ಲುಡ್ವಿಗ್ ವಾನ್ ಬೇತೋವನ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ಕಲಾವಿದ

 

 

 

ಲುಡ್ವಿಗ್ ವಾನ್ ಬೇತೋವನ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ಕಲಾವಿದರಲ್ಲೊಬ್ಬನೆಂದು ಹೆಸರಾಗಿದ್ದಾನೆ. ಆತನೊಬ್ಬ ಮಹಾನ್ ಪ್ರತಿಭಾನ್ವಿತ ವಾದ್ಯಗಾರ, ಕೃತಿ ರಚನಕಾರ ಮತ್ತಿ ಸಂಗೀತ ಸಂಯೋಜಕ.
ಬೇತೋವನ್ನನ ಶ್ರೇಷ್ಠ ಕೃತಿಗಳ ರಚನೆ ಆದದ್ದು ಆತ ಪೂರ್ತಿ ಕಿವುಡನಾದ ಮೇಲೆ. ಪರಮಭವ್ಯ ಸಂಗೀತವೊಂದು ಅದನ್ನು ಆಲಿಸಿ ಆನಂದಿಸಲಾಗದವನ ಕೊಡುಗೆ ಎಂದರೆ ತುಸು ವಿಚಿತ್ರವೆನಿಸುತ್ತದೆ. ಬೇತೋವನ್ನನ ಭೌತ ಶ್ರವಣೇಂದ್ರಿಯ ನಿಷ್ಕ್ರಿಯವಾದರೂ ಆತನ ಅಂತರಿಕ ಸಂವೇದನೆಗಳು ಸದಾ ಜಾಗೃತವಾಗಿದ್ದು, ಕೋಮಲ ಮತ್ತು ಸುಕುಮಾರ ರಚನೆಗಳು ಆತನಿಂದ ನಿರಂತರವಾಗಿ ಪ್ರಕಟವಾಗುತ್ತಲೇ ಇದ್ದುವು.
ಪಶ್ಚಿಮ ಜರ್ಮನಿಯ ಬಾನ್ ನಗರದಲ್ಲಿ ಲುಡ್ವಿಗ್ ವಾನ್ ಬೇತೋವನ್ 1770ರ ಡಿಸೆಂಬರ್ 17ರಂದು ಜನಿಸಿದ. ಇವರದು ವೃತ್ತಿ ಸಂಗೀತಗಾರರ ಮನೆತನ. ಅಜ್ಜ (ಹಿರಿಯ) ಲುಡ್ವಿಗ್ ಹೆಸರಾಂತ ಪಿಟೀಲುವಾದಕ ಮತ್ತು ಗಾಯಕ. ತಂದೆ ಯೋಹನ್ ಪಿಟೀಲು ವಾದಕ. ನಗರದ ವಾದ್ಯ ಮೇಳಗಳಲ್ಲಿ ಇವನ ಹುದ್ದೆ. ಯೋಹನ್ನನ ಹೆಂಡತಿ ಮೇರಿಯಾ. ಇವರದು ವಿಷಮ ವಿವಾಹ. ಗಂಡ ಕುಡುಕ ಮತ್ತು ಕಡು ಕೋಪಿಷ್ಠ, ದುಂದುಗಾರ, ಎಷ್ಟು ಹಣವಿದ್ದರೂ ಸಾಲದು. ಹೆಂಡತಿ ಸರಳೆ ಮತ್ತು ಸಂಕೋಚಶೀಲೆ, ಬಡತನದ ಬವಣೆಯಲ್ಲೂ ಮನೆಯ ಐಕ್ಯ ಮತ್ತು ಓರಣ ಕಾಯ್ದುಕೊಂಡಿದ್ದ ಜಾಣೆ. ಇವರ ಮಗನೇ (ಕಿರಿಯ) ಲುಡ್ವಿಗ್ ವಾನ್ ಬೇತೋವನ್. ಇವನಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅಜ್ಜ (ಹಿರಿಯ) ಲುಡ್ವಿಗ್ ತೀರಿಕೊಂಡ (1773). ಕುಡುಕ ತಂದೆ ಯೋಹನ್ನನು, ಮಗನನ್ನು ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧನಾಗಿಸಬೇಕೆಂದು ಸಂಗೀತ ಶಿಕ್ಷಣಕ್ಕಿಂತಲೂ ಹೆಚ್ಚಾಗಿ ದೈಹಿಕ ಶಿಕ್ಷೆ ನೀಡುತ್ತಿದ್ದ. ವಾಸ್ತವವಾಗಿ ಬೇತೋವನ್ ಯಾಂತ್ರಿಕ ರೀತಿಯ ಶಿಕ್ಷಣದಿಂದ ರೂಪುಗೊಂಡ ಕಲಾವಿದನಲ್ಲ. ಜನ್ಮತಃ ಪರಿಪೂರ್ಣವಾಗಿದ್ದ ಬಾಲಪ್ರತಿಭೆ. ಯೋಹನ್ನನಿಗೆ ತನ್ನ ಮಗನ ಸುಪ್ತ ಸಾಮರ್ಥ್ಯದ ಅರಿವಿತ್ತು.
