ನವಿಲು – ಮೇಕೆ ನಡುವೆ ಬಿಗ್ ಫೈಟ್..! ನೆಟ್ಟಿಗರನ್ನು ರಂಜಿಸಿದೆ ಈ ವಿಡಿಯೋ

ಇಂಟರ್ನೆಟ್ ನಲ್ಲಿ ವೈರಲ್ ಆಗುವ ಪ್ರಾಣಿ-ಪಕ್ಷಿಗಳ ವಿಡಿಯೋ ನೋಡುವುದೇ ಅಂದ. ಪ್ರಾಣಿಗಳ ತಮಾಷೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರ ಮೊಗದಲ್ಲಿ ನಗುಮೂಡಿಸಿದ ವಿಡಿಯೋವೆಂದರೆ ನವಿಲು ಮತ್ತು ಮೇಕೆ ನಡುವಿನ ಮುಖಾಮುಖಿ.ಹೌದು, ಪ್ರಾಣಿ ಮತ್ತು ಪಕ್ಷಿಗಳ ನಡುವಿನ ಕಾದಾಟ ನೋಡಲು ಬಹಳ ಆಸಕ್ತಿದಾಯಕವಾಗಿದೆ.

ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ. ಒಂದು ಮೇಕೆ ಮತ್ತು ನವಿಲು ಕಾಡಿನಲ್ಲಿ ಮುಖಾಮುಖಿಯಾಗುತ್ತವೆ.

ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ನವಿಲು ಮೇಕೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಮೇಕೆ ಕೂಡ ತನ್ನ ಕೊಂಬುಗಳಿಂದ ಹಕ್ಕಿಯ ದಾಳಿಗೆ ಪ್ರತಿಕ್ರಿಯೆ ನೀಡುತ್ತದೆ.

ಈ ಮುದ್ದಾದ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಯಾವಾಗಲೂ ನಿಮ್ಮ ಶಕ್ತಿಯಲ್ಲಿ ವಿಶ್ವಾಸವಿಡಿ. ದೇವರು ಪ್ರತಿಯೊಬ್ಬರಿಗೂ ಹೋರಾಡುವ ಸಾಮರ್ಥ್ಯವನ್ನು ನೀಡಿದ್ದಾನೆ ಎಂದು ಶೀರ್ಷಿಕೆ ನೀಡಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ವಿದ್ಯಾರ್ಥಿಗಳಿಗಾಗಿ ಹೆಜ್ಜೆ ಹಾಕಿದ್ದ, ಸೋನು ಸೂದ್!!

Thu Mar 3 , 2022
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನ ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿದ ವಾರದಲ್ಲಿ, ಅದರ ಪರಿಣಾಮಗಳು ಪ್ರಪಂಚದಾದ್ಯಂತ ಬಲವಾಗಿ ಅನುಭವಿಸಲ್ಪಟ್ಟಿವೆ. ಅಂದಿನಿಂದ ಭಾರತವು ಅಸಂಖ್ಯಾತ ವಿದ್ಯಾರ್ಥಿಗಳನ್ನು ಮನೆಗೆ ಹಿಂದಿರುಗಿಸಲು ತನ್ನ ಸ್ಥಳಾಂತರಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ. ಆಪರೇಷನ್ ಗಂಗಾ ಅಡಿಯಲ್ಲಿ ಮಾರ್ಚ್ 8 ರೊಳಗೆ ಉಕ್ರೇನ್‌ನಿಂದ 6,300 ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರುವ ಗುರಿಯನ್ನು ಸರ್ಕಾರ ಹೊಂದಿದ್ದರೂ, ಬಾಲಿವುಡ್ ನಟ ಸೋನು ಸೂದ್ ಈಗ ಈ ಉಪಕ್ರಮಕ್ಕೆ ಸಹಾಯ ಮಾಡಲು […]

Advertisement

Wordpress Social Share Plugin powered by Ultimatelysocial