ಪತಿ ಸತ್ತ ಬಳಿಕ ಇನ್​ಸ್ಟಾಗ್ರಾಂ ಬಳಸಿ ಟ್ರೋಲ್​ಗೊಳಗಾದ ಹಿರಿಯ ನಟಿ ನೀತೂಕಪೂರ್​!

ಮುಂಬೈ: ಹಿರಿಯ ನಟ ರಿಷಿ ಕಪೂರ್​ ಅಗಲಿ ಒಂದು ವರ್ಷ ಕಳೆದಿದೆ. ಆದರೆ ಅವರ ಪತ್ನಿ ನೀತೂ ಕಪೂರ್​​ ಅವರು ಬದುಕಿದ್ದಾಗ ಒಂದೂ ದಿನವೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ನೆಟ್ಟಿಗರಿಂದ ಭಾರೀ ಟೀಕಾಪ್ರಹಾರವನ್ನೇ ಎದುರಿಸಬೇಕಾಗಿದೆ.

ಆಗಿದ್ದಿಷ್ಟು, ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನೀತೂ ಕಪೂರ್​ ಅವರ ಬಗ್ಗೆ ನೆಟ್ಟಿಗರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನೀವು ನಿಮ್ಮ ಪತಿ ಬದುಕಿದ್ದಾಗ ಏಕೆ ಇದನ್ನು ಬಳಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಸ್ವತಃ ನಟಿ ನೀತೂ ಕಪೂರ್​ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂ ಬಳಸಿ ನಾನು ಟ್ರೋಲ್​ಗೆ ಒಳಗಾಗಿದ್ದೆ, ರಿಷಿಯ ಸಾವಿನ ನಂತರ ತನ್ನ ದುಃಖವನ್ನು ನಿಭಾಯಿಸಲು ತಾನು ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಹೆಚ್ಚು ಬೆರೆಯಲು ಪ್ರಾರಂಭಿಸಿದೆ ಎಂದು ನೀತು ಈ ಹಿಂದೆ ಹಂಚಿಕೊಂಡಿದ್ದರು. ತಾನು ಹಾಗೆ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಅದರ ಬಗ್ಗೆ ಟ್ರೋಲ್ ಮಾಡಲು ಪ್ರಯತ್ನಿಸಿದವರನ್ನು ಡಿಲೀಟ್​ ಮಾಡುತ್ತೇನೆ ಎಂದು ಹೇಳುವ ಮೂಲಕ ನೆಟ್ಟಿಗರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಸದ್ಯ ಇನ್​ ಸ್ಟಾಗ್ರಾಂನಲ್ಲಿ 1.8 ಮಿಲಿಯನ್​ ಹಿಂಬಾಲಕರನ್ನು ಹೊಂದಿದ್ದು, ಆಗ್ಗಾಗ್ಗೆ ತಾವು ಮಾಡುವ ಕೆಲಸಗಳು ಹಾಗೂ ಇತರ ವಿಶೇಷತೆಯನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿನಯ್ ರಾಜ್ ಕುಮಾರ್ ಬರ್ತ್ ಡೇ ಬ್ಯಾಷ್…ಹುಟ್ಟುಹಬ್ಬಕ್ಕೆ ಬಂತು ಸೋಲ್ ಆಫ್ ‘ಪೆಪೆ’…ರಕ್ತಸಿಕ್ತ ಲುಕ್ ನಲ್ಲಿ ಮಿಂಚಿದ ದೊಡ್ಮನೆ ಕುಡಿ

Sat May 7 , 2022
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ.. ದೊಡ್ಮೆನೆ ಮೊಮ್ಮಗ.. ರಾಘವೇಂದ್ರ ರಾಜ್ ಕುಮಾರ್ ಜೇಷ್ಠ ಸುಪುತ್ರ ವಿನಯ್ ರಾಜ್ ಕುಮಾರ್ ಗಿಂದು ಹುಟ್ಟುಹಬ್ಬದ ಸಂಭ್ರಮ.. ವಿನಯ್ ಬರ್ತ್ ಡೇ ಸ್ಪೆಷಲ್ ಆಗಿ ಅವರು ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ ಪೆಪೆ ಚಿತ್ರ ಬಳಗದಿಂದ ಸ್ಪೆಷಲ್ ಗಿಫ್ಟ್ ವೊಂದು ಅಭಿಮಾನಿಗಳ ಮಡಿಲು ಸೇರಿದೆ. ಹೇಗಿದೆ ಸೋಲ್ ಆಫ್ ಪೆಪೆ? ಪೆಪೆ ಸಿನಿಮಾ ಅಂಗಳದಿಂದ ಹೊರ ಬಂದಿರುವ ಪ್ರತಿ ಝಲಕ್ ಗಳು ವಿಭಿನ್ನತೆಯಿಂದ ಕೂಡಿವೆ. […]

Advertisement

Wordpress Social Share Plugin powered by Ultimatelysocial