ಮಗಳು ಕಾಣೆ ಯಾಗಿದ್ದಾಳೆ ಎಂದು ಕಂಪ್ಲೈಂಟ್ ಕೊಟ್ಟ ತಂದೆ, ಆದ್ರೆ ಆಗಿದ್ದು ಬೇರೆ .

ಬಿಹಾರ: ನನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ತಂದೆಗೆ ಶಾಕ್​ ಎದುರಾಗಿದೆ. ಆತನ ದೂರಿನ ಅನ್ವಯ ಪೊಲೀಸರು ಕಿಡ್ನ್ಯಾಪ್ ಕೇಸ್ ಎಫ್‌ಐಆರ್ ದಾಖಲಿಸಿದ್ದರು. ಅತ್ತ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದ್ದರೆ, ಇತ್ತ ಯುವತಿ ತನಗೆ ಮದುವೆಯಾಯ್ತು ಎಂದು ತನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾಳೆ.ಮಗಳ ವಿಡಿಯೋ ನೋಡಿದ ಆಕೆಯ ಕುಟುಂಬದವರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲ, ‘ನಮಗೆ ತೊಂದರೆ ಕೊಡಬೇಡಿ ಅಪ್ಪ’ ಎಂದು ಮನವಿಯನ್ನೂ ಮಾಡಿದ್ದಾಳೆ. ನಿಜವಾಗಿಯೂ ಮದುವೆಯಾಗಿದ್ದೇನೆ ಮತ್ತು ನಾವಿಬ್ಬರು ಖುಷಿಯಾಗಿರುತ್ತೇವೆ ಎಂದು ತಿಳಿಸಲು ತನ್ನ ಪತಿಯನ್ನು ಸಹ ವಿಡಿಯೋದಲ್ಲಿ ತೋರಿಸಿದ್ದಾಳೆ. ಯುವತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತಂದೆ ನೀಡಿರುವ ಅಪಹರಣದ ದೂರನ್ನು ಯುವತಿ ತಳ್ಳಿ ಹಾಕಿದ್ದು, ತನಗೆ ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆವೈರಲ್ ವಿಡಿಯೋ ಆಧಾರದ ಮೇಲೆ ಯುವತಿ ಮಲಿಕ್‌ಪುರ ಮೂಲದವಳು ಎಂದು ತಿಳಿದು ಬಂದಿದೆ. ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆಕೆಯ ತಂದೆ ಗೊರೌಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ವಿಡಿಯೋದಲ್ಲಿ ಯುವತಿಯು ಯುವಕನೊಬ್ಬನ ಜತೆಗೆ ಕಾಣಿಸಿಕೊಂಡಿದ್ದು, ತನ್ನ ಇಚ್ಛೆಯಂತೆ ಮದುವೆಯಾಗಿದ್ದು, ಖುಷಿಯಾಗಿರುವುದಾಗಿ ತಿಳಿಸಿದ್ದಾಳೆ. ತಮ್ಮಿಬ್ಬರಿಗೆ ಯಾವುದೇ ತೊಂದರೆ ಕೊಡದಂತೆ ಆಕೆ ಕುಟುಂಬದವರಿಗೆ ಮನವಿ ಮಾಡಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿ! ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಭೂಪ.

Wed Feb 2 , 2022
ಕಿರುತೆರೆ ಜನಪ್ರಿಯ ನಟಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂ ದಿ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿಯ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅತ್ಯಾಚಾರವೆಸಗಿದ ವ್ಯಕ್ತಿ ಮತ್ತು ನಟಿ ಹಲವು ವರ್ಷಗಳಿಂದ ಪರಿಚಯವಿದ್ದು ಇಬ್ಬರು ಸ್ನೇಹಿತರಾಗಿದ್ದರು.ಇತ್ತೀಚಿಗೆ ಅವರಿಬ್ಬರ ನಡುವೆ ವೈಮನಸ್ಸು ಉಂ ಟಾದ ಕಾರಣ ಈ ಘಟನೆ ನಡೆದಿರಬಹುದು ಎಂದು ಯುವತಿ ಆಪ್ತರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಜೋಯ್‌ಗನ ಅಪಾರ್ಟೆ ಮೆಂಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial