ಮುಸ್ಲಿಮರ ಮೀಸಲಾತಿ ಬದಲಾವಣೆ ಕುರಿತು (ಸುಪ್ರೀಂ ಕೋರ್ಟಿನ ಅಭಿಪ್ರಾಯದ ಹಿನ್ನೆಲೆ) !

ಕಲಬುರಗಿ ನಗರದ ಬಿಜೆಪಿ ವಿಭಾಗೀಯ ಮಾಧ್ಯಮ ಕೇಂದ್ರದಲ್ಲಿ ವಿಧಾನಸಭಾ ಸದಸ್ಯ ಶಶೀಲ್ ನಮೋಶಿಯವರ ಅಧ್ಯಕ್ಷತೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ರಾಜ್ಯ ವೈದ್ಯಕೀಯ ಪ್ರಕೋಷ್ಠ ಸಮಿತಿ ಸದಸ್ಯರಾದ ಡಾ. ಸುಧಾ ಹಾಲಕಾಯಿ ಅವರು ಮಾತನಾಡಿ, ಬಿಜೆಪಿ ಡಬಲ್ ಇಂಜಿನ್ ಸರ್ಕಾರದಿಂದ ಶಿಕ್ಷಣದಲ್ಲಿ, ವಸತಿ ನಿಲಯಗಳು ಹಾಗೂ ಮೀಸಲಾತಿಗಳನ್ನು ನೀಡುವಲ್ಲಿ ಅಪಾರ ಕೊಡಿಗೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ತ್ವಗಳಿಗೆ ಬದ್ಧವಾಗಿದೆ. ನಮ್ಮ ಡಬಲ್ ಇಂಜಿನ್ ಸರ್ಕಾರ ಎ‌‌ಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ತಪ್ಪು ಮಾಹಿತಿಯನ್ನ ಹರಡುವ ಮೂಲಕ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ. ಮೀಸಲಾತಿ ಹೆಚ್ಚಳವು ತಳ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದನ್ನು ಖಚಿತಪಡಿಸುತ್ತದೆ. ಬಿಜೆಪಿ ಸರ್ಕಾರ ಎ‌‌ಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ 750 ಕೋಟಿ ವೆಚ್ಚದಲ್ಲಿ 100 ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಗಳು ಮತ್ತು 10 ಕೆಆರ್‌ಇಐಎಸ್ ವಸತಿ ಶಾಲೆಗಳನ್ನು ನಿರ್ಮಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರವು 2019 ಮತ್ತು 2022ರ ಅವಧಿಯಲ್ಲಿ ಎ‌‌ಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಫಲಾನುಭವಿಗಳಿಗೆ ಅಂಬೇಡ್ಕರ್ ನಿವಾಸ ಯೋಜನೆಯಡಿ 69,450 ಮನೆಗಳನ್ನು ನಿರ್ಮಿಸಿದೆ ಎಂದು ತಿಳಿಸಿದರು.

ಇದೆ ವೇಳೆ ಕೇರಳದಲ್ಲಿ ನಂದಿನಿ ಉತ್ಪನ್ನಕ್ಕೆ ವಿರೋಧದ ಕುರಿತು ಸ್ಪಷ್ಟನೆ ನೀಡಿದ ಸುಧಾ ಹಾಲಕಾಯಿ, ಕೇರಳದಲ್ಲಿ ನಂದಿನಿ ಉತ್ಪನ್ನದ ವಿರೋಧಕ್ಕೆ ಕಾಂಗ್ರೆಸ್ ಕೈವಾಡವಿದೆ. ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಕೇರಳದಲ್ಲಿ ಮಾರಾಟ ಮಾಡಬಾರದು ಎಂದು ಕೇರಳದ ಮಿಲ್ಕ್ ಫೆಡರೇಷನ್ ಆಕ್ಷೇಪ ಸೂಚಿಸಿದೆ. ಇಷ್ಟು ವರ್ಷಗಳ ಕಾಲ ಬೇಡ ಎಂದಿಲ್ಲ ಇವಾಗ ಕೇರಳದಲ್ಲಿ ನಂದಿನಿ ಉತ್ಪನ್ನಕ್ಕೆ ವಿರೋಧ ಮಾಡ್ತಿದಾರೆ, ಇದಕ್ಕೆ ಕಾಂಗ್ರೆಸ್‌ನವರೇ ಕಾರಣ ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.

