MARKET:ಬೆಂಗಳೂರಲ್ಲಿ Corona ಅಟ್ಟಹಾಸ;

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೆ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳೆದೆರೆಡು ದಿನಗಳಿಂದ ನಿತ್ಯ 10 ಸಾವಿರಕ್ಕೂ ಹೆಚ್ಚು ಪಾಸಿಟಿವ್​​ ಪ್ರಕರಣಗಳು ವರದಿಯಾಗುತ್ತಿದೆ. ಬೆಂಗಳೂರು ನಗರವನ್ನು ಒಂದು ರಾಜ್ಯಕ್ಕೆ  ಸಮನಾಗಿ ಪರಿಗಣಿಸಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್​  ಈಗಾಗಲೇ ಹೇಳಿದ್ದಾರೆ.
ಬಿಬಿಎಂಪಿ ಕೂಡ ಸೋಂಕಿನ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ನಿನ್ನೆಯಷ್ಟೇ ಸಿಎಂ ನೇತೃತ್ವದ ನಡೆದ ಸಭೆಯಲ್ಲಿ ಜನವರಿ 31ರವರೆಗೆ ನೈಟ್​​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಖಾಸಗಿ ಕೋವಿಡ್​ ಕೇರ್​ ಸೆಂಟರ್​ ಗಳಲ್ಲಿ ಕೋವಿಡ್​ ಚಿಕಿತ್ಸೆ ದರವನ್ನೂ ನಿಗದಿ ಮಾಡಲಾಗಿದೆ. ಇಂದು ನಗರದ ದೊಡ್ಡ ಮಾರುಕಟ್ಟೆಗಳ ಸ್ಥಳಾಂತರ ಹಾಗೂ ಚಿತಾಗಾರಗಳನ್ನು ವಿಂಗಡನೆ ಮಾಡಲಾಗಿದೆ.

ದೊಡ್ಡ ದೊಡ್ಡ ಮಾರುಕಟ್ಟೆಗಳು ಸ್ಥಳಾಂತರ
ಇನ್ನು ನಿನ್ನೆ ತಜ್ಞರ ಹಾಗೂ ಅಧಿಕಾರಿಗಳ ಸಿಎಂ ಸಭೆ ಬಳಿಕ ಮಾರುಕಟ್ಟೆಗಳನ್ನು ವಿಶಾಲವಾದ ಜಾಗಗಳಿಗೆ ಸ್ಥಳಾಂತರಿಸಲು ಅಧಿಕೃತ ಸೂಚನೆ ನೀಡಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರದ ಎಲ್ಲಾ ಮಾರುಕಟ್ಟೆಗಳನ್ನು ತೆರೆದ ಜಾಗಗಳಿಗೆ ಶಿಫ್ಟ್ ಮಾಡಲು ಸೂಚನೆ ನೀಡಿದ್ದಾರೆ. ಅಗಲವಾದ ರಸ್ತೆ, ತೆರೆದ ಮೈದಾನ ಮುಂತಾದ ಕಡೆಗೆ ಸ್ಥಳಾಂತರಿಸಲು ಆದೇಶಿದಲಾಗಿದೆ.

ಕೋವಿಡ್​​ಗಾಗಿ ಪ್ರತ್ಯೇಕ ಚಿತಾಗಾರಗಳು ನಿಗದಿ
ಮೂರನೇ ಅಲೆ ಆರಂಭದಲ್ಲೇ ಪಾಲಿಕೆಯಿಂದ ವಿದ್ಯುತ್ ಚಿತಾಗಾರ ಕೂಗ ನಿಗದಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾದಿಂದ ಮರಣ ಹೊಂದುವವರಿಗೆ ಒಟ್ಟು 8 ಚಿತಾಗಾರಗಳನ್ನು ಪಾಲಿಕೆ ನಿಗದಿ ಮಾಡಿದೆ. ಪಾಲಿಕೆಯ 12 ರುದ್ರಭೂಮಿಗಳ ಪೈಕಿ 7 ಚಿತಾಗಾರ ಕೊರೋನಾಗೆ ಮೀಸಲಿಸಲಾಗಿದೆ. ಎಮ್‌ಎಸ್ ಪಾಳ್ಯ ಚಿತಾಗಾರ, ಕೂಡ್ಲು ಕೇಂದ್ರ ಚಿತಾಗಾರ, ಪಣತ್ತೂರು ಚಿತಾಗಾರ, ಕೆಂಗೇರಿ ಹಿಂದೂ ರುಧ್ರಭೂಮಿ, ಸುಮ್ಮನಹಳ್ಳಿ ಚಿತಾಗಾರ, ಪೀಣ್ಯ ಚಿತಾಗಾರ ಹಾಗೂ ಬನಶಂಕರಿ ಚಿತಾಗಾರ ಕೋವಿಡ್​​ ಗೆ ಮೀಸಲಿರಲಿವೆ.

