ಮರೆಯಲಾಗದ ರುಚಿ ಚಿಕನ್ ಲಿವರ್ ಡ್ರೈ

ಅಡುಗೆಯಲ್ಲಿ, ವಿಶೇಷವಾಗಿ ಮಾಡುವ ಅಡುಗೆ ಮಾಂಸದ ಅಡುಗೆಯಾಗಿದೆ.
ನಾವು ಅಡುಗೆ ಮಾಡಲು ಬಳಸುವ ಪದಾರ್ಥಗಳು ಹಿಡಿತದಲ್ಲಿದ್ದಾಗ ಮಾತ್ರ ಅಡುಗೆ ರುಚಿಯಾಗಿ ಆಗುತ್ತದೆ.

ನಾವು ಇಂದು ಖಾರವಾದ ಅಡುಗೆ ತಿನ್ನಲು ಬಯಸುವವರಿಗಾಗಿ ರುಚಿಯಾದ ಖಾರವಾದ ಚಿಕನ್ ಲಿವರ್ ಡ್ರೈ ಮಾಡುವ ವಿಧಾನ ಹೇಳುತ್ತಿದ್ದೇವೆ

ಬೇಕಾಗುವ ಸಾಮಗ್ರಿಗಳು
* ಚಿಕನ್ ಲಿವರ್- ಅರ್ಧ ಕೆಜಿ
* ಈರುಳ್ಳಿ-3
* ಟೊಮೆಟೊ- 1
* ಹಸಿಮೆಣಸಿನಕಾಯಿ -4
* ಕರಿಬೇವು – ಸ್ವಲ್ಪ,
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಕಾಳುಮೆಣಸಿನಪುಡಿ – 1 ಚಮಚ,
* ಕೆಂಪು ಮೆಣಸಿನಕಾಯಿಪುಡಿ -1 ಚಮಚ
* ದನಿಯಾ ಪುಡಿ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಅರಿಸಿಣ- ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್

ಮಾಡುವ ವಿಧಾನ
* ಒಂದು ಬಾಣಲೆಯನ್ನು ಬಿಸಿಗಿಟ್ಟು, ಅಡುಗೆ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.

* ನಂತರ ಚಿಕನ್ ಲಿವರ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ, ಕೆಂಪುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಚಿಕನ್ ಲಿವರ್ ಅನ್ನು ಬೇಯಿಸಿಕೊಳ್ಳಿ.

* ನೀರು ಸೇರಿಸುವ ಅವಶ್ಯಕತೆ ಇಲ್ಲ. ಲಿವರ್ ಬೆಂದ ನಂತರ ಕಾಳುಮೆಣಸಿನ ಪುಡಿ, ಗರಂಮಸಾಲೆ ಸೇರಿಸಿ ಮತ್ತೆ ಬೇಯಿಸಿ ಕೊನೆಯದಾಗಿ ಕೊತ್ತಂಬರಿಯನ್ನು ಹಾಕಿದರೆ ಚಿಕನ್ ಲಿವರ್ ಡ್ರೈ ಸಿದ್ಧವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಗ್‌ ಬಾಸ್‌ ವಿನ್ನರ್‌ ಘೊಷಣೆಯಲ್ಲಿ ನಾಗರ್ಜುನ ಅವರಲ್ಲಿ ಈ ಬದಲಾವಣೆಯನ್ನು ಗಮನಿಸಿದ್ದಿರ?

Wed Dec 22 , 2021
ನಾಗಾರ್ಜುನ ಕಳೆದ 3 ಸೀಸನ್‌ಗಳಲ್ಲಿ ನಿರಂತರವಾಗಿ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ವಿನ್ನರ್ ಘೋಷಣೆಯಾದ ರೀತಿ ಎಲ್ಲರಲ್ಲೂ ಸಸ್ಪೆನ್ಸ್ ಕೆರಳಿಸುತ್ತಿದೆ.ನಾಗಾರ್ಜುನ: ಟಾಲಿವುಡ್ ಕಿಂಗ್, ಬಿಗ್ ಬಾಸ್ ಹೋಸ್ಟ್ ನಾಗಾರ್ಜುನ ವಿಭಿನ್ನತೆ ತೋರಿಸಿದರು. ನಾಗಾರ್ಜುನ ಕಳೆದ 3 ಸೀಸನ್‌ಗಳಲ್ಲಿ ನಿರಂತರವಾಗಿ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ವಿನ್ನರ್ ಘೋಷಣೆಯಾದ ರೀತಿ ಎಲ್ಲರಲ್ಲೂ ಸಸ್ಪೆನ್ಸ್ ಕೆರಳಿಸುತ್ತಿದೆಸೋಷಿಯಲ್ ಮೀಡಿಯಾದಲ್ಲಿ ಈ ಮೊದಲೇ ಸೋರಿಕೆಯಾಗುತ್ತಿರುವುದರಿಂದ ಸಸ್ಪೆನ್ಸ್ ಕಡಿಮೆಯಾಗುತ್ತಿದೆ ಆದರೆ.. ಇಲ್ಲವಾದರೆ.. ಈ ಕ್ಷಣದಲ್ಲಿ ನರಗಳು ಕಟ್ಟಿಕೊಂಡಿವೆ ಎಂದು […]

Advertisement

Wordpress Social Share Plugin powered by Ultimatelysocial