತು. ಕನ್ನಡದ ಕಲಾವಿದರು ಸಂಕಷ್ಟದಲ್ಲಿದ್ದಾಗ ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಇವರನ್ನೊಡಗೂಡಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು ಶ್ರಮಿಸಿದ್ದಲ್ಲದೆ ಈ ಸಂಘದ ಗೆಳೆಯರೊಡನೆ ರಣಧೀರ ಕಂಠೀರವ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು. ತಾಯಿಕರುಳು, ಲಾಯರ್ ಮಗಳು, ಬಂಗಾರಿ, ಪೋಸ್ಟ್ ಮಾಸ್ಟರ್, ಕಿಲಾಡಿ ರಂಗ, ರಾಜಶೇಖರ, ಮೈಸೂರು ಟಾಂಗ, ಚೌಕದ ದೀಪ ಮುಂತಾದವು ಅಯ್ಯರ್ ಅವರು 1969ರ ವರ್ಷದವರೆಗೆ ನಿರ್ಮಿಸಿ ನಿರ್ದೇಶಿಸಿದ ಇನ್ನಿತರ ಚಿತ್ರಗಳು.
1972ರಲ್ಲಿ ಜಿ. ವಿ. ಅಯ್ಯರ್ ಡಾ. ಎಸ್. ಎಲ್. ಭೈರಪ್ಪನವರ ಪ್ರಸಿದ್ಧ ಕಾದಂಬರಿ ‘ವಂಶವೃಕ್ಷ’ವನ್ನು ಆಧರಿಸಿ ಅದೇ ಹೆಸರಿನ ಚಿತ್ರವನ್ನು ಬಿ. ವಿ. ಕಾರಂತ ಮತ್ತು ಗಿರೀಶ್ ಕಾರ್ನಾಡ್ ಜೋಡಿ ನಿರ್ದೇಶನದಲ್ಲಿ ನಿರ್ಮಿಸಿದರು. ಆ ಚಿತ್ರ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಪ್ರತಿಷ್ಠಿತ ಸ್ಥಾನ ದೊರಕಿಸಿಕೊಟ್ಟಿತಲ್ಲದೆ ಈ ಹಿಂದೆ ‘ಸಂಸ್ಕಾರ’ ಚಿತ್ರದಿಂದ ಪ್ರಾರಂಭಗೊಂಡಿದ್ದ ಹೊಸ ಅಲೆಯ ಚಿತ್ರಗಳ ನಿರ್ಮಾಣಕ್ಕೆ ಹೊಸ ಭಾಷ್ಯ ಬರೆಯಿತು. ಕನ್ನಡದ ಪ್ರಸಿದ್ಧ ನಟರಾದ ವಿಷ್ಣುವರ್ಧನ ಅವರು ಈ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಇಟಲಿಯ ಒಂದೇ ಒಂದು ನಾಯಿಯೂ ಭಾರತದ ಪರ ಬೊಗಳಿಲ್ಲ!

Wed Dec 21 , 2022
ಸ್ವಾತಂತ್ರ್ಯಕ್ಕಾಗಿ ಬಿಜೆಪಿ ನಾಯಕರ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ,ರವಿ, ಇಟಲಿಯ ಒಂದು ನಾಯಿಯೂ ಈವರೆಗೆ ಭಾರತದ ಪರ ಬಾಲ ಅಲ್ಲಾಡಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಆ ನಾಯಿ ಚೀನಾ, ಪಾಕ್ ಪರ ಎಂಜಲು ತಿಂದಿದೆ. ಇಟಲಿ ಕಾಂಗ್ರೆಸ್ ನ ಒಂದು ನಾಯಿಯೂ ಭಾರತದ ಪರ ಬೊಗಳಿಲ್ಲ ಎಂದು ವಿವಾದ […]

Advertisement

Wordpress Social Share Plugin powered by Ultimatelysocial