ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ?:

ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಈಗ ಸಂಪುಟ ಪುನರ್ರಚನೆಯ ಗುಸುಗುಸು ದಟ್ಟವಾಗಿ ಕೇಳಿಬರುತ್ತಿದೆ. ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಉಕ್ಕು ಖಾತೆಯ ಸಚಿವರ ಸ್ಥಾನ ಬದಲಾಗಬಹುದು ಎಂಬ ವದಂತಿ ದಟ್ಟವಾಗಿ ಹರಡಿದೆ. ಜನವರಿ 31ಕ್ಕೆ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು ಅದಕ್ಕೆ ಮುನ್ನ ಅಥವಾ ಮೊದಲ ಹಂತದ ಬಜೆಟ್ ಅಧಿವೇಶನ ಮುಗಿಯುವ ಫೆಬ್ರವರಿ 10ರಂ ನಂತರ ಸಚಿವ ನವದೆಹಲಿ: ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಈಗ ಸಂಪುಟ ಪುನರ್ರಚನೆಯ ಗುಸುಗುಸು ದಟ್ಟವಾಗಿ ಕೇಳಿಬರುತ್ತಿದೆ.
ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಉಕ್ಕು ಖಾತೆಯ ಸಚಿವರ ಸ್ಥಾನ ಬದಲಾಗಬಹುದು ಎಂಬ ವದಂತಿ ದಟ್ಟವಾಗಿ ಹರಡಿದೆ. ಜನವರಿ 31ಕ್ಕೆ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು ಅದಕ್ಕೆ ಮುನ್ನ ಅಥವಾ ಮೊದಲ ಹಂತದ ಬಜೆಟ್ ಅಧಿವೇಶನ ಮುಗಿಯುವ ಫೆಬ್ರವರಿ 10ರಂ ನಂತರ ಸಚಿವ ಸಂಪುಟ ಪುನರ್ರಚನೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಜನವರಿ 31ಕ್ಕೆ ಬಜೆಟ್ ಅಧಿವೇಶನ: ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುವುದು ಜನವರಿ 31ಕ್ಕೆ, ಫೆಬ್ರವರಿ 1ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಜನವರಿ 16-17ರಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುತ್ತಿದ್ದಾರೆ.
ಈ ಬಾರಿ ಕೇಂದ್ರ ಸಂಪುಟಕ್ಕೆ ಕೆಲವು ಹೊಸ ಮುಖಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಇನ್ನು ಕೆಲವು ಹಳಬರಿಗೆ ಹೊಸ ಜವಾಬ್ದಾರಿಗಳನ್ನು ಸಂಪುಟದಲ್ಲಿ ಅಥವಾ ಸಂಘಟನೆಯ ಒಳಗೆ ನೀಡುವ ಸಾಧ್ಯತೆಯಿದೆ. ಅಂತೂ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ, ಬೆಳವಣಿಗೆಗಳು ನಡೆಯಲಿವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ಪ್ರಸ್ತುತ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿರ್ವಹಿಸುತ್ತಿದ್ದರೆ ಉಕ್ಕು ಖಾತೆಯನ್ನು ಜ್ಯೋತಿರಾಧಿತ್ಯ ಸಿಂಧಿಯಾ ವಹಿಸಿಕೊಂಡಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಜವಳಿ ಖಾತೆಗೆ ಸಹ ಹೊಸ ಸಚಿವರ ನೇಮಕವಾಗಬಹುದು. ಪ್ರಸ್ತುತ ಅದು ಪಿಯೂಷ್ ಗೋಯಲ್ ನಿರ್ವಹಣೆಯಲ್ಲಿದೆ. ಕಲ್ಲಿದ್ದಲು ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಗೆ ಸಹ ಹೊಸ ಮುಖಗಳು ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.
ಈ ಖಾತೆಯನ್ನು ಹಿಂದೆ ಮುಖ್ತಾರ್ ಅಬ್ಬಾಸ್ ನಖ್ವಿ ವಹಿಸಿಕೊಂಡಿದ್ದರು. ಹೊಸ ಮುಖಗಳಲ್ಲಿ ಈಗ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರುಗಳು ಗುಜರಾತ್ ನ ಸಿ ಆರ್ ಪಾಟೀಲ್. ಸಿ ಆರ್ ಪಾಟೀಲ್ ಮತ್ತು ಧರ್ಮೇಂದ್ರ ಪ್ರದಾನ್ ಅವರ ಹೆಸರುಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಜೆ ಪಿ ನಡ್ಡಾ ಅವರ ಅಧಿಕಾರಾವಧಿ ಮುಗಿದ ನಂತರದಲ್ಲಿ ಕೇಳಿಬರುತ್ತಿರುವ ಹೆಸರುಗಳು. ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿ ಪಕ್ಷವನ್ನು ಮುನ್ನಡೆಸುತ್ತಿರುವ ಚಿರಾಗ್ ಪಾಸ್ವಾನ್ ಅವರಿಗೆ ಸಹ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲು ಮತ್ತು ದೆಹಲಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಪರಾಜಯ ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ, ರಾಜಸ್ತಾನ, ಛತ್ತೀಸ್ ಗಢ ಮತ್ತು ತೆಲಂಗಾಣಗಳಲ್ಲಿ ಸಹ ನಂತರದ ದಿನಗಳಲ್ಲಿ ಚುನಾವಣೆ ಬರಲಿದೆ. ಈ ರಾಜ್ಯಗಳ ಸಂಸದರಿಗೆ ಸಹ ಕೇಂದ್ರ ಸಂಪುಟದಲ್ಲಿ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಾಗಿವೆ. ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ ಕೆಲವೊಮ್ಮೆ ಸಚಿವರುಗಳನ್ನು ಅಚ್ಚರಿಯ ರೀತಿಯಲ್ಲಿ ತೆಗೆದುಹಾಕಲಾಗುತ್ತದೆ ಮತ್ತು ಸೇರಿಸಲಾಗುತ್ತದೆ. ಖಾತೆಗಳ ಮರುಹಂಚಿಕೆ, ಬದಲಾವಣೆಗಳಿಗೆ ಸಹ ಆಗಾಗ ಸುದ್ದಿಯಾಗುತ್ತದೆ. ಕಳೆದ ಬಾರಿ ಪ್ರಕಾಶ್ ಜಾವಡೇಕರ್ ಮತ್ತು ರವಿಶಂಕರ್ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಟ್ಟು ಮಾಜಿ ಐಎಎಸ್ ಅಧಿಕಾರಿ ಅಶ್ವಿನ್ ವೈಷ್ಣವ್ ಅವರಿಗೆ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ನೀಡಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೆಟ್ಟರ್ ಜೊತೆ ಬೇರೆ ಶಾಸಕರಿಗೂ ವೇದಿಕೆಯಲ್ಲಿ ಅವಕಾಶ ಇರಲಿಲ್ಲ

