ಚುನಾವಣಾ ಕರ್ತವ್ಯಕ್ಕೆ ಕವಿವಿ ಸಿಬ್ಬಂದಿ ನೇಮಕಕ್ಕೆ ವಿರೋಧ!

ಚುನಾವಣಾ ಕರ್ತವ್ಯಕ್ಕೆ ಕವಿವಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ನೇಮಕ ಮಾಡದಂತೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ ಕಾರ್ಯಕರ್ತರು ಡಿಸಿ ಕಚೇರಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿದರು….ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ ಇದೆ. ಭಾಗಶಃ ಸಿಬ್ಬಂದಿಯನ್ನು ಚುನಾವಣೆಯ ಬಿಎಲ್‌ಓಗಳನ್ನಾಗಿ ನೇಮಕ ಮಾಡಲಾಗಿದೆ. ಸಿಬ್ಬಂದಿ ಕೊರತೆ ಇದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ‌ ಡಿಸಿ ಅವರು ಹಲವಾರು ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ಹಾಕಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಗೈರು ಇರುವುದರಿಂದ‌ ಶೈಕ್ಷಣಿಕ ಕೆಲಸಕ್ಕೆ ದೂರದ ಊರುಗಳಿಂದ ಬರುವ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ‌ತೀವ್ರ ತೊಂದರೆಯಾಗುತ್ತಿದೆ. ಅಲ್ಲದೇ ಗುಣಮಟ್ಟದ ಶಿಕ್ಷಣ ನೀಡಲು ಕಿರಿಕಿರಿಯಾಗುತ್ತಿದೆ. ವಿಶ್ವವಿದ್ಯಾಲಯದ ಸಿಬ್ಬಂದಿಯನ್ನು ‌ಚುನಾವಣೆ ಕರ್ತವ್ಯವಕ್ಕೆ ನೇಮಕ ಮಾಡಬಾರದು ಎಂದು ಚುನಾವಣೆ ಆಯೋಗದ ಸೂಚನೆ ಇದ್ದರೂ ಜಿಲ್ಲಾಧಿಕಾರಿಯವರು ವಿವಿ ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನೇಮಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ (Thursday, December 29, 2022)

Thu Dec 29 , 2022
ನಿಮ್ಮ ಪ್ರಚಂಡ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ಆದರೆ ಪ್ರಸ್ತುತ ಚೇತನವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿರಿ. ಆರ್ಥಿಕ ಜೀವನದ ಸ್ಥಿತಿ ಇಂದು ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ, ಇಂದು ನಿಮ್ಮನ್ನು ಉಳಿಸಲು ನಿಮಗೆ ಕಷ್ಟವಾಗಬಹುದು. ಯುವಕರನ್ನು ಹೊಂದಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ಸಮಯ. ಪ್ರೀತಿಗಾಗಿ ವಿಶೇಷ ದಿನ- ರಾತ್ರಿಗಾಗಿ ಯಾವುದಾದರೂ ಯೋಜನೆ ಹಾಕಿ ಮತ್ತು ಇದನ್ನು ಸಾಧ್ಯವಾದಷ್ಟು ಪ್ರಣಯಮಯವಾಗಿಸಲು ಪ್ರಯತ್ನಿಸಿ. ಇಂದು, ನಿಮ್ಮ ಬಾಸ್ ಯಾವಾಗಲೂ […]

Advertisement

Wordpress Social Share Plugin powered by Ultimatelysocial