ನಾಯಿ ಕಚ್ಚಿ 1 ತಿಂಗಳಲ್ಲಿ ಯುವತಿ ಸಾವು

 

ಪಾಲಕ್ಕಾಡ್(ಜು.01) ಬೀದಿ ನಾಯಿಗಳ (Stray Dogs) ಹಾವಳಿ ಎಲ್ಲಾ ಕಡೆಯಲ್ಲೂ ಇದ್ದದ್ದೇ. ಬೀದಿ ನಾಯಿ ದಿನಾ ಇರೋದೆ ಇದು ಅಂತ ನಿರ್ಲಕ್ಷ್ಯ ಮಾಡಲೇಬೇಡಿ. ಬೆಚ್ಚಿಬೀಳಿಸುವ ಘಟನೆಯೊಂದು ಕೇರಳದಲ್ಲಿ ವರದಿಯಾಗಿದೆ. ಹೌದು. ನಾಯಿ ಕಡಿತಕ್ಕೊಳಗಾದ (Dog Bite) ಒಂದೇ ತಿಂಗಳಿಗೆ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ (Kerala) ವರದಿಯಾಗಿದೆ.
ಕೇರಳದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಯಿ ಕಚ್ಚಿ ರೇಬಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಒಂದು ತಿಂಗಳ ನಂತರ ಜೂನ್ 30 ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾಳೆ. ಪಾಲಕ್ಕಾಡ್ (Palakkad) ಜಿಲ್ಲೆಯ ಮಂಕರ ಪ್ರದೇಶದಲ್ಲಿ ವಾಸಿಸುತ್ತಿದ್ದ ಶ್ರೀಲಕ್ಷ್ಮಿ (18) ಮೇ 30 ರಂದು ಕಾಲೇಜಿಗೆ (College) ತೆರಳುತ್ತಿದ್ದಾಗ ನಾಯಿ ಕಚ್ಚಿತ್ತು. ಅವಳು ಕೊಯಮತ್ತೂರಿನ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ (BCA) ಓದುತ್ತಿದ್ದಳು. ಅಲ್ಲಿ ಅವಳು ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಳು.
ಸಾಯುವ ಎರಡು ದಿನ ಮೊದಲು ಕಾಣಿಸಿಕೊಂಡ ರೇಬೀಸ್ ಲಕ್ಷಣ
ಆಯಂಟಿ ರೇಬಿಸ್ ಲಸಿಕೆಯನ್ನು ನಾಲ್ಕು ಬಾರಿ ತೆಗೆದುಕೊಂಡ ನಂತರ, ಶ್ರೀಲಕ್ಷ್ಮಿ ಅವರಿಗೆ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಸಾಯುವ ಎರಡು ದಿನಗಳ ಮೊದಲು ಆಕೆ ರೋಗಲಕ್ಷಣಗಳನ್ನು ತೋರಿಸಲಾರಂಭಿಸಿದಳು. ಮೊದಲು ಪಾಲಕ್ಕಾಡ್‌ನ ಮಂಕರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಚಿಕಿತ್ಸೆ ನೀಡುತ್ತಿರುವಾಗಲೇ ಸಾವು
ನಂತರ ತೀವ್ರ ಜ್ವರದಿಂದ ಬಳಲುತ್ತಿದ್ದ ಆಕೆಯನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಆಕೆಗೆ ರೇಬಿಸ್‌ನ ಎಲ್ಲಾ ಲಕ್ಷಣಗಳಿವೆ ಎಂದು ಆಸ್ಪತ್ರೆಯವರು ತಿಳಿಸಿದ್ದು, ಅದಕ್ಕೆ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ, ಜೂನ್ 30 ರಂದು ಶ್ರೀಲಕ್ಷ್ಮಿ ನಿಧನರಾದರು.
ವರದಿಗಳ ಪ್ರಕಾರ, ಮೇ 29 ರಂದು ನಾಯಿ ತನ್ನ ಮಾಲೀಕರಿಗೆ ಕಚ್ಚಿದೆ. ದು ದಿನದ ನಂತರ ಶ್ರೀಲಕ್ಷ್ಮಿಯನ್ನು ಕಚ್ಚಿದೆ. ಮಾಲೀಕರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕಾಸರಗೋಡು ಜಿಲ್ಲೆಯ 7 ವರ್ಷದ ಬಾಲಕನ ಮರಣವು ರೇಬೀಸ್‌ನಿಂದ ಸಾವನ್ನಪ್ಪಿದವರ ಬಗ್ಗೆ ಅಧ್ಯಯನದ ಬೇಡಿಕೆಗೆ ಕಾರಣವಾಯಿತು. ವಿಶೇಷವಾಗಿ ಲಸಿಕೆ ಹಾಕಿಸಿಕೊಂಡ ಜನರಲ್ಲಿ ಇದು ಕಾಣಿಸಿಕೊಂಡಿತು. ಈ ಪ್ರಕರಣದಲ್ಲಿ 7 ವರ್ಷದ ಬಾಲಕ ಬೀದಿ ನಾಯಿ ಕಚ್ಚಿದ ನಂತರ ರೇಬೀಸ್ ಲಸಿಕೆಯನ್ನು ಮೊದಲ ಡೋಸ್ ತೆಗೆದುಕೊಂಡಿದ್ದನು ಆದರೆ ಮೂರು ವಾರಗಳ ನಂತರ ಸಾವನ್ನಪ್ಪಿದ್ದಾನೆ.
