ʼವರ್ಕ್​ ಫ್ರಂ ಹೋಂʼ .

 

ವದೆಹಲಿ: ಎಡೆಲ್‌ವೀಸ್ ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಅವರು ಇತ್ತೀಚೆಗೆ ತಮ್ಮ ಪುಟ್ಟ ಮಗುವಿನ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಸಮಯದಲ್ಲಿ ತಾಯಿ, ಮಗುವನ್ನು ಎತ್ತಿಕೊಂಡು ಮನೆಯಿಂದಲೇ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ಅವರು ಶೇರ್​ ಮಾಡಿಕೊಂಡಿದ್ದಾರೆ. ರಾಧಿಕಾ ಗುಪ್ತಾ ಮತ್ತು ಅವರ ಪತಿ ಇಬ್ಬರೂ ಕೆಲಸ ಆಡುತ್ತಿದ್ದಾರೆ. ಒಂದು ದಿನದಲ್ಲಿ ತಮ್ಮ ಪುಟ್ಟ ಮಗುವನ್ನು ನೋಡಿಕೊಳ್ಳಲು ಅವರಿಗೆ ಯಾವುದೇ ಸಹಾಯಕರು ಸಿಗಲಿಲ್ಲ. ಆದ್ದರಿಂದ ಕೆಲಸದ ಮೇಜಿನ ಪಕ್ಕದಲ್ಲಿ ಕೆಲವು ಆಟಿಕೆಗಳ ಜೊತೆಗೆ ವರ್ಣರಂಜಿತ ಚಾಪೆಯನ್ನು ಇಟ್ಟು ಕೆಲಸ ಮಾಡುತ್ತಲೇ ಮಗುವನ್ನು ನೋಡಿಕೊಳ್ಳುತ್ತಿದ್ದರು. “ತಂದೆ-ತಾಯಿ ಇಬ್ಬರೂ ಕೆಲಸ ಮಾಡಬೇಕಾದ ದಿನ ಮತ್ತು ಸಹಾಯವಿಲ್ಲದ ದಿನ, ಯಾರು ಕೆಲಸಕ್ಕೆ ಬರುತ್ತಾರೆ ಎಂದು ಊಹಿಸಿ. ನೀವು ತಾಯಿ ಮತ್ತು CEO ಗಳ ಜೀವನವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳುತ್ತಾರೆ. ಸ್ವಲ್ಪ ಯೋಜನೆ, ಸಾಕಷ್ಟು ತಾಳ್ಮೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಮನೋಭಾವ ಇದ್ದರೆ ಅದು ಸಾಧ್ಯ ಎಂದಿದ್ದಾರೆ. ಇವರ ಪೋಸ್ಟ್ ವೈರಲ್ ಆಗಿದ್ದು, ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಇದಕ್ಕೆ ಶಹಭಾಸ್​ಗಿರಿ ಕೊಟ್ಟರೆ, ಇನ್ನು ಕೆಲವರು ಎಲ್ಲ ಮಕ್ಕಳೂ ಒಂದೇ ತೆರನಾಗಿ ಇರುವುದಿಲ್ಲ. ಹಲವರ ಮನೆ ನಿಮ್ಮ ಮನೆಯಷ್ಟು ವಿಶಾಲವಾಗಿದ್ದು, ಸಕಲ ಸೌಲಭ್ಯ ಹೊಂದಿರುವುದಿಲ್ಲ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಗಣಿಯಿಂದ ಓಡುತ್ತೆ ಟ್ರ್ಯಾಕ್ಟರ್‌!

Tue Jan 10 , 2023
ಕೃಷಿಗೆ ಸಂಬಂಧಿಸಿದ ವಿಧಾನಗಳಲ್ಲಿ, ಉಪಕರಣಗಳಲ್ಲಿ, ವಿವಿಧ ತಂತ್ರಜ್ಞಾನಗಳಲ್ಲಿ ಸಾಕಷ್ಟು ಸಂಶೋಧನೆಗಳು ಆಗುತ್ತಲೇ ಇರುತ್ತವೆ. ಇರುವಂಥ ಸೌಕರ್ಯಗಳನ್ನೇ ಬಳಸಿಕೊಂಡು ಆಗಾಗ ಯಶಸ್ವಿ ಪ್ರಯೋಗಗಳು ನಡೆಯುತ್ತಿರುತ್ತವೆ. ಕೃಷಿಕರಿಗೆ ಅನುಕೂಲವಾಗುವಂತಹ, ಕಡಿಮೆ ಖರ್ಚಿನಲ್ಲಿ ಉಪಯೋಗಿಸುವಂತಹ ಸಾಧನಗಳ ಅನ್ವೇಷಣೆ ನಿಜಕ್ಕೂ ರೈತರಿಗೆ (Farmre’s) ಸಹಾಯಕ. ನ್ಯೂ ಹಾಲೆಂಡ್‌ (New Holland) ಇಂಥದ್ದೇ ಒಂದು ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದೆ. ಇದು ಹೊರಸೂಸುವಿಕೆಯನ್ನು ಕಡಿಮೆ ಮಾಡುವಂತಹ, ಡೀಸೇಲ್‌ ಇಲ್ಲದೆಯೇ ದ್ರವೀಕೃತ ಮಿಥೇನ್​ನಿಂದಲೇ (Methane) ಚಲಿಸುವಂತಹ ವಿಶ್ವದ ಮೊದಲ ಟ್ರಾಕ್ಟರ್‌ […]

Advertisement

Wordpress Social Share Plugin powered by Ultimatelysocial