ಮಧುಮೇಹಿಗಳಲ್ಲಿ ನೋವಿನಿಂದ ಕೂಡಿದ ನರದೌರ್ಬಲ್ಯ ಮತ್ತು ಲೇಸರ್‌ ಚಿಕಿತ್ಸೆ

ಮಧುಮೇಹಿಗಳಲ್ಲಿ ನೋವಿನಿಂದ ಕೂಡಿದ ನರದೌರ್ಬಲ್ಯ ಮತ್ತು ಲೇಸರ್‌ ಚಿಕಿತ್ಸೆ

ಫಿಸಿಯೋಥೆರಪಿಯ ಮಧುಮೇಹ ಪಾದದ ಚಿಕಿತ್ಸೆಯ ವಿಭಾಗದಲ್ಲಿ ಪಾದಗಳ ನರದೌರ್ಬಲ್ಯಕ್ಕೆ ಲೇಸರ್‌ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ನರದೌರ್ಬಲ್ಯದ ಲಕ್ಷಣಗಳಾದ ಉರಿ, ಜುಮ್ಮೆನಿಸುವಿಕೆ, ನೋವು, ಸಂವೇದನಶೀಲತೆ ಗಳು ಕಡಿಮೆಯಾಗುತ್ತವೆ. ಈ ಚಿಕಿತ್ಸೆಯಲ್ಲಿ ಉಪಯೋಗಿಸುವ ಲೇಸರ್‌ ಕಿರಣಗಳು ಸಾಮಾನ್ಯ ಕಿರಣಗಳಾಗಿರದೆ ನೋವುಗಳ ಚಿಕಿತ್ಸೆಗೆಂದೇ ವಿಶೇಷವಾಗಿ ರೂಪುಗೊಂಡದ್ದಾಗಿರುತ್ತವೆ.

ಇವುಗಳಿಂದ ಯಾವುದೇ ವಿಧವಾದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ಇಪ್ಪತ್ತೂಂದನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಅಸಾಂಕ್ರಾಮಿಕ ರೋಗಗಳು ಒಂದು ಹೊರೆಯಾಗಿ ಪರಿಣಮಿಸಿವೆ. ಅವುಗಳೆಂದರೆ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು, ಕ್ಯಾನ್ಸರ್‌, ಪಾರ್ಶ್ವವಾಯು, ಮಧುಮೇಹ. ಅಂತಾರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದ ಪ್ರಕಾರ ಮಧುಮೇಹವು ಒಂದು ಜಾಗತಿಕ ಹೊರೆಯಾಗಿ ಪರಿಣಮಿಸುತ್ತಿದೆ. ಅಲ್ಲದೆ ಇದು ಆರ್ಥಿಕ ದುಸ್ಥಿತಿಗೂ ಕಾರಣವಾಗಿದೆ. ಮುಂದುವರಿದ ಮತ್ತು ಮುಂದುವರಿಯತ್ತಿರುವ ಎರಡೂ ರಾಷ್ಟ್ರಗಳಲ್ಲಿ ಇದು ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಮಧುಮೇಹ ಹೊಂದಿರುವವರು ಜೀವಕ್ಕೆ ತೊಂದರೆ ಉಂಟುಮಾಡುವ ವಿವಿಧ ಕಾಯಿಲೆಗಳಿಗೆ ತುತ್ತಾಗುವಅಪಾಯ ಜಾಸ್ತಿ ಇರುತ್ತದೆ. ಹಾಗಾಗಿ ಇವರಿಗೆ ವೈದ್ಯಕೀಯ ಆರೈಕೆಯ ಅಗತ್ಯವು ಹೆಚ್ಚಾಗಿ ಇರುವುದರಿಂದ ಇವರ ಜೀವನ ಮಟ್ಟ ಕುಂದುವುದರೊಂದಿಗೆ ಮನೆಯವರ ಮೇಲೂ ಒತ್ತಡ ಬೀಳುವಂತೆ ಮಾಡುತ್ತದೆ. ಮಧುಮೇಹ ಮತ್ತು ಅದರಿಂದ ಉಂಟಾಗುವ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಹೋದಲ್ಲಿ ಪದೇ ಪದೆ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಉಂಟಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷದಂದೇ ರಾಜ್ಯದ ಜನತೆಗೆ ಬಿಗ್‌ ಶಾಕ್‌: ಮತ್ತೆ ಕರೋನ ಸ್ಪೋಟ

Sun Jan 2 , 2022
ಬೆಂಗಳೂರು: ಹೊಸ ವರ್ಷ ದಂದೇ ರಾಜ್ಯದ ಜನತೆಗೆ ಬಿಗ್‌ ಶಾಕಿಂಗ್‌ ಸುದ್ದಿ ಸಿಕ್ಕಿದೆ. ಹೌದು, 1033 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಈ ಮೂಲಕ ಜನತೆಯಲ್ಲಿ ಮತ್ತೆ ಆತಂಕವನ್ನು ಹೆಚ್ಚಳ ಮಾಡಿದೆ. ಇಂದು ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 810 ಜನರಿಗೆ ಕರೋನ ಸೋಂಕು ಇಬ್ಬರು ಸಾವನ್ನಪ್ಪಿದ್ದು, ಇದೇ […]

Advertisement

Wordpress Social Share Plugin powered by Ultimatelysocial