ಮಾವಿನಕೆರೆ ರಂಗನಾಥನ್ ಲೇಖಕರು

ಮಾವಿನಕೆರೆ ರಂಗನಾಥನ್ ಸಾಹಿತಿಗಳಾಗಿ, ಪ್ರಕಾಶಕರಾಗಿ ಮತ್ತು ಮಾಸ್ತಿ ಪ್ರತಿಷ್ಠಾನದ ಪ್ರಧಾನ ನಿರ್ವಾಹಕರಾಗಿ ಹೀಗೆ ಅನೇಕ ರೀತಿಯಲ್ಲಿ ಗಣ್ಯರೆನಿಸಿದ್ದಾರೆ.
ರಂಗನಾಥನ್ 1943ರ ಡಿಸೆಂಬರ್ 21ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ತಂದೆ ಎಚ್.ಆರ್. ಶಿಂಗೈಯ್ಯಂಗಾರ್. ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು, ಹಾಸನ, ಚಿಕ್ಕಮಗಳೂರುಗಳಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಪದವಿ ಪಡೆದು, ಸೆಂಟ್ರಲ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಓದಿದರು. ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಪದವಿಗೆ ಓದಿದರಾದರೂ ಎರಡು ಪರೀಕ್ಷೆಗಳಿಗೆ ಹಾಜರಾಗದಂತಹ ಅನಿರೀಕ್ಷಿತ ಸಂದರ್ಭಗಳೆದುರಾದವು.
ಸಾಹಿತ್ಯದ ಕಡೆ ಒಲವು ಮೂಡಿಸಿಕೊಂಡ ರಂಗನಾಥನ್ ಹಲವಾರು ಸಣ್ಣ ಕಥೆಗಳನ್ನು ಬರೆದರು. ಇವರ ಕಥೆಗಳು ಪ್ರಸಿದ್ಧಗೊಂಡು ತಮಿಳು, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗೆ ಅನುವಾದಗೊಂಡಿವೆ. ಇವರು ಬರೆದ ‘ಉತ್ತರಾಯಣ’ ಕಥೆಯು ಕೇಂದ್ರ ಸಾಹಿತ್ಯ ಅಕಾಡಮಿ ಹೊರತಂದಿರುವ ‘ಇಂಡಿಯನ್ ಲಿಟರೇಚರ್‌’ನಲ್ಲಿ ಸೇರ್ಪಡೆಯಾಗಿದ್ದರೆ, ಮಿಥುನ ಕಥೆಯನ್ನು ಕವಿ ಗೋಪಾಲಕೃಷ್ಣ ಅಡಿಗರು ಇಂಗ್ಲಿಷ್‌ಗೆ ಅನುವಾದಿಸಿದ್ದು, ಮದರಾಸಿನ ಸ್ಕಾಲರ್ ಬುಕ್ ಹೌಸ್ ಅವರಿಂದ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಇವರ ಕಥೆಗಳು ರುಕ್ಮಿಣಿ, ಚಂಕ್ರಬಂಧನ, ಉತ್ತರಾಯಣ, ಪರ್ಜನ್ಯ, ಮಿಥುನ, ಉಳಿದದ್ದು ಆಕಾಶ, ಮಾವಿನ ಕೆರೆ ಆಯ್ದ ಕಥೆಗಳು, ಶಂಭು ಲಿಂಗ ಮತ್ತು ಮೂವತ್ತು ಕಥೆಗಳು ಮೊದಲಾದ ಕಥಾ ಸಂಕಲನಗಳಲ್ಲಿ ಸೇರಿವೆ. ’ಏಳುಸುತ್ತಿನ ಕೋಟೆ’ ಮತ್ತು ‘ಜಲತರಂಗ’ ಎರಡು ಕಾದಂಬರಿಗಳು ಸುಧಾ ಮತ್ತು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ನಂತರ ಪುಸ್ತಕ ರೂಪದಲ್ಲಿ ಹೊರಬಂದಿವೆ. ಇವರ ವಿಮರ್ಶಾ ಕೃತಿಗಳಲ್ಲಿ ಸಂಕ್ಷಿಪ್ತ, ನಮ್ಮ ಮಾಸ್ತಿ, ಮಾಸ್ತಿ ಕನ್ನಡದ ಆಸ್ತಿ ಮುಂತಾದವು ಸೇರಿವೆ. ದಿಗಂತ, ಶ್ರೀನಿವಾಸ, ಶಿಕ್ಷಣ-ಸಂಸ್ಕೃತಿ, ಕಥಾಸಂಪದ, ಮಾಸ್ತಿ ಸಮಗ್ರ ಕಥೆಗಳು ಭಾಗ ೧ ಮತ್ತು ೨, ಚಿತ್ರಮಯ ಜ್ಞಾನ ಕೋಶ, ನೊಬೆಲ್ ಪ್ರಶಸ್ತಿ ಕಥಾ ಜಗತ್ತು, ನೊಬೆಲ್ ಪ್ರಶಸ್ತಿ ಕಾವ್ಯ ಜಗತ್ತು, ನೊಬೆಲ್ ಪ್ರಶಸ್ತಿ ಕಾದಂಬರಿ ಜಗತ್ತು (ನೊಬೆಲ್ ಮಾಲೆ ಗೋಪಾಲಕೃಷ್ಣ ಅಡಿಗರೊಡನೆ), ಮಾಸ್ತಿ ಪ್ರಶಸ್ತಿ ಮಹನೀಯರು, ಎಲ್.