ಕೊರೊನಾ ವೈರಸ್ ಭೀತಿಯ ನಡುವೆಯೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಆಂಧ್ರ ಪ್ರದೇಶ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಸೆಪ್ಟೆಂಬರ್ 5 ರಿಂದ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಆಂಧ್ರಪ್ರದೇಶ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಸೆಪ್ಟೆಂಬರ್ 5 ರಿಂದ ಶಾಲೆಗಳನ್ನು ಆರಂಭಿಸಲಾಗುವುದು, ಶಾಲೆಗಳು ಆರಂಭವಾಗುವ ತನಕ ಮಧ್ಯಾಹ್ನದ ಬಿಸಿಯೂಟ ಯೋಜನೆ ದಿನಸಿ ಪದಾರ್ಥಗಳನ್ನು ಮಕ್ಕಳ ಮನೆಗೆ ತಲುಪಿಸಬೇಕಾಗುತ್ತದೆ ಎಂದು ತಿಳಿಸಿದರು.ಕೊರೊನಾ ವೈರಸ್ ಭೀತಿ ದಿನದಿಂದ […]

ಹೊಟೆಲ್ ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ 37 ವರ್ಷದ ಮಾಳು ರಾವುತಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿಜಯುರದಲ್ಲಿ ಬಿ.ಎಲ್.ಡಿ.ಈ. ಆಸ್ಪತ್ರೆಯ ಎದುರಿನ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾರೆ. ಆದರೆ ಈತನ ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಕುರಿತು ಎಪಿಎಂಸಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಘಾಜಿಯಾಬಾದ್​ನಲ್ಲಿ ನಡೆದ ಪತ್ರಕರ್ತನ ಕೊಲೆ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವಾಗ ಜನರಿಗೆ ರಾಮರಾಜ್ಯ ಸ್ಥಾಪನೆಯ ಭರವಸೆ ನೀಡಿತ್ತು. ಆದರೆ ಈಗ ಗೂಂಡಾ ರಾಜ್ಯ ನಿರ್ಮಾಣ ಮಾಡಿದೆ ಎಂದು ಕಟುವಾಗಿ ಆರೋಪಿಸಿದ್ದಾರೆ. ಪತ್ರಕರ್ತ ವಿಕ್ರಂ ಜೋಶಿ ಅವರು ತಮ್ಮ ಸಹೋದರಿಗೆ ದುಷ್ಕರ್ಮಿಗಳು ಕಿರುಕುಳ ನೀಡಿದ್ದನ್ನು ವಿರೋಧಿಸಿ ಜೀವ ಕಳೆದುಕೊಂಡರು. ಅವರ ಕುಟುಂಬಕ್ಕೆ […]

ಕೊರೊನಾ ವೈರಸ್ ಪಾಸಿಟಿವ್ ವ್ಯಕ್ತಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸದೆ ಆರೋಗ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಕೊರೊನಾ ಸೋಂಕು ದೃಢವಾದ ವ್ಯಕ್ತಿಗೆ ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ನರಳಾಟ ಅನುಭವಿಸಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 13 ರಂದು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದ 33 ವರ್ಷದ ವ್ಯಕ್ತಿಗೆ ನಿನ್ನೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.  ಚಿತ್ರದುರ್ಗದ ನೆಹರೂ ನಗರದ ಮನೆಯಲ್ಲಿ ವಾಸವಿರುವ ಸೋಂಕಿತ ವ್ಯಕ್ತಿಯನ್ನು ಕೋವಿಡ್ […]

ತಾಲ್ಲೂಕಿನ ಬಿಳಿಕಲ್‌ ಸಂರಕ್ಷಿತ ಅರಣ್ಯದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಎಂಟು ಪ್ರಾಣಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಉದ್ಯಾನದಲ್ಲಿ ನಡೆಯಿತು. ಸಂಡೂರಿನ ವೀರಭದ್ರಪ್ಪ ಸಂಗಪ್ಪ ಗಣಿ ಕಂಪನಿಯು ವಾಯುಪುತ್ರ ಹೆಸರಿನ ಹುಲಿ, ಕುಮಾರಸ್ವಾಮಿ ಮಿನರಲ್ಸ್‌ ಎಕ್ಸ್‌ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ಕೆಸರಿ ಹೆಸರಿನ ಸಿಂಹ ಹಾಗೂ ಪಿ. ಬಾಲಸುಬ್ಬ ಶೆಟ್ಟಿ ಅಂಡ್‌ ಸನ್‌ ಕಂಪನಿಯು ಚಾಮುಂಡಿ ಹೆಸರಿನ ಹುಲಿಯನ್ನು ದತ್ತು ತೆಗೆದುಕೊಂಡಿದೆ. ಮೂರೂ ಕಂಪನಿಗಳು ತಲಾ ₹1 ಲಕ್ಷ ಪಾವತಿಸಿವೆ. […]

