ಬೆಂಗಳೂರು: ಬಿಜೆಪಿ ಸರ್ಕಾರದಿಂದ ಲಾ ಅಂಡ್ ಆರ್ಡರ್ ಕಂಟ್ರೋಲ್!

ಲಾ ಅಂಡ್ ಆರ್ಡರ್ ಕಂಟ್ರೋಲ್ ಮಾಡೋದಕ್ಕೆ ಆಗ್ತಾ ಇಲ್ಲ. ಮತ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳೋದಕ್ಕೆ ರಾಜ್ಯದಲ್ಲಿ ಕೋಮು ಸೌಹಾರ್ಧ ಕದಡೋ ಕೆಲಸ ಮಾಡಲಾಗುತ್ತಿದೆ. ಹೀಗೆ ಆದ್ರೇ ರಾಜ್ಯದ ಬೆಳವಣಿಗೆಗೆ ಕುಂಟಿತವಾಗಲಿದೆ.

ಹೋಮ್ ಮಿನಿಸ್ಟರ್ ಅಸಮರ್ಥರು, ಇವರಿಗೆ ಕಾನೂನು ಸುವ್ಯವಸ್ಥೆ ಕಾಪಾಡೋಕ್ಕೆ ಆಗಲ್ಲ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಜೆಜೆ ನಗರ ಚಂದ್ರು ಹತ್ಯೆ ಪ್ರಕರಣ ಕುರಿತು ಮಾತನಾಡಿದಂತ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು, ಚಂದ್ರು ಹತ್ಯೆ ಪ್ರಕರಣದಲ್ಲಿ ಹೋಮ್ ಮಿನಿಸ್ಟರ್ ಅಸಮರ್ಥರು. ಕಮೀಷನರ್, ಸಿ ಟಿ ರವಿ, ರವಿಕುಮಾರ್ ಒಂದೊಂದು ಹೇಳಿಕೆ ಕೊಡ್ತಾರೆ. ಬಿಜೆಪಿ ಹಿಂದೂಗಳನ್ನ ಪ್ರವೋಕ್ ಮಾಡೋಕ್ಕೆ ಹೊರಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡೋಕ್ಕೆ ಇವರಿಗೆ ಆಗಲ್ಲ. ಹೀಗೆ ಆದ್ರೆ

ಇವರ ಸ್ವಾರ್ಥಕ್ಕೋಸ್ಕರ, ಮತಕೋಸ್ಕರ ಈ ರೀತಿ ಮಾಡ್ತಾಯಿದ್ದಾರೆ. BJPಯವರು ದೇಶವನ್ನ ಹಾಳು ಮಾಡೋಕ್ಕೆ ಹೊರಟ್ಟಿದ್ದಾರೆ. ಯಾವುದಾದ್ರೂ ತನಿಖೆಯಾಗಲಿ..ಶಿಕ್ಷೆಯಾಗಲಿ. ಹರ್ಷನಿಗೆ 25ಲಕ್ಷ ಕೊಟ್ಟಿದ್ದಾರೆ. ಆದ್ರೆ ದಿನೇಶ್ ಗೆ ಯಾಕೆ ಕೊಟ್ಟಿಲ್ಲ. ಭಜರಂಗದಳದವನು ಕೊಲೆ ಕೊಲೆ ಮಾಡಿದ್ದು. ಇವರಿಗೆ ಬೇಕಾದ ರೀತಿ ಕಾನೂನು ಮಾಡ್ತಾರೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ ಎಂದು ಪ್ರಶ್ನಿಸಿದರು.

ಇವರ ಕೈನಲ್ಲಿ ಲಾ ಅಂಡ್ ಆರ್ಡರ್ ನಿಭಾಯಿಸೋಕ್ಕೆ ಆಗಲ್ಲ. ಹಿಂದೂ ಮುಸ್ಲಿಂ ನಡುವೆ ಧ್ವೇಷ ಬೆಳೆಸುತ್ತಿದ್ದಾರೆ. ಹಿಜಾಬ್, ಹಲಾಲ್, ಭಗವದ್ಗೀತೆ, ವ್ಯಾಪಾರ, ಮಾವಿನ ಹಣ್ಣು, ದ್ವನಿವರ್ಧಕ ಹೀಗೆ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಜನರಿಗೆ ಅರ್ಥವಾಗಿದೆ, ಜನರೇ ತಿರುಗಿ ಬೀಳ್ತಾಯಿದ್ದಾರೆ. ನಾವು ತಪ್ಪು ಮಾಡಿದವರ ಪರ ಅಲ್ಲ. ಯಾರೇ ಅಗಲಿ ಶಿಕ್ಷೆಯಾಗಬೇಕು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈತರ ಸಬಲೀಕರಣಕ್ಕಾಗಿ ಕೇಂದ್ರದ ಯೋಜನೆಗಳನ್ನು ಶ್ಲಾಘಿಸಿದ್ದ,ಪ್ರಧಾನಿ ನರೇಂದ್ರ ಮೋದಿ!

Sun Apr 10 , 2022
ಸುಗ್ಗಿಯ ಕಾಲ ಮತ್ತು ಬೈಸಾಖಿ ಹಬ್ಬಕ್ಕೆ ಮುಂಚಿತವಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ (ಏಪ್ರಿಲ್ 10) “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ” ಮತ್ತು ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿಯನ್ನು ನೀಡುತ್ತಿವೆ ಎಂದು ಹೇಳಿದರು. ರೈತರಿಗಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳ ವಿವರಗಳನ್ನು ಹಂಚಿಕೊಳ್ಳುವಾಗ ಪ್ರಧಾನಿ ಮೋದಿ ಭಾನುವಾರ ಟ್ವೀಟ್‌ನಲ್ಲಿ ಸಶಕ್ತ ರೈತರು ಸಮೃದ್ಧ ರಾಷ್ಟ್ರಕ್ಕೆ ಪ್ರಮುಖರಾಗಿದ್ದಾರೆ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ […]

Advertisement

Wordpress Social Share Plugin powered by Ultimatelysocial