ಮೆಟ್ರೋದಲ್ಲೂ ನಿಂತು ಪ್ರಯಾಣಿಸುವಂತಿಲ್ಲ..
ಬಿಎಂಟಿಸಿ ಮಾದರಿಯನ್ನೇ ನಮ್ಮ ಮೆಟ್ರೋ ಕೂಡ ಅನುಸರಿಸಿದೆ. ಮೆಟ್ರೋ ರೈಲಿನಲ್ಲಿ ಎಷ್ಟು ಆಸನ ವ್ಯವಸ್ಥೆ ಇದೆಯೋ ಅಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ. ಅಂದರೆ ಮೆಟ್ರೋದಲ್ಲೂ ಯಾರೂ ನಿಂತು ಪ್ರಯಾಣಿಸುವಂತಿಲ್ಲ ನಮ್ಮ ಮೆಟ್ರೋ ಅಧಿಕೃತ ಆದೇಶ ಹೊರಡಿಸಿದೆ. ಜನರು ನಿಂತುಕೊಂಡು ಪ್ರಯಾಣ ಮಾಡಲು ಅವಕಾಶವಿಲ್ಲ. ವೀಕೆಂಡ್ ಕರ್ಫ್ಯೂ ವೇಳೆ ರೈಲು ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ವೀಕೆಂಡ್ ಕರ್ಫ್ಯೂ ವೇಳೆ 20 ನಿಮಿಷಕ್ಕೊಂದು ಮೆಟ್ರೋ ಸೇವೆ ಇರುತ್ತಿತ್ತು. ಇದೀಗ ವೀಕೆಂಡ್ ಕರ್ಫ್ಯೂ ವೇಳೆ ಪ್ರತಿ 30 ನಿಮಿಷಕ್ಕೊಂದು ಸೇವೆ ಒದಗಿಸಲು ನಿರ್ಧಾರಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕೃತ ಆದೇಶದಲ್ಲಿ ತಿಳಿಸಿದೆ.

ಕೊರೊನಾ ಕೈಪಿಡಿ ತರಲಿರುವ ಬಿಬಿಎಂಪಿ

ಕೊರೊನಾ‌ ಮೂರ‌ನೇ ಅಲೆಯಲ್ಲಿ ಸೋಂಕು ಹೆಚ್ಚಳ ಆಗುತ್ತಿರುವ ಹಿನ್ನೆಲೆ, ಜನರಲ್ಲಿ ಅರಿವು ಮೂಡಿಸಲು ಬಿಬಿಎಂಪಿ ಇಂದು ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ಸೋಂಕಿನ ರೀತಿ ರಿವಾಜುಗಳ ಬಗ್ಗೆ ಕೈಪಿಡಿ ತಯಾರಿಸಲಿದೆ. ಜನರಿಗೆ ಅರಿವು ಮೂಡಿಸುವ ಸಲುವಾಗಿ ಕೈಪಿಡಿಯನ್ನು ತರಲು ಪಾಲಿಕೆ ಮುಂದಾಗಿದೆ. ಗುಣ ಲಕ್ಷಣಗಳು, ಟೆಸ್ಟಿಂಗ್, ಹೋಮ್ ಐಸೋಲೇಷನ್ ಇತ್ಯಾದಿ ವಿಚಾರಗಳನ್ನು ಒಳಗೊಂಡಿರುವ ಹ್ಯಾಂಡ್ ಬುಕ್ ರೆಡಿಯಾಗುತ್ತಿದೆ. ಒಟ್ಟು 14 ಪುಟಗಳನ್ನು ಹೊಂದಿರುವ ಕೈಪಿಡಿಯಲ್ಲಿ ಕೊರೊನಾ ಬಗ್ಗೆ ಸಂಪೂರ್ಣ ಮಾಹಿತಿ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಜನರಿಗೆ ಕೈಪಿಡಿ ಬಿಬಿಎಂಪಿ ಹಂಚಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

bollywood:ಸಲ್ಮಾನ್‌ ಖಾನ್ ಹೊಸ ಗರ್ಲ್‌ ಫ್ರೆಂಡ್;

Wed Jan 12 , 2022
ಸದ್ಯಕ್ಕೆ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ ಇದು. ಬಾಲಿವುಡ್‌ನ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್ ಅಂದರೆ ಅದು ಸಲ್ಮಾನ್‌ ಖಾನ್. ಹಾಗಾಗಿ ಸಲ್ಲು ಜೊತೆಗೆ ಯಾರ ಹೆಸರು ಕೇಳಿ ಬಂದರೂ ಕೂಡ, ಎಲ್ಲರ ಚಿತ್ತ ಸಲ್ಲು ಲವ್‌ ಕಹಾನಿಯತ್ತ ಸಾಗುತ್ತದೆ. ಈಗ ಸಲ್ಮಾನ್ ಖಾನ್‌ ಜೊತೆಗೆ ಸಮಂತಾ ಹೆಸರು ಕೇಳಿ ಬಂದಿದೆ. ಆದರೆ ಅದು ಸೌತ್ ನಟಿ ಸಮಂತಾ ರುತ್ ಪ್ರಭು ಅಲ್ಲ ಹಾಲಿವುಡ್‌ನ ಸಮಂತಾ ಲಾಕ್ವೂಡ್. ಸಲ್ಮಾನ್‌ ಖಾನ್‌ […]

Advertisement

Wordpress Social Share Plugin powered by Ultimatelysocial