ವೀರ ಶೈವಲಿಂಗಾಯತ ಧರ್ಮವನ್ನು ವಡಿತಿವಿ ಎಂದವರ ಜೊತೆ ಕೈ ಜೋಡಿಸಿದ್ದಾರೆ ಮಾಜಿ ಡಿಸಿಎಂ ಲಕ್ಷ್ಮಣ ಸವಧಿ, ಸವದಿ ವಿರುದ್ಧ ಶಶೀಲ್ ನಮೋಶಿ ಗರಂ‌.

ಲಕ್ಷ್ಮಣ ಸವದಿ ಒಬ್ಬ ಅವಕಾಶವಾದಿ, ಸಂದರ್ಭಸಾಧಕ ವ್ಯಕ್ತಿ. ಪಕ್ಷ ಒಬ್ಬ ವ್ಯಕ್ತಿಗೆ ಏನೆಲ್ಲವನ್ನು ಕೊಡಬೇಕೋ ಅಷ್ಟನ್ನೂ ಪಕ್ಷ ಕೊಟ್ಟಿತ್ತು. ವ್ಯಕ್ತಿಯೊಬ್ಬರ ರಾಜಕೀಯ ಬೆಳವಣಿಗೆಗೆ ಪೂರಕ ಅಂಶಗಳನ್ನು ಪಕ್ಷ ಕೊಟ್ಟಿತ್ತು. ಯಾವಾಗ ತಮ್ಮ ವ್ಯಕ್ತಿತ್ವದ ಕಾರಣಕ್ಕೆ ಅವರು ಸಂಕಷ್ಟಕ್ಕೆ ಸಿಲುಕಿದ್ದರೋ ಆ ಸಂದರ್ಭದಲ್ಲೂ ಪಕ್ಷ ಅವರಿಗೆ ಜೊತೆಯಾಗಿ ನಿಂತಿತ್ತು. ಸೋತಂತ ಸಂದರ್ಭದಲ್ಲಿ ಪಕ್ಷ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿತ್ತು. ಅಷ್ಟೇ ಅಲ್ಲ, ಮಹಾರಾಷ್ಟ್ರದ ಚುನಾವಣೆಯಲ್ಲಿ ಅವರನ್ನು ಆ ಭಾಗದ ಉಸ್ತುವಾರಿಗಳನ್ನಾಗಿ ನೇಮಕ ಮಾಡಿತ್ತು. ಅವರು ಕರ್ನಾಟಕ ರಾಜ್ಯದ ಕೋರ್ ಕಮಿಟಿ ಸದಸ್ಯರು ಮತ್ತು ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರೂ ಆಗಿದ್ದರು. ಒಬ್ಬ ವ್ಯಕ್ತಿ ತಾನು ಬೆಳೆದುಬಂದ ರಾಜಕೀಯ ಪಕ್ಷ-ಸಿದ್ಧಾಂತವನ್ನು ಬದಿಗೊತ್ತಿ ತನ್ನ ಸ್ವಾರ್ಥಕ್ಕೋಸ್ಕರ ಇಂಥ ಘತುಕ ಕಾರ್ಯಕ್ಕೆ ಇಳಿದಿರುವುದು ನಿಜಕ್ಕೂ ದುಃಖ ತರುವ ಸಂಗತಿ. ಯಾವ ರಾಜಕೀಯ ಸಿದ್ಧಾಂತವನ್ನು ಇಷ್ಟು ವರ್ಷ ವಿರೋಧ ಮಾಡಿದರೋ, ಯಾವ ರಾಜಕೀಯ ಸಿದ್ಧಾಂತ ವೀರಶೈವ ಸಮುದಾಯವನ್ನು ಧರ್ಮವನ್ನು ವಿಭಜಿಸಲು ಪ್ರಯತ್ನ ಮಾಡಿತ್ತೋ, ಯಾವ ರಾಜಕೀಯ ಪಕ್ಷ ಪಂಚಮಸಾಲಿಗಳಿಗೆ ಕೊಟ್ಟ ಮೀಸಲಾತಿಯನ್ನು ವಿರೋಧ ಮಾಡಿತ್ತೋ, ಮತ್ತೆ ಅಧಿಕಾರಕ್ಕೆ ಬಂದರೆ ಅವರ ಮೀಸಲಾತಿ ವಾಪಸ್ ಪಡೆಯುವುದಾಗಿ ಹೇಳಿತ್ತೋ ಅಂಥ ಪಕ್ಷದ ಜೊತೆ ಶಾಮೀಲಾಗುವಂಥ ದಾರುಣ ಸ್ಥಿತಿಗೆ ಅವರನ್ನೇ ಅವರು ತಲುಪಿಸಿಕೊಂಡರು. ಇಂತಹಾ ವ್ಯಕ್ತಿಗೆ ನಮ್ಮ ಪಕ್ಷ ಅವಕಾಶ ಕೊಟ್ಟಿತ್ತು ಎಂದು ವಿಧಾನಸಭಾ ಸದಸ್ಯ ಶಶೀಲ್ ನಮೋಶಿ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವಧಿ ವಿರುದ್ದ ಕಿಡಿ ಕಾರಿದರು.

