OMICRON:ಒಮಿಕ್ರಾನ್ ಉಪ-ರೂಪಾಂತರ ʼBA.2ʼ ಹೆಚ್ಚು ಹರಡುತ್ತಿದೆ;

 ಕೋವಿಡ್-19ರ ಮೂರನೇ ಅಲೆಯಲ್ಲಿ ಭಾರತ ಹೋರಾಡುತ್ತಿರುವಂತೆಯೇ, ಕೇಂದ್ರ ಸರ್ಕಾರ ಗುರುವಾರ ಒಮಿಕ್ರಾನ್ ಉಪ ರೂಪಾಂತರ ಬಿಎ.2 ದೇಶದಲ್ಲಿ ಈಗ ಹೆಚ್ಚು ಪ್ರಚಲಿತದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ದೇಶದ ಕೋವಿಡ್-19 ಪರಿಸ್ಥಿತಿಯ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದೆ.

ಇನ್ನು ಈ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ನಿರ್ದೇಶಕ ಡಾ. ಸುಜೀತ್ ಕುಮಾರ್ ಸಿಂಗ್ಅವರು ಮಾತನಾಡುತ್ತಿದಾಗ, ಒಮಿಕ್ರಾನ್ ಉಪ ರೂಪಾಂತರ ಬಿಎ.2 ದೇಶದಲ್ಲಿ ಈಗ ಹೆಚ್ಚು ಹರಡುತ್ತಿದೆ ಎಂದು ಹೇಳಿದರು.

ಕಳೆದ ವರ್ಷ ಡಿಸೆಂಬರ್ ನಲ್ಲಿ ಜಿನೋಮ್ ಅನುಕ್ರಮಣಿಕೆಯಲ್ಲಿ 1,292 ಒಮಿಕ್ರಾನ್ ರೂಪಾಂತರ ಪ್ರಕರಣಗಳು ಕಂಡುಬಂದಿವೆ ಎಂದು ಸರ್ಕಾರ ತಿಳಿಸಿದ್ದು, ಜನವರಿಯಲ್ಲಿ ಈ ಸಂಖ್ಯೆ 9,672ಕ್ಕೆ ಏರಿದೆ ಎಂದು ತಿಳಿಸಿದೆ.

ಹಿಂದಿನ ಏರಿಕೆಗಳಿಗೆ ಹೋಲಿಸಿದ್ರೆ ಪ್ರಸ್ತುತ ಅಲೆಯ ಸಮಯದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಅನುಗುಣವಾದ ಸಾವುಗಳು ತುಂಬಾ ಕಡಿಮೆ ಎಂದು ಸರ್ಕಾರ ಹೇಳಿದೆ.

ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕಾಗಿದೆ ಎಂದು ಪ್ರತಿಪಾದಿಸಿದ ಸರ್ಕಾರ, ಕೋವಿಡ್ ಪ್ರಕರಣಗಳ ಆರಂಭಿಕ ಸೂಚನೆಯನ್ನ ಕೆಲವು ಸ್ಥಳಗಳಲ್ಲಿ ವರದಿ ಮಾಡಲಾಗಿದೆ ಎಂದು ತಿಳಿಸಿದ್ದು, ಈ ಪ್ರವೃತ್ತಿಯನ್ನು ಗಮನಿಸಬೇಕಾಗಿದೆ ಎಂದು ಹೇಳಿದೆ.

ಸಕ್ರಿಯ ಕೋವಿಡ್ ಪ್ರಕರಣಗಳ ವಿಷಯದಲ್ಲಿ ಅಗ್ರ 10 ರಾಜ್ಯಗಳು ದೇಶದ ಒಟ್ಟು ಸಕ್ರಿಯ ಸೋಂಕುಗಳಲ್ಲಿ ಶೇಕಡಾ 77ಕ್ಕೂ ಹೆಚ್ಚು ಹೊಂದಿವೆ ಎಂದು ಸರ್ಕಾರ ಹೇಳಿದೆ. ಅವುಗಳೆಂದ್ರೆ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚು ದಾಖಲಿಸಲ್ಪಡುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BENGALURU:ವಾರದಲ್ಲಿ 5 ದಿನ ಆದೇಶ ವಾಪಾಸ್ ಪಡೆದ ರಾಜ್ಯ ಸರ್ಕಾರ;

Thu Jan 27 , 2022
ಬೆಂಗಳೂರು: ಕೊರೋನಾ ಸೋಂಕಿನ  ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ವೀಕೆಂಡ್ ಕರ್ಪ್ಯೂ  ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಿ, ಶನಿವಾರದಂದು ರಜೆ ಘೋಷಣೆ ( ಮಾಡಲಾಗಿತ್ತು. ವೀಕೆಂಡ್ ಕರ್ಪ್ಯೂ ರದ್ದುಗೊಂಡ ಕಾರಣ, ಈಗ ಆ ಆದೇಶವನ್ನು ವಾಪಾಸ್ ಪಡೆಯಲಾಗಿದೆ. ಹೀಗಾಗಿ ಇನ್ಮುಂದೆ ವಾರದ 6 ದಿನ ರಜೆ ಮಾಡುವಂತೆ ತಿಳಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟೀಕರಣ ಆದೇಶ […]

Advertisement

Wordpress Social Share Plugin powered by Ultimatelysocial