ಬೆತೋವನ್ ಅಂತರ್ಮುಖಿ, ಶೀಘ್ರಕೋಪಿ, ಜನರಿಂದ ದೂರ ಇರುವ ಪ್ರವೃತ್ತಿಯವ. ಹೀಗಾಗಿ ಹಿಂಡು ಸೇರಲೊಪ್ಪದ ಈ ಬಾಲಪ್ರತಿಭೆ ತನ್ನ ಸ್ವಭಾವ ತೋರಿದ ಹಾದಿಯಲ್ಲಿ ಒಂಟಿಯಾಗಿಯೇ ಸಾಗುವುದು ಅನಿವಾರ್ಯವಾಯಿತು. ಐದನೆಯ ವರ್ಷದಿಂದ ಇವನಿಗೆ ಪಿಯಾನೊ ಮತ್ತು ಪಿಟೀಲು ಶಿಕ್ಷಣ ಆರಂಭವಾಯಿತು. ತಂದೆಯೇ ಮೊದಲ ಗುರು. ಆದರೆ ಇಬ್ಬರದೂ ಸಾಂಪ್ರದಾಯಿಕವಾಗಿ ಯಾವುದನ್ನೂ ನಡೆಯಗೊಡದ ಸ್ವಭಾವ. ಮಗನಿಗೆ ವಯಸ್ಸು ಎಂಟಾಗಿದ್ದಾಗ (1778) ಇವನನ್ನು ರಂಗ ಪ್ರವೇಶಗೊಳಿಸಲು ಯೋಹನ್ ಪ್ರಯತ್ನಿಸಿದ. ಯಶಸ್ಸು ಗಳಿಸಲಿಲ್ಲ. ಏತನ್ಮಧ್ಯೆ ಬೇರೆ ಶಿಕ್ಷಕರ ಜೊತೆ ಪಿಟೀಲು, ವಯೊಲಾ ಮತ್ತು ಪಿಯಾನೊ ವಾದ್ಯಗಳಲ್ಲಿ ಪಾಠ ಮುಂದುವರಿಯಿತು. ಎಳೆವಯಸ್ಸಿನಲ್ಲೇ ಸಂಗೀತಕೃತಿ ರಚಿಸಿದ. ಸಾಂಪ್ರದಾಯಿಕ ಶಿಕ್ಷಣ ಇವನಿಗೆ ಅಪಥ್ಯವಾಗಿತ್ತು. ಶಾಲೆಯಲ್ಲಿ ಕಲಿತದ್ದು ಅತ್ಯಲ್ಪ-ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಒಂದಿಷ್ಟು ಪ್ರವೇಶ ಮಾತ್ರವಿತ್ತು. ಬೆತೋವನ್ ಆರ್ಗನ್ ವಾದ್ಯದಿಂದ ಆಕರ್ಷಿತನಾದ. ಇವನಿಗೆ ಆರ್ಗನ್ ವಾದ್ಯ ಕಲಿಸಿದ ಗುರು ಕ್ರಿಶ್ಚಿಯನ್ ಗಾಟ್ಲೊಬ್ ನೀಫೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜಕುಮಾರ್.

Thu Dec 22 , 2022
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅಪ್ಪು ಅಭಿಮಾನಿ ಸಂಘಗಳು ಸರಕಾರಕ್ಕೂ ಪತ್ರ ಬರೆದಿದ್ದವು. ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದವು. ಅಭಿಮಾನಿಗಳಿಗೆ ಸಿಹಿ ಸುದ್ದಿ ಅಂದರೆ, ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ ನಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ. ಪತ್ರಕರ್ತ ಡಾ.ಶರಣು […]

Advertisement

Wordpress Social Share Plugin powered by Ultimatelysocial