ಬೆಂಗಳೂರು: ಕರೋನಾ ಬಿಕ್ಕಟ್ಟಿನ ಹಿನ್ನೆಲೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕ್ಷೌರಿಕ ಸಮುದಾಯ ಹಾಗೂ ದಂತ ವೈದ್ಯ ಸಮುದಾಯದವರು ಸುಗಮ ಜೀವನ ನಡೆಸಲು ಅನುವಾಗುವಂತೆ ಅವರು ವೃತ್ತಿ ಆರಂಭಿಸಲು ಅವಕಾಶ ನೀಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಈ ವೃತ್ತಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ನಿರ್ದೇಶನ ನೀಡುವ ಮೂಲಕ ವೃತ್ತಿ ಪುನರಾರಂಭಿಸಲು […]

ರಿಷಿ ಕಪೂರ್ ಎಂತಹ ಅದ್ಬುತ ನಟ. ಅವರಿಗೆ ಜೋಡಿಯಾಗಿ ನೀತು ಕಪೂರ್ ನಟಿಸಿದರೆ ಅಂದಿನ ಕಾಲಕ್ಕೆ ಆ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿತ್ತು. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಇವರು ಗೋಲ್ಡನ್ ಕಪಲ್ಸ್ ಎನ್ನುತ್ತಿದ್ದರು. ಅಷ್ಟೊಂದು ಜನಪ್ರಿಯತೆ ಹೊಂದಿದ್ದರು ಈ ಇಬ್ಬರು ತಾರೆಯರು. ರಿಷಿ ಕಪೂರ -ನೀತು ಕಪೂರ್ ಅವರ ಲವ್‌ಸ್ಟೋರಿಯು ಸಹಿತ ಸಿನಿಮಾ ತರಾನೆ ಇದೆ. ನೀತು ರೀಷಿ ಕಪೂರ್ ಜೊತೆ ೧೯೭೫ರ ವೇಳೆಗೆ ಸುಮಾರು ೧೫ […]

ಬೆಂಗಳೂರು: ಕೊರೊನಾ ಸೋಂಕು ಭಯದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದಿದೆ, ಕೆಲ ಸಮಯ ಭಯ ಪಡುವ ವಾತಾವಾರಣ ನಿರ್ಮಾಣವಾಗಿತ್ತು. ಪಟಾಕಿ ಮಾದರಿಯ ವಸ್ತು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ-ಅಶೋಕನಗರ ಜಂಕ್ಷನ್ ಬಳಿ ಪತ್ತೆಯಾಗಿದೆ. ಅದನ್ನು ಕಂಡು ಭಯಭೀತರಾದ ಜನ ಸ್ಫೋಟಕ ವಸ್ತು ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಹನುಮಂತನಗರ ಠಾಣಾ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ […]

ಕೃಷ್ಣಾ ನದಿ ಇಡೀ ಉತ್ತರ ಕರ್ನಾಟಕದ ಜೀವನದಿ. ಈ ನೀರಿನ ಸದ್ಭಳಕೆಗಿರುವ ಕಾನೂನು ತೊಡಕುಗಳನ್ನು ನಿವಾರಣೆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯವನ್ನು 519.6 ಮೀ. ನಿಂದ 524.256 ಮೀ. ವರೆಗೆ ಹಂತ ಹಂತವಾಗಿ ಏರಿಸಬೇಕೆನ್ನುವ ಪ್ರಸ್ತಾಪ ಸರ್ಕಾರದ ಮುಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲು ಚಿಂತನೆ ನಡೆದಿದೆ ಎಂದು […]

ರಾಜ್ಯದಲ್ಲಿ ಸದ್ಯಕ್ಕೆ ಮದ್ಯ ಮಾರಾಟ ಬೇಡವೇ ಬೇಡ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ  ಅವರು,  ಸದ್ಯ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮುಂದುವರೆದಿದೆ. ಈ ಹಂತದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ, ಬಡವರಿಗೆ, ಕಾರ್ಮಿಕರಿಗೆ ನೀಡುವ ಉಚಿತ ಆಹಾರ ಸಾಮಗ್ರಿಗಳು ಪೋಲಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಸದ್ಯಕ್ಕೆ ಮದ್ಯ ಮಾರಾಟ ಬೇಡವೇ ಬೇಡ.ಸದ್ಯ ದೇಶಾದ್ಯಂತ ಮದ್ಯ ಮಾರಾಟಕ್ಕೆ ಬ್ರೇಕ್ ನೀಡಿದೆ. ಕೇಂದ್ರ ಸರ್ಕಾರ […]

ಅಂತರ್ ರಾಜ್ಯಗಳಿಗೆ ತೆರಳುವ ವಾಹನಗಳಿಗೆ ಇಂದಿನಿಂದ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಸಂಪತ್ತಿನ ಕ್ರೂಢೀಕರಣಕ್ಕೆ ಸಂಬಂಧಿಸಿದಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೈಗಾರಿಕೆಗಳನ್ನು ತೆರೆಯುವ ಸಂಬಂಧ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಸೂಚನೆಯೊಂದು ಬಂದಿದೆ. ಅಂತರ ರಾಜ್ಯಗಳಿಗೆ ವಾಹನಗಳು ತೆರಳಲು ಅವಕಾಶ ಮಾಡಿಕೊಂಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ರಾಜ್ಯದಿಂದ ಹೊರ ರಾಜ್ಯಗಳಿಗೆ ವಾಹನ ಸವಾರರು ತೆರಳುತ್ತಾರೆ ಎಂದ್ರೇ, […]