ಮುಸ್ಲಿಮರ ಮೀಸಲಾತಿ ಬದಲಾವಣೆ ಕುರಿತು (ಸುಪ್ರೀಂ ಕೋರ್ಟಿನ ಅಭಿಪ್ರಾಯದ ಹಿನ್ನೆಲೆ) ಒಂದು ಶಕ್ತಿವಂತ ಮತ್ತು ಬೃಹತ್ ರಾಷ್ಟ್ರವಾಗಿ ಹೊರಹೊಮ್ಮಲು, ಪ್ರತಿಯೊಬ್ಬ ನಾಗರಿಕರು ನೆಮ್ಮದಿಯ ಬದುಕು ಮಾಡಲು ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಶ್ರೇಷ್ಠ ಸಂಗತಿಗಳೇ ಕಾರಣ. ಅವರಿಗೆ ನಿಜವಾದ ಗೌರವ ಸಲ್ಲಿಸಲು ನಾವು ಮುಂದಾಗಬೇಕಿದೆ. ಮುಸಲ್ಮಾನರ ಮೀಸಲಾತಿ ಪ್ರಸ್ತುತ ಚರ್ಚೆಯ ವಿಷಯ. ಮುಸ್ಲಿಮರಿಗೆ ಕರ್ನಾಟಕದಲ್ಲಿ ಶೇ 4ರಷ್ಟು ಮೀಸಲಾತಿ ಕೊಟ್ಟಿದ್ದರು. ಅದು ಒಂದು ರೀತಿಯ ತುಷ್ಟೀಕರಣದ ರಾಜಕಾರಣದ ಭಾಗವಾಗಿಯೇ ಅದನ್ನು ಮಾಡಿದ್ದರು. ಮುಸ್ಲಿಮರ ಶೇ 4 ಮೀಸಲಾತಿಯ ವ್ಯವಸ್ಥೆಯಿಂದ ಶೇ 10 ಇಡಬ್ಲ್ಯುಎಸ್ (ಆರ್ಥಿಕವಾಗಿ ದುರ್ಬಲ ವರ್ಗ) ವ್ಯವಸ್ಥೆಗೆ ತರಲಾಗಿದೆ. ಆದ್ದರಿಂದ ಅವರಿಗೆ ಆ ಮೂಲಕ ಅವಕಾಶ ಮಾಡಿಕೊಟ್ಟಿದ್ದೇವೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ಕೊಡಿ ಎಂದು ಸಂವಿಧಾನ ಎಲ್ಲೂ ಹೇಳಿಲ್ಲ. ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ಸಂವಿಧಾನ ಹೇಳಿದೆ. ಆದರೆ, ಒಂದು ಸಮುದಾಯದವರನ್ನು ಓಲೈಸಿ ಮತಬ್ಯಾಂಕ್ ರಾಜಕಾರಣ ಮಾಡಿದ್ದನ್ನು ಸರಿಪಡಿಸಲು ಕರ್ನಾಟಕದ ಸರಕಾರ ಮುಂದಾಗಿದೆ. ಕರ್ನಾಟಕ ಅನುಷ್ಠಾನಗೊಳಿಸಿದ ಮೀಸಲಾತಿಯು ಸರಿಯಾಗಿಯೇ ಇದೆ. ತುಷ್ಟೀಕರಣದ ರಾಜಕೀಯಕ್ಕೆ ಒಂದು ಪಾಠ ಎಂಬುದು ಬಿಟ್ಟು ಬೇರೇನಿಲ್ಲ. ಈ ಕುರಿತು ವಿಧಾನಸಭಾ ಸದಸ್ಯ ಶಶೀಲ್ ನಮೋಶಿ ಸ್ಪಸ್ಟನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಾಮಾಜಿಕ ಮಾಧ್ಯಮ ಸಮಿತಿ ಸದಸ್ಯರು ಆನಂದ ಚವ್ಹಾಣ, ಅಲ್ಪ ಸಂಖ್ಯಾತರ ಮೊರ್ಚಾ ಕಲಬುರಗಿ ಮಹಾನಗರ ಜಿಲ್ಲಾ ಅಧ್ಯಕ್ಷರು ಅಬ್ದುಲ್ ಅಮೀದ್, ಕಲಬುರಗಿ ಗ್ರಾಮಾಂತರ ಜಿಲ್ಲಾ ವಕ್ತಾರರು ಶ್ರೀ ಚಂದ್ರಶೇಖರ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಗದೀಶ್ ಶೆಟ್ಟರ್ ‌ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಕಟ್ಟಿದ್ದಾರೆ.

