ಎಲೆ ಸಹಾಯದಿಂದ ಮತ್ತೊಂದು ಕೋತಿಯ ಕಣ್ಣಿನ ಆರೈಕೆ! ಅಚ್ಚರಿ ಮೂಡಿಸುತ್ತದೆ ಕೋತಿಗಳ ದೃಶ್ಯ.

 

ವನ್ಯಜೀವಿಗಳ ಸ್ವಚ್ಛಂದ ಬದುಕಿನ ದೃಶ್ಯಗಳನ್ನು ನೋಡುವುದೇ ಚೆಂದ. ಸೂಕ್ಷ್ಮವಾಗಿ ಗಮನಿಸಿದಾಗ ಸಾಕಷ್ಟು ಅದ್ಭುತ ದೃಶ್ಯಗಳು ನಮಗಿಲ್ಲಿ ಕಾಣಸಿಗುತ್ತವೆ. ಇಂತಹ ಕುತೂಹಲಕಾರಿ ದೃಶ್ಯಗಳು ಸಹಜವಾಗಿಯೇ ನಮ್ಮನ್ನು ಸೆಳೆಯುವ ಜತೆಗೆ, ಒಂದೊಂದು ಸಲ ಹುಬ್ಬೇರಿಸುವಂತೆಯೂ ಮಾಡುತ್ತವೆ. ಈಗಂತು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಹಲವಾರು ವಿಡಿಯೋಗಳು ಕಾಣಸಿಗುತ್ತವೆ. ಇಂತಹ ಖುಷಿ ನೀಡುವ ದೃಶ್ಯಗಳ ಸಾಲಿಗೆ ಈಗ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ.ಕೋತಿಗಳು ಮನುಷ್ಯರನ್ನೇ ಅನುಕರಣೆ ಮಾಡುವ ದೃಶ್ಯಗಳು ಹೊಸದೇನೂ ಅಲ್ಲ. ನೀವು ಕೂಡಾ ಇಂತಹ ಸಾಕಷ್ಟು ದೃಶ್ಯಗಳನ್ನು ನೋಡಿರಬಹುದು. ಅದೂ ಅಲ್ಲದೆ, ಕೆಲವೊಮ್ಮೆ ಇವುಗಳು ಯೋಚಿಸುವ ರೀತಿ, ತೋರುವ ವರ್ತನೆ ಕೂಡಾ ಅಚ್ಚರಿ ಮೂಡಿಸುತ್ತದೆ. ಈ ದೃಶ್ಯವನ್ನು ನೋಡುವಾಗಲೂ ನಿಮಗೆ ಇದೇ ಅನುಭವವಾಗಬಹುದು.ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಎರಡು ಕೋತಿಗಳ ದೃಶ್ಯವಿದು. ಇದರಲ್ಲಿ ಒಂದು ಕೋತಿ ಇನ್ನೊಂದು ಕೋತಿಯ ಕಣ್ಣುಗಳ ಆರೈಕೆ ಮಾಡುವುದನ್ನು ನೋಡಬಹುದು. ಎಲೆಗಳ ಸಹಾಯದಿಂದ ಇದು ಕಣ್ಣಿನ ಆರೈಕೆ ಮಾಡುತ್ತದೆ. ಒಂದು ಎಲೆಯ ಮೂಲಕ ಕಣ್ಣನ್ನು ಸ್ವಚ್ಛಗೊಳಿಸುವ ಕೋತಿ ಬಳಿಕ ಇನ್ನೊಂದು ಎಲೆಯನ್ನು ಕೈಯಲ್ಲಿ ಸರಿಯಾದ ರೀತಿಯಲ್ಲಿ ಹಿಡಿದು ಕಣ್ಣಿನ ಆರೈಕೆ ಮಾಡಿದೆ. ಇನ್ನೊಂದು ಕೋತಿ ತನ್ನ ಕಣ್ಣನ್ನು ಸ್ವಚ್ಛಗೊಳಿಸುವಾಗ ಈ ಕೋತಿ ಬಲು ಶಾಂತವಾಗಿ ಕುಳಿತು ಅದಕ್ಕೆ ಸಹಕರಿಸುವುದನ್ನು ಇಲ್ಲಿ ಗಮನಿಸಬಹುದು. ಈ ಕೋತಿ ಏನು ಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಬಹುಶಃ ಒಂದು ಕೋತಿಯ ಕಣ್ಣಿನಲ್ಲಿ ಏನೋ ಸಮಸ್ಯೆ ಇದ್ದಂತಿದೆ. ಹೀಗಾಗಿ, ಅದನ್ನು ಸರಿಪಡಿಸಲು ಈ ಕೋತಿ ಸಹಾಯ ಮಾಡುತ್ತಿದ್ದಂತೆ ತೋರುತ್ತದೆ ಅಥವಾ ಈ ಕೋತಿಯ ಕಣ್ಣಿಗೆ ಬಿದ್ದ ಕಸವನ್ನು ಈ ಮಂಗ ತೆಗೆಯುತ್ತಿದೆಯೇನೋ ಎಂದೆನಿಸುತ್ತದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಕ್ರೋಚ್ ಸಿನಿಮಾದಲ್ಲಿ ನಟನೆಯ ಜೊತೆಗೆ ನಿರ್ದೇಶಕನೂ ಆದ ರಾಕೇಶ್ ಅಡಿಗ.

