ನಟ ಜಗ್ಗೇಶ್ ಅವರು ಕನ್ನಡದ ಕಣ್ಮಣಿ ವರನಟ ಡಾ ರಾಜ್ ಕುಮಾರ್ ಅವರನ್ನ ನೆನೆಸಿಕೊಂಡು ಟ್ವೀಟ್‌ವೊಂದನ್ನ ಮಾಡಿದ್ದಾರೆ.ಹೌದು ವರನಟ ರಾಜ್ ಕುಮರ್ ಅವರು ಚಾಮುಂಡಿ ದೇವಿಯ ಕುರಿತಾಗಿ ಹಾಡೊಂದನ್ನ ಹಾಡಿದ್ದರು ಅದನ್ನ ನೆನೆಸಿಕೊಂಡಿರುವ ಜಗ್ಗೇಶ್ ಟ್ವೀಟ್ವೊಂದನ್ನ ಮಾಡಿದ್ದಾರೆ. “ಈ ಕಾರ್ಯಕ್ರಮ ಆದ ಮೂರು ದಿನಕ್ಕೆ ಅಣ್ಣನ ನೋಡಲು ಹೋದೆ ಅವರು ಮಲಗಿದ್ದರು! ಆಗ ಅಮ್ಮ ಹೇಳಿದ್ದು!ತುಂಬ ವರ್ಷಗಳಾಗಿತ್ತು ಯಜಮಾನರು ಈ ಹಾಡು ಹಾಡಿ suಜಜeಟಿಟಥಿ ಹಾಡಿಬಿಟ್ಟರು ನಾನು ಕೇಳಿ ಖುಷಿಯಾಗಿಬಿಟ್ಟೆ […]

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಿರಾಳರಾಗಿದ್ದಾರೆ. ತಮ್ಮ ಕಾರು ಚಾಲಕನಿಗೆ ಕೊರೊನಾ ಟೆಸ್ಟ್ ವೇಳೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದ ಭಾಸ್ಕರ್ ರಾವ್ ಅವರಿಗೆ ನೆಗೆಟಿವ್ ಬಂದಿದೆ. ಕಾರು ಚಾಲಕನಿಗೆ ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಹೋಂ ಕ್ವಾರಂಟೈನ್ ಆಗಿದ್ದರು. ಅಲ್ಲದೇ, ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ನೆಗೆಟಿವ್ ಬಂದಿದೆ. ಈ ಕುರಿತಂತೆ ಟ್ವೀಟ್ ಮಾಡಿದ ಅವರು “ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ […]

ಭಾರತ ಮತ್ತು ಚೀನಾ ಗಡಿ ಸಂಘರ್ಷ ಹಸಿಯಿರುವಾಗಲೇ ಭಾರತ ಮತ್ತು ಅಮೇರಿಕಾ ನೌಕಾಪಡೆಗಳು ಅಂಡಮಾನ್ ಮತ್ತು ನಿಕೋಬಾರ್ ಬಳಿ ಜಂಟಿ ಸಮರಭ್ಯಾಸವನ್ನ ನಡೆಸುತ್ತಿವೆ. ಯುಎಸ್‌ಎಸ್ ನಿಮಿಟ್ಜ್ ನೇತೃತ್ವದ ಅಮೆರಿಕದ ಫ್ಲೋಟಿಲ್ಲಾ ಪರಮಾಣು ಚಾಲಿತ ವಿಮಾನ ವಾಹಕ ನೌಕೆ ಹಾಗೂ ಭಾರತೀಯ ನೌಕಪಡೆಗಳು ಉಭಯ ಪಡೆಗಳ ನಡುವಣ ವಿಶ್ವಾಸ ಮೂಡಿಸಲು ಪಾಸೆಕ್ಸ್ ಕುಶಲತೆಯ ಪ್ರದರ್ಶನ ನಡೆಸಿವೆ.ಚೀನಾದ ವಿಸ್ತರಣಾವಾದಿ ಯೋಜನೆಗಳಿಗೆ ತಡೆಯೊಡುವ ನಿಟ್ಟಿನಲ್ಲಿ ನಿಮ್ಟಿಜ್ ಮತ್ತು ಮತ್ತೊಂದು ವಿಮಾನ ವಾಹನ ನೌಕೆ ರೋನಾಲ್ಡ್ […]

ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಸತತ ೨ ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಬಡಾವಣೆಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ್ದು ಸ್ವತಃ ಮಾನ್ಯ ಜನಸ್ನೇಹಿ ಶಾಸಕರೇ ಬಿ.ಬಿ.ಎಂ.ಪಿ ಕಚೇರಿ ಕಂಟ್ರೋಲ್ ರೂಮ್ ಗೆ ಬಂದು ಸ್ವತಃ ಕರೆಗಳನ್ನು ಸ್ವೀಕರಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ

ಬಕ್ರೀದ್ ಹಬ್ಬಕ್ಕಾಗಿ ಬಲಿಕೊಡಲು ತಂದಿದ್ದ 8 ಒಂಟೆಗಳನ್ನು ಕಲಬುರ್ಗಿ ಜಿಲ್ಲೆಯಲ್ಲಿ ರಕ್ಷಣೆ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ 6 ಜನರನ್ನು ಬಂಧಿಸಲಾಗಿದೆ. ಕಲಬುರ್ಗಿ ಜಿಲ್ಲೆ ಆಳಂದ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ಪೊಲೀಸರು ಒಂಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಒಂದೊಂದು ಒಂಟೆ 50 ಸಾವಿರ ರೂಪಾಯಿ ಬೆಲೆ ಬಾಳುತ್ತಿವೆ. ಒಟ್ಟು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಎಂಟು […]

