ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಧ್ವನಿ

ಘಾಜಿಯಾಬಾದ್​ನಲ್ಲಿ ನಡೆದ ಪತ್ರಕರ್ತನ ಕೊಲೆ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವಾಗ ಜನರಿಗೆ ರಾಮರಾಜ್ಯ ಸ್ಥಾಪನೆಯ ಭರವಸೆ ನೀಡಿತ್ತು. ಆದರೆ ಈಗ ಗೂಂಡಾ ರಾಜ್ಯ ನಿರ್ಮಾಣ ಮಾಡಿದೆ ಎಂದು ಕಟುವಾಗಿ ಆರೋಪಿಸಿದ್ದಾರೆ. ಪತ್ರಕರ್ತ ವಿಕ್ರಂ ಜೋಶಿ ಅವರು ತಮ್ಮ ಸಹೋದರಿಗೆ ದುಷ್ಕರ್ಮಿಗಳು ಕಿರುಕುಳ ನೀಡಿದ್ದನ್ನು ವಿರೋಧಿಸಿ ಜೀವ ಕಳೆದುಕೊಂಡರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ತನ್ನ ಸೋದರ ಸಂಬಂಧಿ ಯುವತಿಗೆ ದುಷ್ಕರ್ಮಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಜೋಶಿ ಜು.16ರಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸಿರಲಿಲ್ಲ. ಮಂಗಳವಾರ ರಾತ್ರಿ ಅದೇ ದುಷ್ಕರ್ಮಿಗಳು ವಿಕ್ರಂ ಜೋಶಿ ಅವರನ್ನು ಮಕ್ಕಳೆದುರೇ ಹತ್ಯೆ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನೇಣು ಹಾಕಿಕೊಂಡು ವ್ಯಕ್ತಿಯೊರ್ವ ಆತ್ಮಹತ್ಯೆಗೆ ಶರಣು

Wed Jul 22 , 2020
ಹೊಟೆಲ್ ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ 37 ವರ್ಷದ ಮಾಳು ರಾವುತಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿಜಯುರದಲ್ಲಿ ಬಿ.ಎಲ್.ಡಿ.ಈ. ಆಸ್ಪತ್ರೆಯ ಎದುರಿನ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾರೆ. ಆದರೆ ಈತನ ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಕುರಿತು ಎಪಿಎಂಸಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ Please follow and like us:

Advertisement

Wordpress Social Share Plugin powered by Ultimatelysocial