ಅದಿತಿ-ಸಿದ್ದಾರ್ಥ್​ ನಡುವಿನ ಪ್ರೇಮಕ್ಕೆ ಸಿಕ್ತು ಹೊಸ ಸಾಕ್ಷಿ;

 ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.ನಟಿ ಅದಿತಿ ರಾವ್​ ಹೈದರಿ  ಅವರು ಬಹುಬೇಡಿಕೆಯ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಮಾತ್ರವಲ್ಲದೇ ಅವರು ದಕ್ಷಿಣ ಭಾರತದಲ್ಲೂ ಫೇಮಸ್​ ಆಗಿದ್ದಾರೆ. ಸಿನಿಮಾಗಳ ಜೊತೆಗೆ ವೆಬ್​ ಸಿರೀಸ್​ನಲ್ಲಿ ನಟಿಸುವ ಮೂಲಕವೂ ಅವರು ಜನಪ್ರಿಯತೆ ಪಡೆದಿದ್ದಾರೆ. ಸದ್ಯಕ್ಕಂತೂ ಅವರ ವೃತ್ತಿಜೀವನ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈ ನಡುವೆ ಅವರ ಲವ್​ ಸ್ಟೋರಿ ಕೂಡ ಹೆಚ್ಚು ಸುದ್ದಿ ಆಗುತ್ತಿದೆ. ಹೌದು, ನಟ ಸಿದ್ದಾರ್ಥ್ ಜೊತೆ  ಅವರು ಡೇಟಿಂಗ್ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಸಂಗತಿಗಳು ಎದುರಾಗುತ್ತಿವೆ. ಆದರೆ ಈ ಬಗ್ಗೆ ಪ್ರಯಣ ಪಕ್ಷಿಗಳು ಬಹಿರಂಗವಾಗಿ ಮಾತನಾಡಿಲ್ಲ. ಈಗ ಅವರಿಬ್ಬರ ಒಂದು ಡ್ಯಾನ್ಸ್ ವಿಡಿಯೋ ವೈರಲ್​ ಆಗಿದೆ.ಇನ್​ಸ್ಟಾಗ್ರಾಮ್​ ಓಪನ್​ ಮಾಡಿದರೆ ಸಾಕು ‘ಟಮ್​ ಟಮ್​..’ ಹಾಡು ಕಿವಿಗೆ ಬೀಳುತ್ತದೆ. ಪ್ರತಿಯೊಬ್ಬರೂ ಈ ಹಾಡಿಗೆ ರೀಲ್ಸ್​ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಫೇಮಸ್​ ಆಗಿದೆ ಈ ತಮಿಳು ಗೀತೆ. ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಸಹ ಈ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಸಿದ್ದಾರ್ಥ್​ ಮತ್ತು ಅದಿತಿ ರಾವ್​ ಹೈದರಿ.

 

ಬಿಡುವಿನ ಸಮಯದಲ್ಲಿ ಒಟ್ಟಾಗಿ ಕಾಲ ಕಳೆದಿರುವ ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರು ‘ಟಮ್​ ಟಮ್​..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅದು ವೈರಲ್​ ಆಗಿದೆ. ದಿಯಾ ಮಿರ್ಜಾ, ಫರ್ಹಾ ಖಾನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಈ ಹಿಂದೆ ಅವರಿಬ್ಬರು ಬರ್ತ್​ಡೇ ಪ್ರಯುಕ್ತ ಪರಸ್ಪರ ವಿಶ್​ ಮಾಡಿಕೊಂಡಿದ್ದು ಗಮನ ಸೆಳೆದಿತ್ತು. ಸಿದ್ದಾರ್ಥ್​ ಅವರು ‘ಹೃದಯದ ರಾಜಕುಮಾರಿ’ ಎಂಬ ಕ್ಯಾಪ್ಷನ್​ನೊಂದಿಗೆ ಅದಿತಿ ಫೋಟೋ ಹಂಚಿಕೊಂಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಇಬ್ಬರ ಲವ್​ ಸ್ಟೋರಿ ಹೆಚ್ಚು ಸುದ್ದಿ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿಟಿಬ್ಯಾಂಕ್ ಆಯಕ್ಸಿಸ್ ಬ್ಯಾಂಕ್ ಡೀಲ್; 30 ಲಕ್ಷ ಸಿಟಿ ಖಾತೆಗಳ ಕಥೆ ಏನು?

Wed Mar 1 , 2023
ಅಮೆರಿಕದ ಸಿಟಿಬ್ಯಾಂಕ್​ನ ಭಾರತೀಯ ಬಿಸಿನೆಸ್ ಅನ್ನು ಆಯಕ್ಸಿಸ್ ಬ್ಯಾಂಕ್ 11,603 ಕೋಟಿ ರೂಗೆ ಖರೀದಿಸಿದೆ. ಮಾರ್ಚ್ 1ರಿಂದ ಸಿಟಿ ಬ್ಯಾಂಕ್ ಗ್ರಾಹಕರ ಖಾತೆಗಳು ಮತ್ತು ಹೂಡಿಕೆಗಳು ಆಯಕ್ಸಿಸ್ ಬ್ಯಾಂಕ್​ಗೆ ವರ್ಗಾವಣೆ ಆಗುತ್ತವೆ. ನವದೆಹಲಿ:ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ಆಯಕ್ಸಿಸ್ ಬ್ಯಾಂಕ್ಇ ದೀಗ ಅಮೆರಿಕ ಮೂಲದ ಸಿಟಿಬ್ಯಾಂಕ್​ನ ಭಾರತೀಯ ವ್ಯವಹಾರಗಳನ್ನು   ಖರೀದಿಸಿದೆ. ಸಿಟಿಗ್ರೂಪ್​ನ ಭಾರತೀಯ ಗ್ರಾಹಕ ವ್ಯವಹಾರ ಮತ್ತು ಸಿಟಿಕಾರ್ಪ್ ಫೈನಾನ್ಸ್ ಸಂಸ್ಥೆಯಿಂದ ಎನ್​ಬಿಎಫ್​ಸಿ (ಬ್ಯಾಂಕೇತರ ಹಣಕಾಸು) ವ್ಯವಹಾರಗಳ ಖರೀದಿ […]

Advertisement

Wordpress Social Share Plugin powered by Ultimatelysocial