ಬೆಂಗಳೂರು : ನಾನು ಆರೋಗ್ಯವಾಗಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.ಬೆಂಗತಳೂರಿನಲ್ಲಿ ಮಾತನಾಡಿದ ಅವರು,ಸೋಂಕಿತ ಪತ್ರಕರ್ತನೊಂದಿಗೆ ಸಂಪರ್ಕದಲ್ಲಿದ್ದ ಹಿನ್ನಲೆ ಕರ್ನಾಟಕದ ನಾಲ್ವರು ಸಚಿವರನ್ನು ಹೋಂ ಕ್ವಾರಂಟೈನನಲ್ಲಿಡಲಾಗಿದೆ. ಅವರಲ್ಲಿ ವೈದ್ಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡ ಒಬ್ಬರು. ಇದೀಗ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ನಾನು ಆರೋಗ್ಯವಾಗಿದ್ದೇನೆ . ಸಂಪುಟ ಸಭೆಗೆ ಹೋಗದಿರಲು ನಿರ್ಧಾರ ಮಾಡಿದ್ದೇನೆ. ಮೇ5ರವರೆಗೆ ಕ್ವಾರಂಟೈನ್ ನಲ್ಲಿರುತ್ತೇನೆ. ಇಂದು ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತೇನೆ. […]

ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿ ಹೆಸರಲ್ಲಿ ಅಸಂಘಟಿತ ವೃತ್ತಿಪರರಿಗೆ ಕಿರುಕುಳ ನೀಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆರ್.ಬಿ.ಐ ನಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಯಾವುದೇ ನಿರ್ದೇಶನಗಳು ಬ್ಯಾಂಕುಗಳಿಗೆ ರವಾನೆಯಾಗಿಲ್ಲ. ಕಾನೂನಿನ ವ್ಯಾಪ್ತಿಯಲ್ಲೇ ಈ ವರ್ಗದ ಜನರಿಗೆ ನೆರವು ನೀಡಬೇಕು.ಅಸಂಘಟಿತ ವೃತ್ತಿಪರರ ಪರವಾಗಿ ನಿರಂತರವಾಗಿ ಮಾತನಾಡುತ್ತಾ ಬಂದಿರುವ ಶಿವಕುಮಾರ್ ಈ ಸಂಬಂಧ ಈ ಹಿಂದೆಯೂ ಸುದ್ದಿಗೋಷ್ಟಿ […]

ಕೋವಿಡ್-೧೯ ವಿರುದ್ಧದ ಹೋರಾಟಕ್ಕೆ ಪಿಎಂಜೆ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳಿಗೆ ಅನುಕೂಲವಾಗುವಂತೆ ಯುಎಸ್ ಆಡಳಿತ ೩ಮಿಲಿಯನ್ ಹಣವನ್ನು ಭಾರತಕ್ಕೆ ನೀಡಿದೆ. ಕೋವಿಡ್೧೯ ಹರಡಿಕೆಯನ್ನು ಕಡಿಮೆ ಮಾಡಲು ಹಾಗೂ ಆರೋಗ್ಯ ಪೀಡಿತರಿಗೆ ಸಹಾಯ ಮಾಡುವ ದೃಷ್ಠಿಯಿಂದ ಭಾರತಕ್ಕೆ ೩ ಮಿಲಿಯನ್ ಹಣವನ್ನು ಯುಎಸ್ ಹಸ್ತಾಂತರಿಸಿದೆ ಎಂದು ಯುಎಸ್ ರಾಯಭಾರಿ ಕಚೇರಿ ತಿಳಿಸಿದೆ. ಭಾರತಕ್ಕೆ ಸಹಾಯ ಮಾಡಲು ಯುಎಸ್ ಏಜೆನ್ಸಿ ಫಾರ್ ಇಂರ‍್ನ್ಯಾಷನಲ್ ಡೆವಲಪ್ಮೆಂಟ್ ಇದುವರೆಗೆ ೯ ೫.೯ ಮಿಲಿಯನ್ ಹಣದ ನೆರವು ನೀಡಿದ್ದು, […]

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಇಂದು ಮತ್ತೆ 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ತಿಳಿದಿದೆ. ಹೊಸದಾಗಿ ಸೋಂಕಿತರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ವಿಜಯಪುರ 2, ಬೆಳಗಾವಿ 14, ತುಮಕೂರು 1, ಬೆಂಗಳೂರು ನಗರ 3 ಹಾಗೂ ದಾವಣಗೆರೆಯಲ್ಲಿ ಒಬ್ಬರಲ್ಲಿ  ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ […]

Advertisement

Wordpress Social Share Plugin powered by Ultimatelysocial