ಎಸ್. ಶೇಷಗಿರಿರಾವ್ ಬದುಕು ಬರೆಹ ಮತ್ತು ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಸಂಪುಟಗಳು ಭಾಗ ೧ ಮತ್ತು ೨ ಸೇರಿ ಮುಂತಾದ 30ಕ್ಕೂ ಹೆಚ್ಚು ಇವರ ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಉದಯೋನ್ಮುಖ ಮತ್ತು ಪ್ರಖ್ಯಾತರ ಕೃತಿಗಳ ಪ್ರಕಟಣೆಗಾಗಿ ಇವರು ಸ್ಥಾಪಿಸಿದ ‘ಪುರೋಗಾಮಿ ಸಾಹಿತ್ಯ ಸಂಘ’ದಿಂದ 300ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.
ಮಾವಿನಕೆರೆ ರಂಗನಾಥನ್ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಮಿತಿ ಸದಸ್ಯರಾಗಿ, ಮಾಸ್ತಿ ಪ್ರಶಸ್ತಿ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಮತ್ತು ಕರ್ನಾಟಕ ಸರಕಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನ ಅಧ್ಯಕ್ಷರಾಗಿ ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸುತ್ತ ಬಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಹೊಸ ಚಿತ್ರದ ಹೊಸ ಶೀರ್ಷಿಕೆ ಶುರುವಲ್ಲೇ ತಲೆಗೆ ಹುಳ ಬಿಟ್ಟ ಚಿತ್ರ ತಂಡ"

Wed Dec 21 , 2022
ಈಗಾಗಲೇ ಒಂದು ಹೊಸ ರೀತಿಯ ಸದಭಿರುಚಿಯ ಚಿತ್ರ ಧರಣಿ ಮಂಡಲ ಮಧ್ಯದೊಳಗೆ  ಚಿತ್ರ ತಂಡ ಈಗ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ ನೀಡುವ‌ ಮೂಲಕ “K A” ಎಂಬ ಅರ್ಧ ಶೀರ್ಷಿಕೆಯನ್ನು ಅನಾವರಣ ಗೊಳಿಸಿ ಪ್ರಾರಂಭದಲ್ಲೇ  ಕುತೂಹಲವನ್ನು ಕಾಯ್ದಿರಿಸಿದ್ದಾರೆ.ವಿಜಯನಗರದ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶೀರ್ಷಿಕೆ ಅನಾವರಣದ ಕಾರ್ಯ ನೆಡೆದಿದೆ.ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ  ಸಂತೋಷ್ ಈಗ ಸ್ವತಂತ್ರ […]

Advertisement

Wordpress Social Share Plugin powered by Ultimatelysocial