ನೊಯ್ಡಾ: ಗೌತಮ್ ಬುದ್ಧ್ ನಗರದ ಎಂಟು ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ ಅಲ್ಲಿನ ಕೆಲ ಖಾಸಗಿ ಪ್ರಯೋಗಾಲಯಗಳು ಅವರಿಗೆ ಕೋವಿಡ್-19 ಪಾಸಿಟಿವ್ ಎಂದು ತಪ್ಪಾಗಿ ವರದಿ ನೀಡಿರುವ  ವ್ಯಕ್ತಿಗಳ ಗಂಟಲು ದ್ರವ ಮಾದರಿಗಳನ್ನು ಸರಕಾರಿ ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಸಿದಾಗ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಎಂಟು ಮಂದಿಯನ್ನು ಇದೀಗ ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ತಪ್ಪು ವರದಿ ನೀಡಿದ್ದ  ಖಾಸಗಿ […]

ಬೆಂಗಳೂರು: ತಳವಾರ, ಪರಿವಾರ ಮತ್ತು ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆ ಅನುಸಾರ ರಾಜ್ಯದಲ್ಲಿಯೂ ಅಧಿಸೂಚನೆ ಹೊರಡಿಸಲು ಆದೇಶ ನೀಡಲಾಗಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಕುರಿತು ಮಾಹಿತಿ ನೀಡಿ, ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿರುವ ಸಿದ್ದಿ ಸಮುದಾಯದವರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆ ಅನ್ವಯ ರಾಜ್ಯದಲ್ಲಿ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.ಹಲವು […]

ಮದ್ರಾಸ್: ಕೊರೊನಾವೈರಸ್ ನೆಪ ಹೇಳಿ ಹೂಡಿಕೆದಾರರಿಗೆ ಹಣ ಮರಳಿಸದೇ ಬಿಕ್ಕಟ್ಟಿಗೆ ಕಾರಣವಾಗಿರುವ ಫ್ರಾಂಕ್ಲಿನ್ ಟೆಂಪಲ್‌ಟನ್ ಮ್ಯೂಚುವಲ್ ಫಂಡ್ ಮತ್ತು ಷೇರು ನಿಯಂತ್ರಣ ಮಂಡಳಿಗೆ (ಸೆಬಿ) ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಫ್ರಾಂಕ್ಲಿನ್ ಟೆಂಪಲ್‌ಟನ್ ಅಸೆಸ್ ಮ್ಯಾನೇಜ್‌ಮೆಂಟ್, ಮ್ಯೂಚುವಲ್ ಫಂಡ್‌ನ ಟ್ರಸ್ಟಿಗಳು, ಅಧ್ಯಕ್ಷ ಸಂಜಯ್ ಸಪ್ರೆ ಸೇರಿದಂತೆ ಇತರೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ನವದೆಹಲಿ: ದೇಶಾದ್ಯಂತ ವಲಸೆ ಕಾಮಿರ್ಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದ ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳಲ್ಲಿ ಈವರೆಗೆ 80 ಜನರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸುರಕ್ಷತಾ ದಳ ತಿಳಿಸಿದೆ. ದೇಶದ ವಿವಿಧ ಭಾಗಗಳಿಂದ ಮೇ 1ರಿಂದ ಮೇ 27ರವರೆಗೆ ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳನ್ನು ಬಿಡಲಾಗಿತ್ತು. ಈ ಅವಧಿಯಲ್ಲಿ ಒಟ್ಟಾರೆ ದೇಶಾದ್ಯಂತ 3,870 ರೈಲುಗಳು ಸಂಚರಿಸಿವೆ. ಇದರಲ್ಲಿ ಅಂದಾಜು 50 ಲಕ್ಷಕ್ಕೂ ಅಧಿಕ ಜನರು ತಮ್ಮ ಊರುಗಳಿಗೆ ತೆರಳಿದ್ದಾರೆ. ಮೇ 9 ರಿಂದ ಮೇ […]

