ನಮ್ಮ ಆಂತರಿಕ ವಿಚಾರದಲ್ಲಿ ತಲೆಹಾಕಬೇಡಿ; ಕಾಶ್ಮೀರ ಬಗ್ಗೆ ಪ್ರತಿಕ್ರಿಯಿಸಿದ ಚೀನಾಕ್ಕೆ ಎಚ್ಚರಿಸಿದ ಭಾರತ

ಜಮ್ಮು ಕಾಶ್ಮೀರ ಕುರಿತ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ಆಂತರಿಕ ವಿಚಾರಗಳ ಬಗ್ಗೆ ಇತರೆ ದೇಶಗಳು ಪ್ರತಿಕ್ರಿಯಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಚೀನಾಕ್ಕೆ ಸ್ಪಷ್ಟಮಾತುಗಳಲ್ಲಿ ತಿರುಗೇಟು ನೀಡಿದೆ.

 

ಪಾಕಿಸ್ತಾನದಲ್ಲಿ ಆಯೋಜಿಸಲಾದ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಕಾಶ್ಮೀರ ಸಮಸ್ಯೆಯ ಬಗ್ಗೆ ನಮ್ಮ ಇಸ್ಲಾಮಿಕ್ ಸ್ನೇಹಿತರ ಮಾತುಗಳನ್ನು ನಾವು ಆಲಿಸಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಭಾರತವು ಕಾಶ್ಮೀರ ವಿವಾದವನ್ನು ಸೂಕ್ತವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕೆಂಬುದು ಚೀನಾದ ಬಯಕೆಯಾಗಿದೆ ಎಂದು ಹೇಳಿದ್ದರು.
ಚೀನಾ ಸಚಿವರ ಹೇಳಿಕೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ, ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದೆ. ಈ ವಿಚಾರದವಾಗಿ ಚೀನಾಕ್ಕೆ ಪ್ರತಿಕ್ರಿಯಿಸಲು ಯಾವುದೇ ಅಧಿಕಾರ ನಾವು ನೀಡಿಲ್ಲ, ನಮ್ಮಆಂತರಿಕ ವಿಚಾರದಲ್ಲಿ ಇತರ ದೇಶಗಳು ತಲೆದೂರಿಸುವುದನ್ನು ನಾವು ಸಹಿಸುವುದಿಲ್ಲ ಎಂದು ವಾಂಗ್‌ ಯಿ ಹೇಳಿಕೆಗೆ ತಿರುಗೇಟು ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಲಂಬರಸನ್ ಅವರ ಕಾರು ಓಡಿ ಪ್ಲಾಟ್ಫಾರ್ಮ್ ನಿವಾಸಿಯನ್ನು ಕೊಲ್ಲುತ್ತದೆ, ಚಾಲಕನನ್ನು ಬಂಧಿಸಲಾಗಿದೆ!

Thu Mar 24 , 2022
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕಾಲಿವುಡ್ ನಟ ಸಿಲಂಬರಸನ್ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಕಾರೊಂದು 70 ವರ್ಷದ ಪ್ಲಾಟ್‌ಫಾರ್ಮ್ ನಿವಾಸಿಯೊಬ್ಬರಿಗೆ ಹರಿದುಬಂದಿದೆ. ಮಾರ್ಚ್ 18 ರಂದು ಚೆನ್ನೈನ ತೆನಾಂಪೇಟೆ ಬಳಿ ಆಘಾತಕಾರಿ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ಅಪಘಾತ ಸಂಭವಿಸಿದಾಗ ವಾಹನದಲ್ಲಿ ನಟನ ತಂದೆ, ಖ್ಯಾತ ನಿರ್ದೇಶಕ-ನಟ ಟಿ ರಾಜೇಂದರ್ ಇದ್ದರು. ಅವರು ತಮ್ಮ ಮೊಮ್ಮಗನನ್ನು ಕ್ಲಿನಿಕ್‌ಗೆ ಕರೆದೊಯ್ಯುತ್ತಿದ್ದರು, ಆದ್ದರಿಂದ ಅವರು ಅಪಘಾತದ ಸ್ಥಳದಿಂದ 10 ಮೀಟರ್ ದೂರದಲ್ಲಿ ಇಳಿದರು […]

Advertisement

Wordpress Social Share Plugin powered by Ultimatelysocial