ಅಸ್ಸಾ0 ಭೀಕರ ಪ್ರವಾಹದಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಪಾರ ಮೌಲ್ಯದ ಆಸ್ತಿ ಪಾಸ್ತಿ ಉಂಟಾಗಿದ್ದು, ಅಗತ್ಯ ಬಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡಲು ಸಿದ್ಧವಿರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರರೊಬ್ಬರು ತಿಳಿಸಿದ್ದಾರೆ. ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದಾಗಿ ಸುಮಾರು ೪ ಮಿಲಿಯನ್ ನಷ್ಟು ಜನರು ಸ್ಥಳಾಂತರವಾಗಿರುವ ಬಗ್ಗೆ ಸಹೋದ್ಯೋಗಿಗಳು ತಿಳಿಸಿದ್ದು, ಅಗತ್ಯವಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡುವಾದಿಗ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರ ಡುಜಾರಿಕ್ ಹೇಳಿದ್ದಾರೆ.ಅಸ್ಸಾಂನ ೨೪ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು, […]

ಕನ್ನಡದಲ್ಲಿ ಡಬ್ಬಿಂಗ್ ಧಾರಾವಾಹಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಇದರಿಂದ ಕನ್ನಡ ಕಲಾವಿದರು ತಂತ್ರಜ್ಙರು ಸಂಕಷ್ಟದಲ್ಲಿದ್ದಾರೆ….ಹೌದು ಈಗಗಲೇ ಕನ್ನಡದ ಕಲಾವಿದರು, ತಂತ್ರಜ್ಙರು ಹಾಗು ಇತರ ವರ್ಗದವರ ಮೇಲೆ ಕೊರೊನಾ ಬರೆ ಎಳೆದಿದೆ ಅದರ ನಡುವೇ ಕನ್ನಡದ ಕಿರುತೆರೆಗೆ ಡಬ್ಬಿಂಗ್ ಭೂತ ಇನ್ನಿಲ್ಲದಂತೆ ಕಾಡುತ್ತಿದೆ, ಇದರಿಂದ ಕಲಾವಿದರು, ತಂತ್ರಜ್ಙರು ಭಾರಿ ಆತಂಕಕ್ಕೆ ಒಳಗಾಗಿದ್ದಾರೆ.ಮುಂದೇನು ಎನ್ನುವ ಪ್ರಶ್ನೆ ಅವರನ್ನ ಕಾಡತೊಡಗಿದೆ. ಈಗಲೇ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವವರಿಗೆ ನಿಜಕ್ಕೂ ಇದು ನುಂಗಲಾರದ ತುತ್ತಾಗಿ […]

ಕಾಂಗ್ರೆಸ್ ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ 78 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ  ಸದಾಶಿವನಗರದಲ್ಲಿರುವ ಖರ್ಗೆ ಮನೆಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಶುಭಾಶಯ ತಿಳಿಸಿದರು. ಹಾಗೆಯೇ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸಹ ಹಿರಿಯ ರಾಜಕಾರಣಿಗಳು, ಸಂಸದರೂ ಆಗಿರುವ ಆತ್ಮೀಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದರು.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 37,148  ಮಂದಿಗೆ ಕೊರೊನಾ ಸೋಂಕು ತಗುಲಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,55,191ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 587 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ 28,084 ಮಂದಿ ಮಹಾಮಾರಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. 11,55,191 ಮಂದಿ ಸೋಂಕಿತರ ಪೈಕಿ 7,24,578 ಜನರು ಕೊರೊನಾದಿಂದ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ ಉಳಿದ 4,02,529 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ಈಶಾನ್ಯ ರಾಜ್ಯ ಅಸ್ಸಾಂಗೆ ಮಳೆ, ಪ್ರವಾಹ ಹೊಸತಲ್ಲ. ಆದರೆ, ಈ ವರ್ಷ ಕೋವಿಡ್ ವೈರಸ್ ವಿರುದ್ಧದ ಹೋರಾಟದ ನಡುವೆಯೇ ಪ್ರವಾಹದ ವಿರುದ್ಧವೂ ಸೆಣಸಬೇಕಾದ ಅನಿವಾರ್ಯತೆಗೆ ರಾಜ್ಯ ಸಿಲುಕಿದೆ. ಇಲ್ಲಿನ ೩೩ ಜಿಲ್ಲೆಗಳ ಪೈಕಿ ೨೫ ಜಿಲ್ಲೆಗಳು ಮಳೆ, ಪ್ರವಾಹದಿಂದ ತತ್ತರಿಸಿಹೋಗಿದ್ದು, ೪೦ ಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ. ಅದರಲ್ಲೂ ವಿಶ್ವವಿಖ್ಯಾತ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅಸ್ಸಾಂನ ಹೆಮ್ಮೆ ಎಂದೇ ಕರೆಯಲ್ಪಡುವ ಒಂದು ಕೊಂಬಿನ ಘೇಂಡಾಮೃಗಗಳು […]

Advertisement

Wordpress Social Share Plugin powered by Ultimatelysocial