Thu Jan 12 , 2023
ರಾಷ್ಟ್ರೀಯ ಯುವಜನೋತ್ಸವಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮೋದಿ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ನೋಂದಣಿಯಾಗಿದೆ. ಯಾರೇ ಬಂದರೂ ಒಳಗೆ ಬಿಡುವುದಕ್ಕೆ ಹೇಳಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ನಗರದಲ್ಲಿಂದು ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜಿಮ್ ಖಾನಾ ಕ್ಲಬ್ ನಲ್ಲಿ ಎಲ್.ಇ.ಡಿ‌ ವ್ಯವಸ್ಥೆ ಮಾಡಲಾಗಿದೆ ಭೂತೋ ನ ಭವಿಷ್ಯತಿ ಅನ್ನೋ ರೀತಿಯಲ್ಲಿ ವ್ಯವಸ್ಥೆಯಾಗಿದೆ. ಲಕ್ಷಾಂತರ ಜ‌ನ ಬರುತ್ತಿದ್ದಾರೆ  ಪ್ರಧಾನಿಗಳು ಬರುತ್ತಿರುವುದು ಜ‌ನತೆಯ ಸಂತೋಷಕ್ಕೆ ಕಾರಣವಾಗಿದೆ ಎಂದರು.ರೋಡ್ […]

Advertisement

Wordpress Social Share Plugin powered by Ultimatelysocial