ಎಮ್.ಆರ್.ಪಾಟೀಲ್ ಅವರು ಓರ್ವ ನಿಷ್ಠಾವಂತ, ಕ್ರಿಯಾಶೀಲ, ಸಮರ್ಥ ನಾಯಕ!

ಹುಬ್ಬಳ್ಳಿ: ಎಮ್.ಆರ್.ಪಾಟೀಲ್ ಯಾವುದೇ ಎಮ್.ಎಲ್.ಎ ಇಲ್ಲದೇ ನೂರಾರು ಕೋಟಿ ರೂಪಾಯಿ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ. ಇನ್ನು ಅವರು ಶಾಸಕರಾದರೇ ಯಾವ ಮಟ್ಟದ ಕೆಲಸವನ್ನು ಮಾಡಬಾರದು ಎಂಬುದನ್ನು ಜನರು ಅರಿತುಕೊಂಡು, ಈ ಬಾರಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರಿಗೆ ಮತ ನೀಡಿ ಆರಿಸಿ ತಂದಿದ್ದೆ ಆದಲ್ಲಿ ರಾಜ್ಯದಲ್ಲಿ ನಂಬರ್ ಒನ್ ಮಾದರಿ ಕ್ಷೇತ್ರವನ್ನಾಗಿ ಮಾಡುವುದು ಖಚಿತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಅಂಚಟಗೇರಿ ಗ್ರಾಮದಲ್ಲಿ ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಎಮ್.ಆರ್.ಪಾಟೀಲ ಅವರ ಪರವಾಗಿ ಪ್ರಚಾರ ರ‍್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರದ ಜನರ ಆರ್ಶೀವಾದದಿಂದ ಇಂದು ಕೇಂದ್ರದ ಮಂತ್ರಿಯಾಗಿದ್ದೇನೆ. ‌ನನ್ನ ಬಳಿ ಶಾಸಕರು, ಸಚಿವರು ಬಂದು ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಿಸಿಕೊಳ್ಳಲು ಬರತ್ತಾರೆ. ಆದರೆ ಎಮ್.ಆರ್.ಪಾಟೀಲ ಯಾವುದೇ ಎಮ್.ಎಲ್.ಎ ಇರಲಿಲ್ಲ. ಆದರೂ ಅವರು ಕುಂದಗೋಳ ಕ್ಷೇತ್ರದ ಅಭಿವೃದ್ಧಿಗೆ ಅತಿಹೆಚ್ಚು ನನ್ನ ಮನೆ, ಕಚೇರಿಗೆ ಓಡಾಡಿದ್ದಾರೆ. ಎಮ್.ಆರ್.ಪಾಟೀಲ್ ಅವರಂತಹ ಎಮ್.ಎಲ್.ಎ ಇದ್ದರೇ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೆಲಸ ಮಾಡಲು ಕಷ್ಟವಾಗುವುದಿಲ್ಲ. ಏಕೆಂದರೆ ಸ್ಥಳೀಯ ಕೆಲಸವನ್ನು ಇವಂತಹ ಅಭ್ಯರ್ಥಿಗಳು ಹೊಡೆದು ಹಾಕತ್ತಾರೆ ಎಂದರು.

ಎಮ್.ಆರ್.ಪಾಟೀಲ್ ಅವರು ಓರ್ವ ನಿಷ್ಠಾವಂತ, ಕ್ರಿಯಾಶೀಲ, ಸಮರ್ಥ ನಾಯಕ ಅವರಿಗೆ ಈ ಹಿಂದೆಯೇ ಟಿಕೆಟ್ ಸಿಗಬೇಕಿತ್ತು. ಶಾಸಕರಾಗಬೇಕಿತ್ತು. ಆದರೆ ಕೆಲವು ಜನರಿಗೆ ತಮ್ಮ ಟಿಕೆಟ್ ಬಿಟ್ಟು ಕೊಟ್ಟು ಕೊಟ್ಟು ಇದೀಗ ಅವರಿಗೆ ಪಕ್ಷ ಗುರುತಿಸಿ ಟಿಕೆಟ್ ನೀಡಿದೆ. ಇಂತಹ ಸಂದರ್ಭಗಳಲ್ಲಿ ನಿರಂತರವಾಗಿ ಸೋಲು ಕಂಡು ಇದೀಗ ಎಮ್.ಆರ್‌.ಪಾಟೀಲ ಅವರನ್ನು ಸೋಲಿಸಲು ಸ್ಪರ್ಧೆಗೆ ಇಳಿದಿರುವವರಿಗೆ ಮತ ಹಾಕಿದರೇ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಂತೆ ಎಂದು ಪರೋಕ್ಷವಾಗಿ ಮಾಜಿ ಶಾಸಕ‌ ಎಸ್.ಐ.ಚಿಕ್ಕನಗೌಡ್ರ ಅವರಿಗೆ ತಿವಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಡಾನ್ ಸಂಘರ್ಷದಲ್ಲಿ ಮೃತರ ಸಂಖ್ಯೆ 528ಕ್ಕೇರಿಕೆ: 4500 ಜನರಿಗೆ ಗಾಯ

Sun Apr 30 , 2023
  ಕದನವಿರಾಮದ ಮಧ್ಯೆಯೂ ಸುಡಾನ್​ನ ಕೆಲ ಪ್ರದೇಶಗಳಲ್ಲಿ ಮಾರಣಾಂತಿಕ ಹೋರಾಟ ಮುಂದುವರೆದಿದೆ. ಸೇನೆ ಮತ್ತು ಅರೆಸೇನಾಪಡೆಗಳ ಮಧ್ಯೆ ಮೂರು ವಾರಗಳಿಂದ ನಡೆಯುತ್ತಿರುವ ಸಶಸ್ತ್ರ ಹೋರಾಟದಲ್ಲಿ ಈವರೆಗೆ 528 ಜನ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಖಾರ್ಟೂಮ್ (ಸುಡಾನ್) : ಸುಡಾನ್ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವಿನ ಮಾರಣಾಂತಿಕ ಘರ್ಷಣೆಯಲ್ಲಿ ಕನಿಷ್ಠ 528 ಜನರು ಸಾವನ್ನಪ್ಪಿದ್ದಾರೆ ಮತ್ತು 4,599 ಜನರು ಗಾಯಗೊಂಡಿದ್ದಾರೆ ಎಂದು ಸುಡಾನ್ ಆರೋಗ್ಯ ಸಚಿವಾಲಯ […]

Advertisement

Wordpress Social Share Plugin powered by Ultimatelysocial