ಬೆಂಗಳೂರು ಅಡ್ವಾನ್ಸ್ ಬುಕಿಂಗ್‌ನಲ್ಲಿ ಕ್ರಾಂತಿಗಿಂತ ಪಠಾಣ್‌ಗೆ ಹೆಚ್ಚು ಶೋಸ್.

 

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ್ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ತಿಂಗಳ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಳ್ಳುತ್ತಿದ್ದು, 22 ತಿಂಗಳುಗಳ ಬಳಿಕ ದರ್ಶನ್ ನಟನೆಯ ಚಿತ್ರ ತೆರೆ ಕಾಣುತ್ತಿರುವುದರಿಂದ ಕ್ರೇಜ್ ದುಪ್ಪಟ್ಟಾಗಿದೆ.

ಇನ್ನು ಈ ಬಾರಿ ಕ್ರಾಂತಿ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಎದುರಾಳಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಜನವರಿ 25ರಂದು ತೆರೆ ಕಂಡರೆ, ದರ್ಶನ್ ಅಭಿನಯದ ಕ್ರಾಂತಿ ಚಿತ್ರ ಜನವರಿ 26ರಂದು ತೆರೆಗೆ ಬರಲಿದೆ. ಹೀಗೆ ಒಂದು ದಿನದ ಅಂತರದಲ್ಲಿ ಈ ಎರಡೂ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ ಏರ್ಪಡುವುದು ಮಾತ್ರ ಖಚಿತ.

ಅದರಲ್ಲಿಯೂ ಎಲ್ಲಾ ಭಾಷೆಯ ಚಿತ್ರಗಳನ್ನೂ ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎರಡೂ ಚಿತ್ರಗಳ ನಡುವೆ ಪೈಪೋಟಿ ಉಂಟಾಗುವುದು ಪಕ್ಕಾ ಎನ್ನಬಹುದಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಈ ಎರಡೂ ಚಿತ್ರಗಳ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡು ಸಿನಿ ರಸಿಕರು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಹೀಗೆ ಬೆಂಗಳೂರಿನ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಎರಡೂ ಚಿತ್ರಗಳು ತಮ್ಮ ಮೊದಲ ದಿನ ಪಡೆದುಕೊಂಡಿರುವ ಶೋಗಳ ಸಂಖ್ಯೆಯ ಕುರಿತು ಚರ್ಚೆಗಳು ಆರಂಭವಾಗಿದ್ದು, ಯಾವ ಚಿತ್ರ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಪಠಾಣ್ ಚಿತ್ರ ಬೆಂಗಳೂರಿನಲ್ಲಿ ತನ್ನ ಬಿಡುಗಡೆ ದಿನದಂದು ( ಜವನರಿ 25 ) 672 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನು ದರ್ಶನ್ ನಟನೆಯ ಕ್ರಾಂತಿ ಚಿತ್ರ ತನ್ನ ಬಿಡುಗಡೆ ದಿನ ( ಜನವರಿ 26 ) ಬೆಂಗಳೂರಿನಲ್ಲಿ 537 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ವಿಷಯದ ಕುರಿತು ಚರ್ಚೆಗಳು ಜೋರಾಗಿದ್ದು, ಪಠಾಣ್ ಚಿತ್ರಕ್ಕೆ ತೆರೆದಿರುವಷ್ಟು ಪ್ರದರ್ಶನಗಳನ್ನು ಕ್ರಾಂತಿ ಚಿತ್ರಕ್ಕೇಕೆ ತೆರೆದಿಲ್ಲ ಎಂಬ ಅಸಮಾಧಾನ ಮೂಡಿದೆ. ಇನ್ನು ಎರಡೂ ಚಿತ್ರಗಳೂ ಬೇರೆ ಬೇರೆ ದಿನ ಬಿಡುಗಡೆಯಾಗುತ್ತಿದ್ದರೂ ಹಿಂದಿ ಚಿತ್ರಕ್ಕಿಂತ ಕನ್ನಡ ಚಿತ್ರದ ಮುಂಗಡ ಬುಕಿಂಗ್‌ಗೆ ಕಡಿಮೆ ಪ್ರದರ್ಶನವನ್ನು ತೆರೆದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಕ್ರಾಂತಿ ಬಿಡುಗಡೆಯಾಗಲಿರುವ ದಿನ ಅಂದರೆ ಜನವರಿ 26ರಂದು ಬೆಂಗಳೂರಿನಲ್ಲಿ ಪಠಾಣ್ ಚಿತ್ರಕ್ಕೆ ಸದ್ಯ 357 ಪ್ರದರ್ಶನಗಳು ಮಾತ್ರ ಲಭಿಸಿದ್ದು, ಪಠಾಣ್ ತೆರೆಕಂಡ ಮರುದಿನವೇ ಬೆಂಗಳೂರಿನಲ್ಲಿ ತನ್ನ ಅರ್ಧದಷ್ಟು ಶೋಗಳನ್ನು ಕ್ರಾಂತಿ ಚಿತ್ರದ ಪ್ರಭಾವದಿಂದ ಕಳೆದುಕೊಳ್ಳಲಿದೆ. ಇನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೇ ಮೈಸೂರು, ಹುಬ್ಬಳ್ಳಿ ಹಾಗೂ ರಾಜ್ಯದ ಇತರೆ ನಗರಗಳಲ್ಲೂ ಪಠಾಣ್ ಚಿತ್ರ ಕ್ರಾಂತಿ ಚಿತ್ರದ ಬಿಡುಗಡೆಯ ದಿನ ಅನೇಕ ಪ್ರದರ್ಶನಗಳನ್ನು ಕಳೆದುಕೊಂಡು ಎರಡನೇ ದಿನಕ್ಕೆ ತೀವ್ರ ಕುಸಿತ ಕಾಣಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಆಲಿಯಾ ಭಟ್ ಗರ್ಭಿಣಿ ಆಗಿದ್ದಾರಾ?

Mon Jan 23 , 2023
    ಬಾಲಿವುಡ್ ಹಾಟ್ ಕಪಲ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನವೆಂಬರ್‌ನಲ್ಲಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದರು. ಮದುವೆ ಆದ 7 ತಿಂಗಳಿಗೆ ಆಲಿಯಾ ಭಟ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೆ ಆಲಿಯಾ ಗರ್ಭಿಣಿ ಆಗಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ. ‘ಬ್ರಹ್ಮಾಸ್ತ್ರ’ ಸಿನಿಮಾ ಚಿತ್ರೀಕರಣ ಸಮಯದಲ್ಲಿ ರಣ್‌ಬೀರ್ ಹಾಗೂ ಆಲಿಯಾ ಹತ್ತಿರವಾಗಿದ್ದರು. ಎರಡ್ಮೂರು ವರ್ಷ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಕಳೆದ […]

Advertisement

Wordpress Social Share Plugin powered by Ultimatelysocial