ಬೆಂಗಳೂರು:  ಕಮೀಷನರ್ ಕಾರ್ಯ ವೈಖರಿ ವಿರುದ್ದ ಡಿಜಿ ಪ್ರವೀಣ್ ಸೂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.‌ನಗರದಲ್ಲಿ ವಾಹನಗಳ ಸಂಚಾರ ದಿನೇ ದಿನೇ ಜಾಸ್ತಿಯಾಗ್ತಿದೆ.ಲಾಕ್ ಡೌನ್ ಏರಿಯಾಗಳಲ್ಲಿ ಟ್ರಾಫಿಕ್ ಪೊಲೀಸರು ಏನ್‌ ಕೆಲಸ ಮಾಡ್ತಿದ್ದಾರೆ..ಲಾಕ್ ಡೌನ್ ಏರಿಯಾಗಳಲ್ಲಿ ಇರೋ ಬ್ಯಾರಿಗೇಡ್ ಸಡನ್ ಆಗಿ ತೆಗೆದಿದ್ದಾರೆ.ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪಾಸ್ ಗಳನ್ನ ಚೆಕ್ ಮಾಡ್ತಿಲ್ಲ.ಟ್ರಾಪಿಕ್ ಅಧಿಕಾರಿಗಳು ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತೆ ಆಗ್ತಿಲ್ಲ..ಬೇರೆ ಜಿಲ್ಲೆಯ ಪಾಸ್ ಒಂದಿರುವ ವಾಹನಗಳು ಸಿಟಿಯಲ್ಲಿ ಓಡಾಡೋ […]

ದೇಶದಾದ್ಯಂತ ಕೋವಿಡ್ 19 ನಿಂದ ಜನತೆ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು  ನಮ್ಮ ರಾಜ್ಯದಲ್ಲೂ ಕೂಡ ಬಡವರಿಗೆ ಜೀವನಕ್ಕೆ ಅಗತ್ಯ ವಸ್ತುಗಳನ್ನು ಕೊಳ್ಳಲು ಕಷ್ಟವಾದ ಹಿನ್ನೆಲೆ  ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರು ಡಿ ಕೆ ಶಿವಕುಮಾರ್ ಅವರ ಆದೇಶದಂತೆ ಮೇರೆಗೆ   ಪರಿಹಾರ ನಿಧಿ ಸ್ಥಾಪಿಸಿದ್ದು ಪಕ್ಷದ ಶಾಸಕರೆಲ್ಲ ತಮ್ಮ ದೇಣಿಗೆಯನ್ನು ನೀಡಿದ್ದು ಅದೇ ರೀತಿ ಗಣಿನಾಡು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ರವರು ಇಂದು ಬಳ್ಳಾರಿ ನಗರದಲ್ಲಿ […]

ನವದೆಹಲಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ೧೦೦ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. ನಾಲ್ಕು ದಿನಗಳ ಹಿಂದೆ ಇಲ್ಲಿನ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ರಾಷ್ಟ್ರಪತಿ ಭವನದ ಸ್ವಚ್ಛತೆಯ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಸ್ವಚ್ಛತೆಯ ಕೆಲಸ ಮಾಡುತ್ತಿದ್ದ ಎಲ್ಲರಿಗೂ ಕೇಂದ್ರ ದೆಹಲಿಯ ಪ್ರದೇಶದಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯದರ್ಶಿ ಹಂತದ ಅಧಿಕಾರಿಗಳು, ಅವರ ಕುಟುಂಬ ಸದಸ್ಯರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. […]

ಮೈಸೂರು : ಎನ್.ಆರ್.ಠಾಣಾ ವ್ಯಾಪ್ತಿಯ ಆಲೀಂನಗರದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲೀಂನಗರದಲ್ಲಿ ಆಶಾಕಾರ್ಯಕರ್ತೆ ಸುಮಯಾ ಫಿರ್ದೋಸಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಧಮ್ಕಿ ಹಾಕಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುಬೇಕು. ಧಮ್ಕಿ ಹಾಕಿದವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ. ಸುಗ್ರೀವಾಜ್ಞೆ ಜಾರಿಯಾದ ಬಳಿಕ ಆರೋಪಿಗಳಿಗೆ ಶಿಕ್ಷೆ […]

ಭಾರತ ವಿಶ್ವದ ಅತಿದೊಡ್ಡ ರಕ್ಷಣಾ ಸಾಮಗ್ರಿಗಳ ಆಮದು ರಾಷ್ಟ್ರ ಎಂದೇ ಹೇಳಲಾಗುತ್ತದೆ. ಆದರೆ, ರಕ್ಷಣಾ ಸಾಮಗ್ರಿಗಳ ರಫ್ತು ವಲಯದಲ್ಲೂ ಈಗ ನಿಧಾನವಾಗಿ ತನ್ನ ಅಸ್ತಿತ್ವ ಕಂಡುಕೊಳ್ಳಲಾರಂಭಿಸಿದೆ. ರಕ್ಷಣಾ ಸಚಿವಾಲಯದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಿಭಾಗದ ಪ್ರಕಾರ, ಕಳೆದ ೪ ವರ್ಷಗಳಲ್ಲಿ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತು ೫ ಪಟ್ಟು ಹೆಚ್ಚಳವಾಗಿದೆ. ಅಂದರೆ ೨೦೧೬-೧೭ನೇ ಸಾಲಿನಲ್ಲಿದ್ದ ೧,೫೨೧.೮೬ ಕೋಟಿ ರೂ. ರಫ್ತು ೨೦೧೯-೨೦ನೇ ಸಾಲಿಗೆ ೮,೬೨೦.೫೯ ಕೋಟಿ ರೂ.ಗೆ ಹೆಚ್ಚಾಗಿದೆ. ಈ […]

