ಅನುಚಿತವಾಗಿ ವರ್ತಿಸಿದ್ದಕ್ಕೆ ಸಹ ನಟನ ಕಪಾಳಕ್ಕೆ ಬಾರಿಸಿದ್ದ ನಟಿ ನೋರಾ ಫತೇಹಿ

 

ಬಾಲಿವುಡ್ ನಟಿ ನೋರಾ ಫತೇಹಿ ಅವರು ಮೂಲತಃ ಕೆನಡಾ ದೇಶದವರು. ಆದರೆ ನೋರಾ ಫತೇಹಿ ಅವರು ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿ ಹೆಸರು ಮಾಡಿದ್ದಾರೆ. ಅಂದಹಾಗೆ, 2014ರಲ್ಲಿ ಅವರು ಬಾಲಿವುಡ್‌ಗೆ ಪ್ರವೇಶ ನೀಡಿದರು. ಅವರು ನಟಿಸಿದ್ದ ಮೊದಲ ಸಿನಿಮಾದ ಹೆಸರು ‘ರೋರ್‌: ಟೈಗರ್ಸ್ ಆಫ್‌ ದಿ ಸುಂದರ್‌ಬನ್ಸ್’  ಅಚ್ಚರಿ ಎಂದರೆ, ತಮ್ಮ ಮೊದಲ ಸಿನಿಮಾದಲ್ಲೇ ನೋರಾ ಫತೇಹಿ ಅವರು ತಮ್ಮ ಸಹ ನಟನ ಕಪಾಳಕ್ಕೆ ಬಾರಿಸಿದ್ದರು.ಹಿಂದೊಮ್ಮೆ ಕಪಿಲ್ ಶರ್ಮಾ ಅವರ ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೋರಾ ಫತೇಹಿ ಈ ಬಗ್ಗೆ ಹೇಳಿಕೊಂಡಿದ್ದರು. ‘ರೋರ್‌..’ ನೋರಾ ಅವರ ಮೊದಲ ಸಿನಿಮಾವಾಗಿತ್ತು. ಬಾಂಗ್ಲಾದೇಶದಲ್ಲಿ ಶೂಟಿಂಗ್ ಮಾಡುವಾಗ, ಆ ಸಿನಿಮಾದ ನಟರೊಬ್ಬರು ಶೂಟಿಂಗ್ ಸೆಟ್‌ನಲ್ಲಿ ನೋರಾ ಜೊತೆಗೆ ಅನುಚಿತವಾಗಿ ವರ್ತಿಸಿದ್ದರು. ಇದರಿಂದ ಸಿಟ್ಟಿಗೆದ್ದ ನೋರಾ, ಆ ನಟನ ಕಪಾಳಕ್ಕೆ ಬಾರಿಸಿದ್ದರು. ಆದರೆ ಆತ ಕೂಡ ನೋರಾಗೆ ತಿರುಗಿಸಿ ಹೊಡೆದಿದ್ದ! ಇದರಿಂದ ಮತ್ತಷ್ಟು ರೊಚ್ಚಿಗೆದ್ದಿದ್ದ ನಟಿ ನೋರಾ, ಆ ನಟನಿಗೆ ಮತ್ತೊಮ್ಮೆ ಬಾರಿಸಿದ್ದರು. ಆತ ಕೂಡ ನೋರಾ ಅವರ ಕೂದಲನ್ನು ಹಿಡಿದು ಎಳೆದಾಡಿದ್ದರು.’ದಿ ಕಪಿಲ್ ಶರ್ಮಾ ಶೋ’ನಲ್ಲಿ ನಗುತ್ತ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ನೋರಾ ಫತೇಹಿ ಅವರು, ‘ಒಬ್ಬ ನಟ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಹಾಗಾಗಿ, ನಾನು ಆತನಿಗೆ ಕಪಾಳಕ್ಕೆ ಬಾರಿಸಿದ್ದೆ. ಆತ ಕೂಡ ನನಗೆ ಹೊಡೆದ. ನಾನು ಮತ್ತೊಮ್ಮೆ ಆತನಿಗೆ ಬಾರಿಸಿದೆ. ಆತ ನನ್ನ ಕೂದಲನ್ನ ಹಿಡಿದು ಎಳೆದಾಡಿದ. ಅದೊಂದು ಕೆಟ್ಟ ಫೈಟ್ ಆಗಿತ್ತು..’ ಎಂದು ಹೇಳಿದ್ದರು. ಆದರೆ ಇದನ್ನು ಅವರು ತಮಾಷೆಯ ರೀತಿಯಲ್ಲಿ ಹೇಳಿಕೊಂಡಿದ್ದು, ಹಲವರಿಗೆ ಆಚ್ಚರಿ ಉಂಟು ಮಾಡಿದ್ದಂತೂ ಸುಳ್ಳಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ:

Wed Mar 1 , 2023
ಸಾಮಾನ್ಯವಾಗಿ ವ್ಯಕ್ತಿಯ ದೇಹದ ಉಷ್ಣತೆಯು 36.4 ಡಿಗ್ರಿ ಸೆಲ್ಸಿಯಸ್ ನಿಂದ 37.2ಡಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹೆಚ್ಚಿನ ಹೊರಗಿನ ಅಥವಾ ಒಳಾಂಗಣ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ನೇರವಾಗಿ ಶಾಖದ ಒತ್ತಡವನ್ನು ಉಂಟುಮಾಡಬಹುದು. ಬಿಸಿಲಿನ ತಾಪಮಾನವುಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಬುಧವಾರದಿಂದ ಹೃದಯ ಸಂಬಂಧಿಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆಯನ್ನು ನೀಡಿದೆ. ನಿಮ್ಮ ಸುತ್ತಮುತ್ತಲಲ್ಲಿ […]

Advertisement

Wordpress Social Share Plugin powered by Ultimatelysocial