ಬೆಂಗಳೂರಿಗೆ ಕಂಟಕವಾಯ್ತು ಪಾದರಾಯನಪುರ…!

ಬೆಂಗಳೂರಿಗೆ ಕಂಟಕವಾಗಿರುವ ಪಾದರಾಯನಪುರದಲ್ಲಿ ಇಂದು ಅಲ್ಲಿನ ಪ್ರತಿಯೊಬ್ಬರಿಗೂ ಕೋವಿಡ್-19 ಟೆಸ್ಟ ಮಾಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಈಗಾಗಲೇ ಹಲವು ಜನರನ್ನು ಟೆಸ್ಟ್ ಗೆ ಒಳಪಡಿಸಲಾಗಿದೆ. ವಾರ್ಡನಲ್ಲಿ ರ್ಯಾಂಡಮ್ ಟೆಸ್ಟನಲ್ಲಿ 6 ಮಂದಿಗೆ ಸೋಂಕು ಧೃಡಪಟ್ಟಿರುವ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಹೊರತು ಪಡಿಸಿ, 188 ನಿವಾಸಿಗಳ ಮಾದರಿಗಳನ್ನ ಕಲೆಕ್ಟ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 6 ಜನರಿಗೆ ಸೋಂಕು ಧೃಡಪಟ್ಟಿದೆ.

ಇನ್ನು 26 ಪರೀಕ್ಷಾ ವರದಿ ಬರುವುದು ಬಾಕಿಯಿದ್ದು, ಯಾವುದೇ ಸಂಪರ್ಕ ಇಲ್ಲದಿದ್ದರೂ ಸೀಲ್ ಡೌನ್ ಆಗಿರುವ ವಾರ್ಡ್ ನಲ್ಲಿ ಆರು ಮಂದಿಗೆ ಸೋಂಕು ಉಂಟಾಗಿದೆ. ಇದರಲ್ಲಿ ಒಬ್ಬ ತರಕಾರಿ ವ್ಯಾಪಾರಿಯೂ ಇದ್ದುದ್ದರಿಂದ ಪಾದರಾಯನಪುರ ವಾರ್ಡ್ ನಲ್ಲಿ ಇನ್ನೂ ಹೆಚ್ಚು ಮಂದಿಗೆ ಸೋಂಕು ಉಂಟಾಗಿರಬಹುದು. ಹೀಗಾಗಿ ಸಾಮೂಹಿಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಪಾದರಾಯನಪುರದ ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆ  ಮಾಡಲಿದ್ದಾರೆ ಎನ್ನಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಆರೋಗ್ಯಾಧಿಕಾರಿಗಳು ಹೇಗೆ ಪರೀಕ್ಷೆ ನಡೆಸಬೇಕು. ಸಿಬ್ಬಂದಿ ಬಳಕೆ, ಭದ್ರತೆ ಸೇರಿದಂತೆ ಇನ್ನಿತರೆ ಸಿದ್ಧತೆ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಎಸ್.ಬಿ.ಐ ಗ್ರಾಹಕರಿಗೆ ಬಂಪರ್ ಆಫರ್..! 5 ನಿಮಿಷದಲ್ಲಿ ಸಿಗುತ್ತೆ 5ಲಕ್ಷದವರೆಗೆ ಲೋನ್…!

Sat May 9 , 2020
ದೇಶದಲ್ಲಿ ಅತಿ ಹೆಚ್ಚು ಸಾಲ ನೀಡಿರುವ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. ಲಾಕ್ ಡೌನ್ ಹಿನ್ನೆಲೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಹಕರಿಗೆ ನೆರವಾಗಲು ಎಸಬಿಐ ಬ್ಯಾಂಕ್ ಮುಂದಾಗಿದೆ. ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ‘SBI ತುರ್ತು ಸಾಲ ಯೋಜನೆ’ಯಡಿ ಅತಿ ಶೀಘ್ರ ಸಮಯದಲ್ಲಿ ಸುಮಾರು 5 ಲಕ್ಷದವೆರೆಗೆ ಸಾಲ ನೀಡಲು ಮುಂದಾಗಿದೆ. ಸದ್ಯ ಲಾಕ್ […]

Advertisement

Wordpress Social Share Plugin powered by Ultimatelysocial