ಟೋಕಿಯೋ (ಜಪಾನ್): ಅಪಹಾಸ್ಯ ಹಾಗೂ ಟೀಕೆಯ ಕಾರಣದಿಂದಾಗಿ ಜಪಾನ್ ಸರ್ಕಾರವು ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಪ್ರಾರಂಭಿಸಿದ ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ಪ್ರಶ್ನಿಸಲು ಆರಂಭಿಸಿದ ಜನ, “ಅಬೆನೊಮಾಸ್ಕ್” ಎಂದು ಗೇಲಿ ಮಾಡಲು ಪ್ರಾರಂಭಿಸಿದ್ದರು.ಒಬ್ಬರಿಗೆ ಒಂದು ಮಾಸ್ಕ್ ಕೊಡುವ ಬದಲು, ಒಂದು ಮನೆಗೆ ೨ ಮಾಸ್ಕ್ ಕೊಡುವ ಕ್ರಮವನ್ನು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಮಾಸ್ಕ್ನ ಗುಣಮಟ್ಟ ಹಾಗೂ ಪರಿಣಾಮವನ್ನು ಅನುಮಾನಿಸಿದರು.ಮಾಸ್ಕ್ಗಳು ಬಟ್ಟೆಯಿಂದ […]

ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ. ೫೪ವರ್ಷದ ಇರ್ಫಾನ್ ಖಾನ್ ನ್ಯೂರೋ ಎಂಡೋಕ್ರೆöÊನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲಿದ್ದ ಇರ್ಫಾನ್ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ. ಕೋಕಿಲಾಬೆನ್ ಧಿರುಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಖಾನ್ ಪತ್ನಿ ಸುತಪಾ ಸಿಕದರ್ ಹಾಗೂ ಪುತ್ರರಾದ ಬಬಿಲ್ ಮತ್ತು ಆಯಾಖಾನ್ ಅವರನ್ನು ಬಿಟ್ಟು ಅಗಲಿದ್ದಾರೆ. ಇವರ ಸಾವಿಗೆ ನಟ,ನಟಿಯರು ಸಂತಾಪ ಸೂಚಿಸಿದ್ದಾರೆ.

ನವದೆಹಲಿ: ಕೊರೊನಾ ಲಾಕ್‌ಡೌನ್ ಹಿನ್ನಲೆ ಐಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ನಿರ್ಧರಿಸಿತ್ತು. ಆ ಆದೇಶವನ್ನು ಜುಲೈ ೩೧ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಎಲೆಕ್ಟಾçನಿಕ್ಸ್ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಓಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕೋರಿಕೆಯ ಮೇರೆಗೆ ಗೃಹ ನೀತಿಯಿಂದ ಕೆಲಸವನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ವಿಷಯದ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರತಿ ರಾಜ್ಯದ ಐಟಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

“ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜಕೀಯ ಸಲ್ಲದು ಎಂದು ಸಚಿವ ಕೆ.ಎಸ್. ಈಶ್ವರಪ್ಪ  ಹೇಳಿದ್ದಾರೆ., ಚಿತ್ರದುರ್ಗದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ನರೇಗಾ ಬಗ್ಗೆ ಚರ್ಚಿಸಲು ಎಲ್ಲಿಗೆ ಬೇಕಾದರೂ ಬರಲು ನಾನು ಸಿದ್ದ. ಸವಾಲಿಗೆ ಬೆನ್ನು ಹಾಕಿ ಹೋಗುವವನು ನಾನಲ್ಲ”. “ಡಿಕೆಶಿ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ. ಡಿಕೆಶಿ ಸಚಿವರಾಗಿದ್ದಾಗ ಲೂಟಿ ಹೊಡೆದಿದ್ದು ಯಾರು? ಅವರು ಒಳ್ಳೆಯ ಕೆಲಸ ಮಾಡಿದ್ದಾರಾ, ಭ್ರಷ್ಟಾಚಾರ ಮಾಡಿದ್ದಾರಾ ಎಂಬುದು ಚರ್ಚೆ ಆಗಲಿ” […]

ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರ ನೆರವಿಗೆ ಧಾವಿಸದೇ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಸಂಘಟಿತ ಕಾರ್ಮಿಕ ವಲಯದವರ ವಿಚಾರವಾಗಿ ಈವರೆಗೂ ಒಂದೇ ಒಂದು ಮಾತನ್ನೂ ಆಡಿಲ್ಲ. ಲಾಕ್​ಡೌನ್​ನಿಂದ ವಾಹನ ಚಾಲಕರು, ಕ್ಷೌರಿಕರು, ಬಟ್ಟೆ ಹೊಲಿಯುವವರು, ಆಟೋ ಚಾಲಕರು, ಹೊಟೇಲ್ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ […]

