ಮನವಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.ನರೇಂದ್ರ ಮೋದಿ

 

ಮುಜಾಫರಾಬಾದ್​: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗ್ಯಾಂಗ್​ರೇಪ್​ ಸಂತ್ರಸ್ತೆಯು ಸಹಾಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಪಾಕ್​ನ ದುರಾಡಳಿತವನ್ನು ಸಂತ್ರಸ್ತೆ ವಿಡಿಯೋ ಸಂದೇಶದಲ್ಲಿ ವಿವರಿಸಿದ್ದು, ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

ಗ್ಯಾಂಗ್​ರೇಪ್​ ಸಂತ್ರಸ್ತೆ ಮರಿಯಾ ತಾಹೀರ್ ಪ್ರಧಾನಿ ಮೋದಿಗೆ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ತನ್ನ ಮಕ್ಕಳಿಗೆ ಹಾಗೂ ತನಗೆ ರಕ್ಷಣೆ ಮತ್ತು ಆಶ್ರಯ ಒದಗಿಸಿಕೊಡುವಂತೆ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಲು ಪಾಕ್​ ಆಕ್ರಮಿತ ಕಾಶ್ಮೀರದ ಸ್ಥಳೀಯ ಆಡಳಿತ, ಪೊಲೀಸ್​ ಮತ್ತು ನ್ಯಾಯಾಲಯ ಕಳೆದ ಏಳು ವರ್ಷಗಳಿಂದ ವಿಫಲವಾಗಿದೆ. ಭಾರತಕ್ಕೆ ಬರಲು ನನಗೆ ಅನುಮತಿ ನೀಡಿ ಎಂದು ಮನವಿ ಮಾಡಿಕೊಂಡಿರುವ ಸಂತ್ರಸ್ತೆ, ರಾಜಕಾರಣಿ ಚೌಧರಿ ತಾರಿಕ್​ ಫಾರೂಖ್​ ಮತ್ತು ಪೊಲೀಸರು ನನ್ನನ್ನು ಮತ್ತು ಮಕ್ಕಳನ್ನು ಕೊಲ್ಲಬಹುದು ಎಂದು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

2015ರಲ್ಲಿ ನಡೆದ ಹೀನ ಕೃತ್ಯದಲ್ಲಿ ಮರಿಯಾ ತಾಹೀರ್​ ಸಂತ್ರಸ್ತೆಯಾಗಿದ್ದಾರೆ. ಆರೋಪಿಗಳಾದ ಹರೂನ್​ ರಶೀದ್​, ಮಮೂನ್​ ರಶೀದ್​, ಜಮೀಲ್​ ಶಫಿ, ವಾಖಸ್​ ಅಶ್ರಫ್​, ಸನಾಮ್​ ಹರೂನ್​ ಮತ್ತು ಇತರೆ ಮೂವರಿಂದ ಮರಿಯಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ, ಪಾಕ್​ ಆಕ್ರಮಿತ ಕಾಶ್ಮೀರದ ದುರಾಡಳಿತ ಮರಿಯಾಗೆ ನ್ಯಾಯ ದೊರಕಿಸಿಕೊಟ್ಟಿಲ್ಲ. ಇದರಿಂದ ಮರಿಯಾ ಪ್ರಧಾನಿ ಮೋದಿ ಸಹಾಯಕ್ಕೆ ನೆರವು ಕೋರಿದ್ದಾರೆ.

ಮಾರಿಯಾ ಅವರು ಪಾಕ್ ಆಕ್ರಮಿತ ಕಾಶ್ಮೀರದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಅನೇಕ ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನು ಬರೆದರು, ಯಾವುದೇ ಪ್ರತಿಕ್ರಿಯೆ ದೊರೆಯದೇ ನಿರಾಶೆಗೆ ಒಳಗಾಗಿದ್ದಾರೆ. ಇದೀಗ ನ್ಯಾಯಕ್ಕಾಗಿ ಮೋದಿ ನೆರವು ಕೇಳಿದ್ದು, ಇದಕ್ಕೆ ಮೋದಿ ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕಿದೆ.

ಗಮನಾರ್ಹ ಸಂಗತಿ ಎಂದರೆ ಇತ್ತೀಚೆಗಷ್ಟೇ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರವನ್ನು   ಹಿಂಪಡೆಯುವುದೇ ನಮ್ಮ ಸರ್ಕಾರದ ಮುಂದಿನ ಕಾರ್ಯಸೂಚಿ ಎಂದು ಹೇಳಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂಬ ಈಶ್ವರಪ್ಪ ಹೇಳಿಕೆ!

Wed Apr 13 , 2022
  ಮೈಸೂರು: ರಾಜ್ಯಪಾಲರನ್ನೇಕೆ, ಸಮಯ ಸಿಕ್ಕರೆ ರಾಷ್ಟ್ರಪತಿಗಳನ್ನೇ ಭೇಟಿ ಮಾಡಲಿ, ವಿರೋಧ ಪಕ್ಷಗಳು ಮೊದಲಿಂದ ಚಿಕ್ಕ ಚಿಕ್ಕ ವಿಚಾರಕ್ಕೆ ರಾಜೀನಾಮೆ ಕೇಳುತ್ತಿದ್ದಾರೆ. ವಿರೋಧ ಪಕ್ಷಗಳು ರಾಜ್ಯಪಾಲರ ಭೇಟಿ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ಕೇಸ್ ಬೇರೆ, ಆ ಕೇಸ್ ಆದ 7 ತಿಂಗಳ ನಂತರ ಜಾರ್ಜ್ ರಾಜೀನಾಮೆ ಕೊಟ್ಟಿದ್ದರು. ಈ ಕೇಸ್ ನಲ್ಲಿ ನಾವು ಘಟನೆ ನಡೆದ ತಕ್ಷಣ ತನಿಖೆಗೆ ಆದೇಶಿಸಿದ್ದೇವೆ ಎಂದರು. ಈಶ್ವರಪ್ಪ ರಾಜೀನಾಮೆ ಪಡೆಯುವ […]

Advertisement

Wordpress Social Share Plugin powered by Ultimatelysocial