ಮದುವೆಯ ಸೀಸನ್ ಶುರುವಾಗಿದೆ.

 

ಭಾಗಲ್ಪುರ ಮೇ 04: ಮದುವೆಯ ಸೀಸನ್ ಶುರುವಾಗಿದೆ. ಹೀಗಿರುವಾಗ ಎಲ್ಲೆಲ್ಲೂ ಬ್ಯಾಂಡ್‌ಗಳ ಸದ್ದು ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಒಂದು ವಿಶಿಷ್ಟ ವಿವಾಹ ನಡೆದಿದ್ದು, ವಧು-ವರರನ್ನು ನೋಡಲು ಅಪಾರ ಜನಸ್ತೋಮವೇ ನೆರೆದಿತ್ತು.

ಮದುವೆಗೆ ಆಹ್ವಾನಿಸದ ಅತಿಥಿಗಳು ಆಗಮಿಸಿ ವಧುವರರ ಜೊತೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದರು. ಏನಿದು ಕುತೂಹಲಕಾರಿ ಪ್ರಕರಣ ಅಂತೀರಾ, ಸಂಪೂರ್ಣ ವರದಿ ಓದಿ…

ಈ ಶುಭ ಸಮಾರಂಭ ಭಾಗಲ್ಪುರ್ ಜಿಲ್ಲೆಯ ನವ್ಗಚಿಯಾದಲ್ಲಿ ನಡೆದಿದೆ. ಅಲ್ಲಿನ ಜನರು ಇತ್ತೀಚೆಗೆ 3 ಅಡಿ ಎತ್ತರದ ಅಂದರೆ 36 ಇಂಚುಗಳ ವರನು 2.8 ಅಡಿ ಎತ್ತರದ (34 ಇಂಚು) ವಧುವನ್ನು ಮದುವೆಯಾದದ್ದನ್ನು ಕಂಡಿದ್ದಾರೆ. ಹೀಗಾಗಿ ಆ ಭಾಗದ ಜನ ಈ ಮದುವೆಯ ಬಗ್ಗೆ ಎಲ್ಲೆಲ್ಲೂ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಅಪರೂಪದ ಜೋಡಿಯನ್ನು ನೋಡಲು ಜನ ಸಾಗರವೇ ಮದುವೆಯಲ್ಲಿ ಭಾಗವಹಿಸಿದೆ.

ವರ ಮುನ್ನಾ ಮತ್ತು ವಧು ಮಮತಾ ಅವರನ್ನು ನೋಡಲು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ಸ್ಥಳಕ್ಕೆ ಆಗಮಿಸಿದ್ದರು. ಅವರಲ್ಲಿ ಹೆಚ್ಚಿನವರು ವಿವಾದಕ್ಕೆ ಆಹ್ವಾನಿಸದ ಜನರಾಗಿರುವುದು ಕಂಡು ಬಂದಿದೆ. ಈ ಎಲ್ಲಾ ಜನರು ಈ ಅಪರೂಪದ ಜೋಡಿಯನ್ನು ನೋಡಲು ಬಯಸಿದ್ದರು ಎನ್ನುವುದು ತಿಳಿದು ಬಂದಿದೆ. ಅದೆಷ್ಟು ಜನ ಈ ಮದುವೆಯಲ್ಲಿ ಭಾಗಿಯಾಗಿದ್ದರು ಎಂದರೆ ಜನರನ್ನು ಸಂಭಾಳಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ತಿಳಿದು ಬಂದಿದೆ.

ಮದುವೆ ಸೆಲೆಬ್ರಿಟಿಗಿಂತ ಕಡಿಮೆ ಇರಲಿಲ್ಲ

ಮಾಧ್ಯಮ ವರದಿಗಳ ಪ್ರಕಾರ, ನವಗಚಿಯ ಅಭಿಯಾನ್ ಬಜಾರ್ ನಿವಾಸಿ ಕಿಶೋರಿ ಮಂಡಲ್ ಅವರ ಪುತ್ರಿ ಮಮತಾ ಕುಮಾರಿ (24) ಸೋಮವಾರ ಮಸಾರು ನಿವಾಸಿ ಬಿಂದೇಶ್ವರಿ ಮಂಡಲ್ ಅವರ ಮಗ ಮುನ್ನಾ ಭಾರತಿ (26) ಅವರನ್ನು ವಿವಾಹವಾದರು. ಮಮತಾ ಮತ್ತು ಮುನ್ನಾ ಅವರ ವಿವಾಹವು ಸೆಲೆಬ್ರಿಟಿಗಿಂತ ಕಡಿಮೆ ಇರಲಿಲ್ಲ ಎಂದು ತಿಳಿದು ಬಂದಿದೆ. ಏಕೆಂದರೆ ಮದುವೆ ಸಮಾರಂಭದಲ್ಲಿ ವಧು-ವರರ ದರ್ಶನ ಪಡೆಯಲೆಂದೇ ನೂರಾರು ಜನರು ನೆರೆದಿದ್ದರು ಎನ್ನಲಾಗಿದೆ.

‘ಸ್ವರ್ಗದಲ್ಲಿ ಮಾಡಿದ ಜೋಡಿ’

ವಧು ಮತ್ತು ವರನ ಎತ್ತರದಲ್ಲಿ ತುಂಬಾ ಚಿಕ್ಕವರಾದ್ದರಿಂದ ಈ ಮದುವೆ ವಿಶಿಷ್ಟವಾಗಿತ್ತು. ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಜನರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಏಕೆಂದರೆ 36 ಇಂಚಿನ ಮುನ್ನಾಗೆ ಜೀವನ ಸಂಗಾತಿ ಸರಿಜೋಡಿಯಾಗಿದ್ದರು. ಪ್ರತಿಯೊಬ್ಬರೂ ತಮ್ಮ ಕ್ಯಾಮೆರಾದಲ್ಲಿ ದೃಶ್ಯವನ್ನು ಸೆರೆಹಿಡಿಯಲು ಮುಗಿಬಿದ್ದಿದ್ದಾರೆ. ಕುಟುಂಬದವರ ಪ್ರಕಾರ, ಕುತೂಹಲದಿಂದ ಜನರು ನಗರದಲ್ಲಿ ಮದುವೆಯ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಮದುವೆಗೆ ಹಾಜರಾದ ಜನರು ಇದನ್ನು ‘ಸ್ವರ್ಗದಲ್ಲಿ ಮಾಡಿದ ಜೋಡಿ’ ಎಂದು ಕರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಆದೇಶ!

Thu May 5 , 2022
ರದ್ದುಕೋರಿ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಸರ್ಕಾರಕ್ಕೆ ನೋಟಿಸ್ ನೀಡಿದೆ ಮತ್ತು ವಿಚಾರಣೆಯನ್ನು ಮೇ 15ಕ್ಕೆ ಮೂಂದೂಡಿದೆ. ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಮರು ಪರೀಕ್ಷೆಯ ಸರ್ಕಾರದ ನಿರ್ಧಾರವನ್ನು ರದ್ದು ಪಡಿಸುವಂತೆ ಕೋರಿ 28 ಪಿಎಸ್‌ಐ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಮೊರೆ ಹೋಗಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಾಕಷ್ಟು ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು […]

Advertisement

Wordpress Social Share Plugin powered by Ultimatelysocial