ವಾಡಿ: ಪಟ್ಟಣದಲ್ಲಿ ಶುಕ್ರವಾರ ಅಪ್ರಾಪ್ತ ಬಾಲಕಿಯ ಮದುವೆಗೆ ಸಿದ್ಧತೆ ನಡೆದ ವೇಳೆ ದಾಳಿ ಮಾಡಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಚೈಲ್ಡ್ ಲೈನ್ ಸಂಘಟನೆಯವರು ಮದುವೆ ನಿಲ್ಲಿಸಿ, ಬಾಲಕಿಯನ್ನು ರಕ್ಷಿಸಿದರು. 16 ವರ್ಷದ ಬಾಲಕಿಯ ಮದುವೆ ಕಲಬುರ್ಗಿಯ 26 ವರ್ಷದ ಯುವಕನೊಂದಿಗೆ ನಿಶ್ಚಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ಸಹಾಯದಿಂದ ದಾಳಿ ನಡೆಸಿದ ಅಧಿಕಾರಿಗಳು ಮದುವೆ ನಿಲ್ಲಿಸಿದರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ನಾಗಮ್ಮ […]

ಪ್ರತಿನಿತ್ಯ ಕೊರೊನಾ ಸೋಂಕಿತರ ಆರೋಗ್ಯ ಕಾಪಾಡುವಲ್ಲಿ ಕೊರೊನಾ ವಾರಿಯರ್ಸ್ ಗೆ ಕ್ರಿಕೆಟರ್ ಕೆ.ಎಲ್. ರಾಹುಲ್  ಪೂಮಾ ಶೂಗಳನ್ನು  ಕೊಡುಗೆಯಾಗಿ ನೀಡಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಅನೇಕ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಹಲವಾರು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಪ್ರತಿನಿತ್ಯ ಕೊರೊನಾ ಸೋಂಕಿತರ ಆರೋಗ್ಯ ಕಾಪಾಡುವಲ್ಲಿ ಕೊರೊನಾ ವಾರಿಯರ್ಸ್ ಶ್ರಮ ಪಡುತ್ತಿದ್ದಾರೆ. ಪ್ರತಿನಿತ್ಯ ವೈದ್ಯರು, ನರ್ಸ್‌ಗಳು, ಪೊಲೀಸರು ಸೇರಿದಂತೆ ಹಲವಾರು ಮಂದಿ ಕೊರೊನಾ […]

ಧಾರವಾಡ: ನಾಲ್ಕೈದು ದಿನಗಳಿಂದ ರೌಡಿಯಂತೆ ಸಾರ್ವಜನಿಕರಿಗೆ ಉಪಟಳ ಕೊಡುತ್ತ, ಅರಣ್ಯ ಇಲಾಖೆ ಸಿಬ್ಬಂದಿಗೂ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಒಂಟಿ‌ ಕೋತಿಯನ್ನು ಇಂದು ಸೆರೆ ಹಿಡಿಯಲಾಗಿದೆ. ಧಾರವಾಡದ ಮದಿಹಾಳ ಮತ್ತು ಡಿಪೋ ಸರ್ಕಲ್ ಏರಿಯಾದಲ್ಲಿ ಓಡಾಡುತ್ತಿದ್ದ ಒಂಟಿ‌ ಕೋತಿ ನಾಲ್ಕೈದು ದಿನದಿಂದ 20ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿತ್ತು. ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದ ಈ ಮಂಗ ಸ್ಥಳೀಯರ ಪಾಲಿಗೆ ರೌಡಿ ಕೋತಿಯೇ ಆಗಿತ್ತು. ಈ ಕೋತಿಯನ್ನು ಸೆರೆ ಹಿಡಿಯಲು ಶುಕ್ರವಾರದಿಂದ […]