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ ಹೊಸದಾಗಿ 37,724 ಮಂದಿಗೆ ಮಹಾಮಾರಿ ಸೋಂಕು ವಕ್ಕರಿಸಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 648 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೂ ಮಹಾಮಾರಿ ವೈರಸ್ ಗೆ ದೇಶದಲ್ಲಿ 28,732 ಮಂದಿ ಸಾವನ್ನಪ್ಪಿದ್ದಾರೆ. 11,92,915 ಮಂದಿ ಸೋಂಕಿತರ ಪೈಕಿ 7,53,050 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿನ್ನೂ […]

ಕೊರೊನಾ ಮಹಾಮಾರಿ ಹಿನ್ನಲೆಯಲ್ಲಿ ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ  ಕೊರೊನಾ ರೋಗ ಪತ್ತೆಯ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ  ಆರಂಭವಾಗಿದೆ. ವಿಧಾನ ಪರಿಷತ್ ಸದಸ್ಯ ಅರುಣ ಶಹಪೂರ,ಶಾಸಕ ದೇವಾನಂದ ಚವ್ಹಾಣ,  ಬಿ.ಎಲ್.ಡಿ.ಇ ಆಡಳಿತ ಮಂಡಳಿ ಸದಸ್ಯರಾದಂತಹ  ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಸುನೀಲಗೌಡ. ಬಿ.ಪಾಟೀಲ್, ಡಾ.ಎಂ.ಎಸ್.ಬಿರಾದಾರ ಉಪಸ್ಥಿತಿಯಲ್ಲಿ ಪೂಜೆಯೊಂದಿಗೆ ಲ್ಯಾಬ್ ತನ್ನ ಕಾರ್ಯ ಆರಂಭಿಸಿತು.‌  ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿಯೇ ಕೋವಿಡ್-19 ಶಂಕಿತರು ಹಾಗೂ ಸೋಂಕಿತರ ಆರೈಕೆಗಾಗಿ ಪ್ರತ್ಯೇಕ ವಾರ್ಡ್‍ಗಳನ್ನು […]

ಉಸಿರಾಟದ ಸಮಸೈ ಜ್ವರ ವಯೋಸಹಜ ಕಾಯಿಲೆಯಿಂದ ಅವರು ನಿಧನರಾಗಿದ್ದಾರೆ.ಜೂನ್ ೧೧ರಂದು ಲಾಲ್‌ಜಿ ತಂಡನ್ ಅವರನ್ನು ಲಖೌನದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನದಲ್ಲಿ ಟಂಡನ್ ಅವರು ರಾಜಕೀಯ ಬೆಳವಣಿಗೆ ಕಂಡಿದ್ದರು. ೨೦೯೯ರಲ್ಲಿ ಬಿಜೆಪಿ ಮುಖಂಡ ಲಾಲ್‌ಜಿ ಲಖೌನ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ೧೯೯೧ ರಿಂದ ೨೦೦೩ರ ವರೆಗೂ ಉತ್ತರ ಪ್ರದೇಶದ ಸಚಿವರಾಗಿ ಸೇವೆ ಸಲ್ಲಿದ್ದರು. ಆಗಸ್ಟ್ ೨೦೧೮ ರಿಂದ ಜುಲೈ ೨೦೧೯ರ […]

ಲಾಕ್ಡೌನ್ ಸಂರ‍್ಭದಲ್ಲೇ ೩೦೦ ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸಿದ್ದ ಸವಾರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಸಂಚಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಸವಾರ ಬೈಕ್ ಚಲಾಯಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಅದು ಸಕ್ಕತ್ ವೈರಲ್ ಆಗಿತ್ತು. ಬೈಕ್ ಸವಾರ ಮುನಿಯಪ್ಪ ಎಂದು ತಿಳಿದುಬಂದಿದೆ. ವಿಡಿಯೋ ಗಮನಿಸಿದ ಸಿಸಿಬಿ ಅಧಿಕಾರಿಗಳು, ಸವಾರವನ್ನು ಪತ್ತೆ ಮಾಡಿ ಬೈಕ್ ಜಪ್ತಿ ಮಾಡಿ ಸವಾರನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಕೊರೊನಾ ಸೋಂಕು ರಾಜ್ಯದಲ್ಲಿ ದೀನೆ ದೀನೆ ವ್ಯಾಪಕವಾಗಿ ಹಬ್ಬುತ್ತಿದೆ ರಾಜ್ಯ ಸರ್ಕಾರದ ಯಾವುದೇ ಕ್ರಮಗಳು ಸೋಂಕು ತಡೆಯವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಬೆಡ್ ಕೊರತೆ ಕಾಣುತ್ತಲೆ ಇದೆ. ಶಿಘ್ರವಾಗಿ ಇದರ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಕ್ರಮ ಅಷ್ಟು ಪರಿಣಾಮಕಾರಿ ಕಾರ್ಯ ರೂಪಕ್ಕೆ ಬಂದಿಲ್ಲ. ತಮಿಳುನಾಡಿನ ಸರ್ಕಾರ ೪ಲಕ್ಷ ೮೦ಸಾವಿರಕ್ಕೆ ಖರೀದಿಸಿದೆ ವೆಂಟಿಲೇಟರ್ ಖರೀದಿ ಮಾಡಿದೆ. […]

Advertisement

Wordpress Social Share Plugin powered by Ultimatelysocial