ಮತ್ತೆ ಆಲಿಯಾ ಭಟ್ ಗರ್ಭಿಣಿ ಆಗಿದ್ದಾರಾ?

 

 

ಬಾಲಿವುಡ್ ಹಾಟ್ ಕಪಲ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನವೆಂಬರ್‌ನಲ್ಲಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದರು. ಮದುವೆ ಆದ 7 ತಿಂಗಳಿಗೆ ಆಲಿಯಾ ಭಟ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೆ ಆಲಿಯಾ ಗರ್ಭಿಣಿ ಆಗಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ.

‘ಬ್ರಹ್ಮಾಸ್ತ್ರ’ ಸಿನಿಮಾ ಚಿತ್ರೀಕರಣ ಸಮಯದಲ್ಲಿ ರಣ್‌ಬೀರ್ ಹಾಗೂ ಆಲಿಯಾ ಹತ್ತಿರವಾಗಿದ್ದರು. ಎರಡ್ಮೂರು ವರ್ಷ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಕಳೆದ ವರ್ಷ ಏಪ್ರಿಲ್ 14ರಂದು ಕೆಲವೇ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾದ ಮೂರೇ ತಿಂಗಳಿಗೆ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದರು. ಕೆಲವರು ಇದೇ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು. ಮದುವೆಯಾದ ಎರಡೂವರೆ ತಿಂಗಳಿಗೆ ಗರ್ಭಿಣಿನಾ? ಅಥವಾ ಮದುವೆಗೂ ಮೊದ್ಲೆ ಗರ್ಭಿಣಿ ಆಗಿದ್ರಾ? ಎಂದು ಮೂದಲಿಸಿದ್ದರು. ಆದರೆ ಇದ್ಯಾವುದಕ್ಕೂ ದಂಪತಿ ತಲೆ ಕೆಡಿಸಿಕೊಳ್ಳಲಿಲ್ಲ. ನವೆಂಬರ್ 6ರಂದು ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ರಾಹಾ ಕಪೂರ್ ಎಂದು ನಾಮಕರಣ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Activities to Meet Different Singles

Tue Jan 24 , 2023
If you’re looking to meet new people and develop your group, there are a lot of activities https://thebestmailorderbrides.com/dating-sites/jollyromance/ you may make part in. Some of these are classic and others are not, but they all provide you with the chance to produce new friends. Join an initial date going out […]

Advertisement

Wordpress Social Share Plugin powered by Ultimatelysocial