Sun Feb 26 , 2023
ಬಿಗ್ ಬಾಸ್ ಶೋ ಮುಗಿಸಿ ಬಂದಿರುವ ನಟ ರಾಕೇಶ್ ಅಡಿಗ ಮೂರುವರ್ಷಗಳಬಳಿಕ ಮತ್ತೊಂದುಸಿನಿಮಾವನ್ನುಒಪ್ಪಿಕೊಂಡಿದ್ದಾರೆ. ನೈಟ್ಔಟ್ಸಿನಿಮಾದನಂತರರಾಕೇಶ್ ಅಡಿಗ ಇದೀಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.ಮೂರ್ನಾಲ್ಕುವರ್ಷಗಳಗ್ಯಾಪ್ ನಂತರ ರಾಕೇಶ್ ಅಡಿಗ ಮತ್ತೆ ಬೆಳ್ಳಿ ಪರದೆಯ ಮೇಲೆ ಕಾಕ್ರೋಚ್ ಆಗಿ ಮಿಂಚಲು ರೆಡಿಯಾಗಿದ್ದಾರೆ.ಈಸಿನಿಮಾದಲ್ಲಿತಾವೇಹೀರೋಆಗಿನಟಿಸಿ, ನಿರ್ದೇಶನವನ್ನೂಮಾಡಲಿದ್ದಾರೆ. ಈಗಾಗಲೇಸಿನಿಮಾಕ್ಯಾರೆಕ್ಟರ್ರಿವೀಲ್ಟೀಸರ್ರಿಲೀಸ್ಆಗಿದ್ದು, ಉತ್ತಮಪ್ರತಿಕ್ರಿಯೆವ್ಯಕ್ತವಾಗಿದೆ. ಹೊಸಲುಕ್ನಲ್ಲಿಅಡಿಗಕಾಣಿಸಿಕೊಂಡಿದ್ದಾರೆ.ಬಿಗ್ಬಾಸ್ನಂತರರಾಕೇಶ್ಅಡಿಗರಿಗೆಡಿಮ್ಯಾಂಡ್ಜಾಸ್ತಿಆಗಿತ್ತು. ಅನೇಕರುತಮ್ಮಸಿನಿಮಾದಲ್ಲಿನಟಿಸುವಂತೆಆಹ್ವಾನನೀಡಿದರು. ಆದರೆ,ರಾಕೇಶ್ತಮ್ಮಕನಸಿನಪ್ರಾಜೆಕ್ಟ್ಬಗ್ಗೆಮಾತ್ರಯೋಚಿಸುತ್ತಿದ್ದರು.ಹಾಗಾಗಿಅಂದುಕೊಂಡಂತೆತಮ್ಮಸಿನಿಮಾವನ್ನುಕೈಗೆತ್ತಿಕೊಂಡಿದ್ದಾರೆ.ಈಸಿನಿಮಾದಮೂಲಕಅವರುಪ್ರೇಮಕಥೆಯೊಂದನ್ನುಹೇಳಲುಹೊರಟಿದ್ದಾರಂತೆ. ಎಲ್ಲವರ್ಗದಪ್ರೇಕ್ಷಕರನ್ನುಗಮನದಲ್ಲಿಟ್ಟುಕೊಂಡುಕಥೆಬರೆದಿದ್ದಾರಂತೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial