4 ತಂಡಗಳಲ್ಲಿ ಕಾಂಗ್ರೆಸ್‌ ಬಸ್‌ ಯಾತ್ರೆ!

ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಬಸ್‌ ಯಾತ್ರೆಯನ್ನು ಒಟ್ಟಾಗಿ ಮಾಡಬೇಕೋ ಅಥವಾ ಎರಡು ತಂಡಗಳಲ್ಲಿ ಸೂಕ್ತವೋ ಎಂದು ಅಳೆದೂ ತೂಗಿ ಲೆಕ್ಕಾಚಾರ ಹಾಕಿದ ರಾಜ್ಯ ಕಾಂಗ್ರೆಸ್‌ ನಾಯಕರು ಅಂತಿಮವಾಗಿ ಎಲ್ಲ 224 ಕ್ಷೇತ್ರಗಳನ್ನೂ ತಲುಪುವಂತಾಗಲು ನಾಲ್ಕು ತಂಡಗಳಲ್ಲಿ ಪ್ರವಾಸ ಹೊರಡಲು ನಿರ್ಧರಿಸಿದ್ದಾರೆ.ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್‌ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್‌ – ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್‌ ನೇತೃತ್ವದ ಈ ನಾಲ್ಕು ತಂಡಗಳು ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಪ್ರವಾಸ ಶುರು ಮಾಡಲಿವೆ.ಬಿಜೆಪಿಯ ನವಶಕ್ತಿ ಸಮಾವೇಶಕ್ಕೆ ಪ್ರತಿಯಾಗಿ ‘ಐಕ್ಯತಾ ಸಮಾವೇಶ’ ನಡೆಸುವ ಸಂಬಂಧ ನಗರದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹಿರಿಯ ನಾಯಕರು ಸಮಾಲೋಚನೆ ಬಳಿಕ ಈ ತೀರ್ಮಾನಕ್ಕೆ ಬಂದಿದ್ದಾರೆ. ವರ್ಷಾಂತ್ಯದ ಕೊನೇ ವಾರ ಅಥವಾ ವರ್ಷಾರಂಭದ ಮೊದಲ ವಾರದಿಂದಲೇ ಪೂರ್ಣ ಪ್ರಮಾಣದಲ್ಲಿ ಪ್ರಚಾರದ ಅಖಾಡಕ್ಕೆ ಇಳಿಯಲು ನಿರ್ಧರಿಸಲಾಗಿದೆ. ರಾಜ್ಯ ಕಾಂಗ್ರೆಸ್‌ನ ಎಲ್ಲ ಮುಂಚೂಣಿ ನಾಯಕರೂ ಒಟ್ಟಿಗೇ ಬಸ್‌ ಯಾತ್ರೆ ಹೊರಡುವುದು. ಆ ಬಳಿಕ, ನಾಲ್ಕು ಪ್ರತ್ಯೇಕ ತಂಡಗಳಲ್ಲಿ ರಾಜ್ಯ ಸುತ್ತುವ ತೀರ್ಮಾನಕ್ಕೆ ಬರಲಾಗಿದೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರು ಒಟ್ಟಿಗೇ ಬಸ್‌ ಯಾತ್ರೆ ಹೊರಡುವ ಚಿಂತನೆ ಇತ್ತು. ಆದರೆ, ಭಾನುವಾರ ನಡೆದ ಸಭೆಯಲ್ಲಿ ಸೀಮಿತ ಕಾಲಾವಕಾಶದಲ್ಲಿಪ್ರತಿ ಕ್ಷೇತ್ರವನ್ನೂ ತಲುಪುವಂತೆ ಯಾತ್ರೆ ನಡೆಸುವ ವಿಚಾರದ ಚರ್ಚೆ ನಡೆಯಿತು. ಎಲ್ಲ 224 ಕ್ಷೇತ್ರಗಳಲ್ಲೂ ಕನಿಷ್ಠ ಒಂದು ಕಾರ್ಯಕ್ರಮ ನಡೆಯಬೇಕು. ಆದರೆ, ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಜನವರಿಯಲ್ಲಿ ಜಂಟಿ ಅಧಿವೇಶನ, ಫೆಬ್ರವರಿಯಲ್ಲಿ ಬಜೆಟ್‌ ಅಧಿವೇಶನ ಶುರುವಾಗಲಿದೆ. ಮಾರ್ಚ್ ಕೊನೆಗೆ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಸಾಧ್ಯತೆ ಚರ್ಚೆಯಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಸೇರ್ಪಡೆ ಗುಟ್ಟು ಬಿಚ್ಚಿಟ್ಟ ಸಂಸದೆ ಸುಮಲತಾ

Fri Jan 6 , 2023
ಮಂಡ್ಯ : ಬಿಜೆಪಿ ಸೇರ್ಪಡೆ ಕುರಿತು ಸಂಸದೆ ಸುಮಲತಾ ಜೊತೆ ಪಕ್ಷದ ವರಿಷ್ಠರು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದರು. ಇದೀಗ ಈ ಕುರಿತು ಸಂಸದೆ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ.ಮಂಡ್ಯದಲ್ಲಿ ಮಾತನಾಡಿದ ಅವರು ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಸಹ ಈ ಬಗ್ಗೆ ಮಾತನಾಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಸದ್ಯಕ್ಕೆ ನಾನು ಬಿಜೆಪಿ […]

Advertisement

Wordpress Social Share Plugin powered by Ultimatelysocial