Sat Apr 15 , 2023
ಕಾರ್ಯಕರ್ತರ ಸಭೆಯಲ್ಲಿ ಪ್ರದೀಪ್ ಶೆಟ್ಟರ್ ಹೇಳಿಕೆ. ಜಗದೀಶ್ ಶೆಟ್ಟರ್ ಸಹೋದರ MLC ಪ್ರದೀಪ್ ಶೆಟ್ಟರ್ ಹೇಳಿಕೆ. ಜಗದೀಶ್ ಶೆಟ್ಟರ್ ‌ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಕಟ್ಟಿದ್ದಾರೆ,  ಒಂದೇ ಒಂದು ಕಳಂಕ‌ ಇಲ್ಲದೇ ಕ್ಲೀನ್ ಹ್ಯಾಂಡ್ ಜಗದೀಶ್ ಶೆಟ್ಟರ್. ಬರೋ ದಿನಗಳಲ್ಲಿ ಒಳ್ಳೆದಾಗುತ್ತೆ..! ಮತ್ತೆ ರಾಜ್ಯದ ಚುಕ್ಕಾಣಿ ಹಿಡಿತಾರೆ,ಶಾಸಕರಾಗ್ತಾರೆ ಎಂದ ಪ್ರದೀಪ್ ಶೆಟ್ಟರ್. ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಸಿಎಂ ಆಗ್ತಾರೆ ಎಂದ ಪ್ರದೀಪ್ ಶೆಟ್ಟರ್. ನಾನು ವರಿಷ್ಠರಲ್ಲಿ ಕಾರಣ ಕೇಳ್ತೀನಿ..!  ಯಾಕೆ […]

Advertisement

Wordpress Social Share Plugin powered by Ultimatelysocial