ಬರೋಬ್ಬರಿ 70‌ ವರ್ಷ ಎಂದಿಗೂ ಬೇರ್ಪಡದೆ ಬಾಳಬಂಡಿ ಎಳೆದಿದ್ದ ದಂಪತಿ ಕೊರೋನಾ ವೈರಸ್‌ನಿಂದ ತಿಂಗಳುಗಟ್ಟಲೆ ಬೇರ್ಪಟ್ಟಿದ್ದರು. ಆದರೀಗ ಒಬ್ಬರಿಗೊಬ್ಬರು ಸಂಧಿಸಿದ್ದು ದೊಡ್ಡ ಸುದ್ದಿಯಾಗಿದೆ.ಈ ದಂಪತಿಯ ಪುನರ್ಮಿಲನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್ ಮೂಲದ ಜಿಮ್ ಮತ್ತು ವಾಲ್ಟರ್ ವಿಲ್ಲರ್ಡ್ ಎಂಬುವರು ವಿವಾಹವಾಗಿ 70 ವರ್ಷ ಕಳೆದಿದ್ದರು. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಅವರಿಬ್ಬರು ಪ್ರತ್ಯೇಕವಾಗಿ ವಾಸಿಸುವಂತೆ ಆಗಿತ್ತು. ಕಳೆದ ವರ್ಷ ಜಿನ್ ಸೊಂಟ ಮುರಿದುಕೊಂಡು ಆರೈಕೆ ಗೃಹಕ್ಕೆ ಸ್ಥಳಾಂತರವಾಗಿದ್ದರು, […]

ನವದೆಹಲಿ: ಲಾಕ್​​ಡೌನ್ ನಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟಿವಿ, ರೇಡಿಯೋ ಮೂಲಕ ವಿವಿಧ ಅವಧಿಗಳಲ್ಲಿ ಶಿಕ್ಷಣ ಪ್ರಸಾರ ಮಾಡಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಹಾರಾಷ್ಟ್ರದ ಶಿಕ್ಷಣ ಸಚಿವೆ  ಮನವಿ ಮಾಡಿದ್ದಾರೆ. ಡಿಡಿ ನ್ಯಾಷನಲ್‌ ಚಾನೆಲ್​​ನಲ್ಲಿ 12 ಗಂಟೆಗಳ ಅವಧಿ (ಸ್ಲಾಟ್) ಹಾಗೂ ರೇಡಿಯೊದಲ್ಲಿ 2 ಗಂಟೆ ಅವಧಿ (ಸ್ಲಾಟ್) ನೀಡಬೇಕೆಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಕ್ರಮಬದ್ಧವಾಗಿ ಈ ರೀತಿಯ ಸ್ಲಾಟ್‌ಗಳನ್ನು […]

ಒಂಟಾರಿಯೋ: ಆರು ವರ್ಷದ ನಾಯಿ ಫಿನ್ಲೆ 6 ಟೆನ್ನಿಸ್ ಬಾಲ್ ಗಳನ್ನು ಒಮ್ಮೆಲೇ ಬಾಯಲ್ಲಿ ಕಚ್ಚಿ ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದೆ. ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿ ಫಿನ್ಲೆ ಎರಡು ವರ್ಷ ಇದ್ದಾಗಿನಿಂದಲೂ ಟೆನ್ನಿಸ್ ಬಾಲ್ ಕಚ್ಚಿ ಹಿಡಿಯುವುದನ್ನು ಕಲಿತಿತ್ತು ಎಂದು ಅದರ ಯಜಮಾನ ಐರಿನ್ ಮೊಲ್ಲೊಯ್ ತಿಳಿಸಿದ್ದಾರೆ. ಫಿನ್ಲೆ ಈ ಹಿಂದೆ ಐದು ಬಾಲ್ ಗಳನ್ನು ಒಮ್ಮೆಲೇ ಕಚ್ಚಿಕೊಂಡು ದಾಖಲೆ ಮಾಡಿತ್ತು. ಈಗ ತನ್ನದೆ ದಾಖಲೆಯನ್ನು […]

Advertisement

Wordpress Social Share Plugin powered by Ultimatelysocial