ನಟ ಸುದೀಪ್ ನಟನೆಯ ಕೋಟಿಗೊಬ್ಬ-೩ ಸಿನಿಮಾ ಹಾಡು ನಿನ್ನೆ ಬಿಡುಗಡೆಯಾಗಿದ್ದು, ದಾಖಲೆಯ ಮೊತ್ತಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಬಗ್ಗೆ ಪೋಸ್ಟ್ ಹಾಕಿದ ಆನಂದ್ ಆಡಿಯೋ ವಿರುದ್ಧ ದರ್ಶನ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕಾಶನೆ ಅದರಿಸುವ ಹಾಡು ಅತೀ ವೇಗವಾಗಿ ೧೦ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಎಂದು ಪೋಸ್ಟ್ ಪ್ರಕಟಿಸಿತ್ತು ಇದರಿಂದ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಅತಿವೇಗವಾಗಿ ೧೦ಲಕ್ಷ ವಿಕ್ಷಣೆ ಪಡೆದ ಹಾಡು ಇದಲ್ಲ. ಯಜಮಾನ ಚಿತ್ರದ […]

ಬೆಂಗಳೂರು: ಕೊರೊನಾ ಪೀಡಿತರಿಗಾಗಿ ಕ್ರಿಕೆಟ್‌ಗರ ಹೃದಯ ಮೀಡಿದಿದೆ .ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಎ.ಬಿ. ಡೆವಿಲಿಯರ್ಸ್ ತಾವು ಅಭ್ಯಾಸ ಮಾಡಿದ್ದ ಕ್ರಿಕೆಟ್ ಕಿಟ್‌ನ್ನೇ ಹರಾಜಿಗಿಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.  ಅವರು ಕೋವಿಡ್-೧೯ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು, ಗುಜರಾತ್ ಎದುರು ಕೊಹ್ಲಿ ಬಳಸಿದ್ದ ಬ್ಯಾಟ್ ಹಾಗೂ ಎಬಿಡಿ ಗ್ಲೌಸ್, ಜೆರ್ಸಿ ಹರಾಜು ಹಾಕಲು ಮುಂದಾಗಿದ್ದಾರೆ ಆಸಕ್ತರು ಆನ್‌ಲೈನ್ ಮೂಲಕ […]

ಕೊರೊನಾ ಹಿನ್ನಲೆ ಲಾಕ್‌ಡೌನ್‌ನಿಂದ ಬೀದಿಗೆ ಬಿದ್ದ ಜನರಿಗೆ ಸಹಾಯ ಹಸ್ತ ಚಾಚಲು ಬಾಲಿವುಡ್ ಸ್ಟಾರ್ ಅಮೀರ್‌ಖಾನ್ ಮುಂದಾಗಿದ್ದಾರೆ. ಹೌದು ಲಾಕ್‌ಡೌನ್ ಅನೇಕರ ಹೊಟ್ಟೆಗೆ ತಣ್ಣೀರು ಬಟ್ಟೆನೆ ಗತಿ ಎನ್ನುವಂತೆ ಮಾಡಿದೆ. ಅಂತಹವರಿಗೆ ಅಮೀರ್ ಖಾನ್ ಸಹಾಯ ಮಾಡುತ್ತಿದ್ದಾರೆ.  ಹಸಿವಿನಿಂದ ಕಂಗೆಟ್ಟಿರುವ ಜೀವಗಳಿಗೆ ಖಾನ್ ಒಂದು ಕೆ.ಜಿ ಹಿಟ್ಟಿನ ಜೊತೆ ತಲಾ ೧೫,೦೦೦ ರೂಪಾಯಿಯನ್ನು ನೀಡುವ ಮೂಲಕ ಬಡವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಬಳಕೆ ಮಾಡುವ ಪಿಪಿಇ ಕಿಟ್‌ಗಳನ್ನು ತಯಾರಿಸಲು ನೈರುತ್ಯ ರೈಲ್ವೆ ಇಲಾಖೆ ಮುಂದಾಗಿದೆ. ಪಿಪಿಇ ಕಿಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಡಿಆರ್‌ಡಿಓ ಸೂಚನೆ ಮೆರೆಗೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ಮತ್ತು ಮೈಸೂರು ವರ್ಕ್ಶಾಪ್‌ಗಳಲ್ಲಿ ಕೊರೊನಾ ವಾರಿಯರ್ಸ್ಗೆ ರಕ್ಷಣೆ ನೀಡುವ ವೈಯಕ್ತಿಕ ಕಿಟ್ ತಯಾರಿಸಲಾಗುತ್ತಿದ್ದು, ಇದುವರೆಗೂ ಹುಬ್ಬಳ್ಳಿ ೪೫೦, ಮೈಸೂರಲ್ಲಿ ೨೦೦ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು ೨೦ ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ರಾಜ್ಯದಲ್ಲಿ ಇಂದು ಮತ್ತೆ 11 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ . ಈ ಕುರಿತು  ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲಿಟಿನ್  ನಿಂದ ತಿಳಿದು ಬಂದಿದೆ. ಇಂದು 8 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 520 ಕ್ಕೆ ಏರಿಕೆಯಾಗಿದೆ. ಹೊಸದಾಗಿ  ಸೋಂಕಿತರ ಪೈಕಿ ಬಾಗಲಕೋಟೆಯಲ್ಲಿ ಮೂವರಿಗೆ, ಕಲಬುರ್ಗಿಯಲ್ಲಿ ಆರು […]

Advertisement

Wordpress Social Share Plugin powered by Ultimatelysocial