ಕೆಲವೊಂದು ಪದಾರ್ಥ ಹಾಲಿನ ಜೊತೆ ಎಂದೂ ಸೇವನೆ ಮಾಡಬಾರದು.

 

ಹಾಲಿನಲ್ಲಿ ಸಾಕಷ್ಟು ಪೌಷ್ಠಿಕಾಂಶವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಉತ್ತಮ ಆರೋಗ್ಯಕ್ಕೆ ಹಾಲು ಬಹಳ ಒಳ್ಳೆಯದು. ಹಾಲಿನ ಜೊತೆ ಹಣ್ಣು ಹಾಗೂ ಬೇರೆ ಆಹಾರ ಸೇವನೆ ಮಾಡುವ ಹವ್ಯಾಸ ಅನೇಕರಿಗಿರುತ್ತದೆ. ಕೆಲವೊಂದು ಪದಾರ್ಥಗಳನ್ನು ಹಾಲಿನ ಜೊತೆ ಎಂದೂ ಸೇವನೆ ಮಾಡಬಾರದು.

ಹೀಗೆ ಮಾಡಿದಲ್ಲಿ ಆರೋಗ್ಯ ವೃದ್ಧಿಯಾಗುವ ಬದಲು ಆರೋಗ್ಯ ಹಾಳಾಗುತ್ತದೆ.

ಹಾಲಿನ ಜೊತೆ ಮೊಸರು ಸೇವನೆ ಮಾಡುವ ಅಭ್ಯಾಸ ಅನೇಕರಿಗಿರುತ್ತದೆ. ಅನ್ನಕ್ಕೆ ಹಾಲು, ಮೊಸರು ಸೇರಿಸಿ ಊಟ ಮಾಡ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ಇವೆರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ ಗ್ಯಾಸ್, ಎಸಿಡಿಟಿ ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಮೊಸರು ತಿಂದ ಒಂದೂವರೆ ಎರಡು ಗಂಟೆ ನಂತ್ರ ಹಾಲು ಕುಡಿಯಬೇಕು.

ಉದ್ದಿನ ಬೇಳೆಯ ಜೊತೆ ಎಂದೂ ಹಾಲನ್ನು ಸೇವನೆ ಮಾಡಬಾರದು.

ಹಾಲು ಕುಡಿಯುವ ಮೊದಲು ನಂತ್ರ ಅಥವಾ ಹಾಲಿನ ಜೊತೆ ಎಂದೂ ಹಣ್ಣನ್ನು ತಿನ್ನಬಾರದು. ಹಾಲಿನ ಜೊತೆ ಅನಾನಸ್, ಕಿತ್ತಳೆ ಹಣ್ಣಿನಂತಹ ಸಿಟ್ರಸ್ ಅಂಶವಿರುವ ಹಣ್ಣು ತಿಂದರೆ ಅಪಾಯ ನಿಶ್ಚಿತ. ಹೀಗೆ ಮಾಡಿದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ಹಾಲು ಹಾಗೂ ಬಾಳೆಹಣ್ಣನ್ನು ಒಟ್ಟಿಗೆ ಸೇವನೆ ಮಾಡಬಾರದು. ಎರಡೂ ಕಫವನ್ನು ಉತ್ಪತ್ತಿ ಮಾಡುತ್ತವೆ. ಇದರಿಂದ ಕಫ ಜಾಸ್ತಿಯಾಗುವ ಜೊತೆಗೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

ಕೆಲವರು ಬೆಳಿಗ್ಗೆ ಹಾಲಿನ ಜೊತೆ ಬ್ರೆಡ್ ಹಾಗೂ ಬೆಣ್ಣೆ ತಿನ್ನುತ್ತಾರೆ. ಆದ್ರೆ ಇದ್ರ ಅವಶ್ಯಕತೆ ಇಲ್ಲ. ಹಾಲು ಸಂಪೂರ್ಣ ಆಹಾರ. ಹಾಲಿನ ಜೊತೆ ಬ್ರೆಡ್, ಬೆಣ್ಣೆ ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿದಂತಾಗಿ ತೊಂದರೆಯಾಗುತ್ತದೆ.

ಹಾಲಿನ ಜೊತೆ ಮೀನನ್ನು ಸೇವನೆ ಮಾಡಬೇಡಿ. ಇದರಿಂದ ಗ್ಯಾಸ್, ಅಲರ್ಜಿ ಹಾಗೂ ಚರ್ಮ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಹಾಲಿನ ಜೊತೆ ಉಪ್ಪಿನಕಾಯಿ, ಕರಿದ ಪದಾರ್ಥಗಳನ್ನೂ ತಿನ್ನಬೇಡಿ. ಹಾಲು ಹಾಗೂ ಎಳ್ಳನ್ನು ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ, ಜೂನ್ 02: ಭಾರತದಲ್ಲಿ ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ

Thu Jun 2 , 2022
ನವದೆಹಲಿ, ಜೂನ್ 02: ಭಾರತದಲ್ಲಿ ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಬುಧವಾರ ಇಳಿಕೆಯಾಗಿದ್ದ ಚಿನ್ನದ ದರ ಗುರುವಾರ 100 ರೂಪಾಯಿ ಹೆಚ್ಚಳವಾಗಿದೆ, ಅದೇ ರೀತಿ ಬೆಳ್ಳಿ ದರದಲ್ಲಿ 800 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದ್ದು, 47,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಹೆಚ್ಚಳವಾಗಿದ್ದು, 51,930 ರೂಪಾಯಿ […]

Advertisement

Wordpress Social Share Plugin powered by Ultimatelysocial