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ ವಾರ್ಡ ನಂ ೩೧ ರಲ್ಲಿ ಇಂದಿನಿಂದ ಲಾಕ್ ಡೌನ್ ಮುಗಿಯುವವರೆಗೆ ಅಂದರೆ ಮೇ.೩ ರವರೆಗೆ ಜನರಿಗೆ ಉಚಿತ ಊಟದ ವ್ಯವಸ್ಥೆಯನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿ ಇಲಕಲ್ಲ ಅವರು ಮಾಡಿದ್ದಾರೆ. ಇದರ ನೇತೃತ್ವ ವಹಿಸಿದ ನಗರ ಸಭೆ ಸದಸ್ಯೆ ಶೋಭಾ ಅಮದಿಹಾಳ ಮತ್ತು ಯುವ ಮುಖಂಡ ಮಂಜು ಹೊಸಮನಿ ಹಾಗೂ ಅಶೋಕ ಛಲವಾದಿ ಹಮ್ಮಿಕೊಂಡಿದ್ದಾರೆ. ಚಿತ್ತರಗಿ ವಿಜಯ ಮಹಾಂತೇಶ ಮಠದ ಸ್ವಾಮಿಗಳು ಚಾಲನೆ ನೀಡಿ […]

ಬೆಂಗಳೂರು.ಏ.20: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಮುಂದೂಡಿರುವುದರಿಂದ ರಾಜ್ಯದ ನಾನಾ ಭಾಗದ ಮಕ್ಕಳೊಂದಿಗೆ ದೂರವಾಣಿ ಕರೆ ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಸೋಮವಾರ ಬೆಳಗ್ಗೆ ತಮ್ಮ ಕಚೇರಿಯಿಂದ ಮಕ್ಕಳಿಗೆ ತಾವೇ ಫೋನ್‍ನಲ್ಲಿ ಸಂಪರ್ಕಿಸಿ, ಮಕ್ಕಳ ಪರೀಕ್ಷಾ ಸಿದ್ಧತೆ, ಆರೋಗ್ಯ ಕುರಿತು ವಿಚಾರಿಸಿದರಲ್ಲದೇ ಶಿಕ್ಷಣ ಇಲಾಖೆ ವತಿಯಿಂದ ದೂರದರ್ಶನ ಮತ್ತು ಆಕಾಶವಾಣಿ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪೂರ್ವ ಸಿದ್ಧತೆಗೆ ಮಾರ್ಗದರ್ಶಿ ತರಗತಿಗಳನ್ನು ಇಷ್ಟರಲ್ಲಿಯೇ […]

ಪಾದರಾಯನಪುರದಲ್ಲಿ ಗೂಂಡಾಗಿರಿ ಪ್ರದರ್ಶನ ಮಾಡಿದವರ ವಿರುದ್ದ ಸರ್ಕಾರ ‌ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾದರಾಯನಪುರದಲ್ಲಿ  ನಡೆದ ಘಟನೆ ಕುರಿತು ಪ್ರತಿಕ್ರಿಯಸಿದ ಅವರು ಇಂತಹ ರಾಕ್ಷಸೀ ಪ್ರವೃತ್ತಿಯನ್ನು ಸರ್ಕಾರ ಸಹಿಸಲ್ಲ.‌ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡುವ ಜತೆಗೆ ಕಿಡಿಗೇಡಿಗಳು ಹಾಗೂ ಗೂಂಡಾಗಿರಿ ಪ್ರವೃತ್ತಿಗೆ ಸಂಪೂರ್ಣ ಕಡಿವಾಣ‌ ಹಾಕುತ್ತೇವೆ ಎಂದು ಹೇಳಿದರು.  

ವೈರಸ್ ಗೆ ಜಾತಿ, ಮತ ಇಲ್ಲ. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ಪಾದರಾಯನಪುರದಲ್ಲಿ ಆಗಿದ್ದು ರಾಷ್ಟ್ರ ವಿರೋಧಿ ಕೃತ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಪಾದರಾಯನಪುರದಲ್ಲಿ ಕಾನೂನು ವಿರೋಧಿಗಳಿಂದ ಘಟನೆ ನಡೆದಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಈ‌ ಕುರಿತು ನಾನು ಗೃಹ ಸಚಿವರ ಜೊತೆಗೆ ಮಾತನಾಡಿದ್ದೇನೆ. ಪಾದರಾಯನಪುರದಲ್ಲಿ ಇನ್ನು ಮುಂದೆ ಅಂತಹ ಘಟನೆ ನಡೆಯಬಾರದು. […]

ಕೊರೊನಾ ಹರಡುವಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಾಗ ಮಾತ್ರ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಭಂಧ ಹಿಂದಕ್ಕೆ ತೆಗೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೋನಾ ಹರಡುವಿಕೆ ಕಡಿಮೆಯಾಗಿ, ಭಾರತೀಯರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂಬ ವಿಶ್ವಾಸ ಬಂದಾಗ ಮಾತ್ರ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ.

Advertisement

Wordpress Social Share Plugin powered by Ultimatelysocial