ಮೋದಿ ಪ್ರಧಾನಿಯಾಗಿ 8 ವರ್ಷ, ಬಿಜೆಪಿಯಿಂದ ದೇಶವ್ಯಾಪಿ ಅಭಿಯಾನ!

 

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೇ 26 ಕ್ಕೆ 8 ವರ್ಷ ಪೂರ್ಣಗೊಳ್ಳಲಿದೆ. ಎರಡನೇ ಅವಧಿಯಲ್ಲಿ ಅವರು ಪ್ರಧಾನಿಯಾಗಿ ಮೇ 30 ಕ್ಕೆ 3 ವರ್ಷ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

ಮೇ 30 ರಿಂದ 15 ದಿನಗಳ ಕಾಲ ದೇಶ ವ್ಯಾಪಿ ಅಭಿಯಾನ ಕೈಗೊಳ್ಳಲಾಗಿದೆ.

ಮೋದಿ ಪ್ರಧಾನಿಯಾಗಿ 8 ವರ್ಷ ಪೂರ್ಣಗೊಳಿಸಲಿರುವ ಹಿನ್ನೆಲೆಯಲ್ಲಿ ಮೇ 30 ರಿಂದ ಜೂನ್ 15 ರವರೆಗೆ ದೇಶಾದ್ಯಂತ 15 ದಿನಗಳ ಕಾಲ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು, ರಿಪೋರ್ಟ್ ಕಾರ್ಡ್ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲು ಬಿಜೆಪಿ ಮುಂದಾಗಿದೆ.

ದುರ್ಬಲ ವರ್ಗದವರಿಗೆ ಮೋದಿ ಸರ್ಕಾರ ಕೈಗೊಂಡ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲಾಗುವುದು. ‘8 ವರ್ಷಗಳ ಸೇವೆ, ಉತ್ತಮ ಆಡಳಿತ -ಬಡವರ ಕಲ್ಯಾಣ’ ಹೆಸರಿನಲ್ಲಿ 15 ದಿನಗಳ ಕಾಲ ಅಭಿಯಾನ ಕೈಗೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಟ್ಟಿಗೆ ಬಿದ್ದರೂ ದೀಪಿಕಾಗೆ ಮುತ್ತು ಕೊಡುವುದು ಬಿಟ್ಟಿರಲಿಲ್ಲ ರಣ್ವೀರ್!

Thu May 12 , 2022
  ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಬಾಲಿವುಡ್‌ನ ಕ್ಯೂಟ್ ದಂಪತಿಗಳು. ಇವರಿಬ್ಬರು ಮದುವೆಯಾಗುವ ಮುನ್ನ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಬಹಳಷ್ಟು ಕಾಲ ಪ್ರೀತಿಸಿ, ಒಟ್ಟಿಗಿದ್ದು ಬಳಿಕಷ್ಟೆ ಹಸೆಮಣೆ ಏರಿತು ಈ ಜೋಡಿ. ನಟ ರಣ್ವೀರ್ ಸಿಂಗ್ ಖುಲ್ಲಂಖುಲ್ಲಾ ವ್ಯಕ್ತಿತ್ವದ ವ್ಯಕ್ತಿ. ಅವರ ಎನರ್ಜಿಗೆ ಬಾಲಿವುಡ್‌ನಲ್ಲಿ ಸರಿಸಾಟಿ ಯಾರೂ ಇಲ್ಲ. ಯಾವುದೇ ವಿಷಯವಾಗಲಿ ಖುಲ್ಲಂಖುಲ್ಲಾ ಮಾತನಾಡುತ್ತಾರೆ. ಮುಚ್ಚು ಮರೆ ಕಡಿಮೆ. ದೀಪಿಕಾರನ್ನು ಪ್ರೀತಿಸುತ್ತಿರುವ ವಿಚಾರವನ್ನೂ ಸಹ ಅವರು […]

Advertisement

Wordpress Social Share Plugin powered by Ultimatelysocial