ರೇಬೀಸ್ ವೈರಸ್ ಲಿಸ್ಸಾವೈರಸ್ ಫ್ಯಾಮಿಲಿಗೆ ಸೇರಿದೆ. ರೇಬೀಸ್-ಸೋಂಕಿತ ಪ್ರಾಣಿಗೆ ಒಡ್ಡಿಕೊಂಡ ನಂತರ ಆಂಟಿ-ರೇಬೀಸ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತದೆ. ಇದನ್ನು ನಾಲ್ಕು ಡೋಸ್‌ಗಳಲ್ಲಿ ಕೆಲವು ವಾರಗಳ ಅವಧಿಯಲ್ಲಿ ನೀಡಲಾಗುತ್ತದೆ. ಯಾರಿಗಾದರೂ ಸೋಂಕಿತ ಪ್ರಾಣಿ ಕಚ್ಚಿದಾಗ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳೆಂದರೆ ಟೆಟನಸ್ ಟಾಕ್ಸಾಯ್ಡ್ ಚುಚ್ಚುಮದ್ದನ್ನು ನೀಡಿದ ನಂತರ ಸೋಪ್ ಮತ್ತು ನೀರಿನಿಂದ ಗಾಯವನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸುವುದು. ಇದರ ನಂತರ ಲಸಿಕೆ ನೀಡಲಾಗುತ್ತದೆ.
ಜೂನ್ 18 ರಂದು ಇಡುಕ್ಕಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ರೇಬಿಸ್‌ನಿಂದ ಸಾವನ್ನಪ್ಪಿದ್ದರು. ಆಕೆಯನ್ನು ತೆಕ್ಕಿಂತಂಡು ನಿವಾಸಿ ತೊಟ್ಟಕ್ಕಾಟ್ ಓಮನಾ (65) ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ಓಮನಾಗೆ ಬೀದಿನಾಯಿ ಕಚ್ಚಿದ್ದು, ಮನೆಯವರಿಗೆ ಮಾಹಿತಿ ನೀಡಿಲ್ಲ ಅಥವಾ ರೇಬಿಸ್ ಲಸಿಕೆ ಹಾಕಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ನೀಡಿದರೂ ಜೀವ ಉಳಿಯುತ್ತಿಲ್ಲ
ಆಕೆಯನ್ನು ಇಡುಕ್ಕಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಅಧಿಕಾರಿಗಳು ಲಸಿಕೆಯನ್ನು ನೀಡಿದರು ಆದರೆ ಆಕೆಗೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ, ಆಕೆ ತೀರಿಹೋದಳು.
ಮರಣೋತ್ತರ ಪರೀಕ್ಷೆಯ ನಂತರ ಆದಿಮಲಿ ಸಮೀಪದ ಕೂಂಪನ್‌ಪಾರಾದಲ್ಲಿರುವ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಓಮನ ಅವರ ಪತಿ ಶಂಕರ್ ಮತ್ತು ಮಗಳು ರಾಧಾ ಅವರನ್ನು ವೀಕ್ಷಣೆಗೆ ಸ್ಥಳಾಂತರಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

Fri Jul 1 , 2022
ಕೊಡಗು: ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮತ್ತೆ ಸಂಭವಿಸಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ ರಾತ್ರಿ 1 ರಿಂದ 1.40ರ ಅವಧಿಯಲ್ಲಿ ಸಂಪಾಜೆ, ಪೆರಾಜೆ, ಗೂನಡ್ಕ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಒಂದೇ ವಾರದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಶುಕ್ರವಾರ ತಡರಾತ್ರಿ ಭೂಕಂಪನದ ಅನುಭವವಾಗಿರುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಬಂದಿದೆ. ಇದನ್ನು ಪರಿಶೀಲಿಸಿದಾಗ […]

Advertisement

Wordpress Social Share Plugin powered by Ultimatelysocial