ಪಾಕ್‌, ಚೀನಾ ಯುದ್ಧಕ್ಕೆ ಸಂಬಂಧಿಸಿದ ದಾಖಲೆಗಳು ಪತ್ರಾಗಾರದಲ್ಲಿ ಇಲ್ಲ

 

 

ಭಾರತ ರಾಷ್ಟ್ರೀಯ ಪತ್ರಾಗಾರ (ಎನ್‌ಎಐ) ಬಳಿ 1962, 1965 ಹಾಗೂ 1971ರ ಯುದ್ಧಗಳಿಗೆ ಹಾಗೂ ಹಸಿರುಕ್ರಾಂತಿಗೆ ಸಂಬಂಧಿಸಿದ ದಾಖಲೆಗಳೇ ಇಲ್ಲ ಎಂದು ಎನ್‌ಎಐ ಪ್ರಧಾನ ನಿರ್ದೇಶಕ ಚಂದನ್‌ ಸಿನ್ಹಾ ಶುಕ್ರವಾರ ಹೇಳಿದ್ದಾರೆ.ಈ ಮೂರು ಯುದ್ಧಗಳು ಹಾಗೂ ಹಸಿರು ಕ್ರಾಂತಿ ಕುರಿತ ದಾಖಲೆಗಳನ್ನು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳು ಎನ್‌ಎಐನೊಂದಿಗೆ ಹಂಚಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.’ಸುಶಾಸನ ದಿನ’ ಅಂಗವಾಗಿ ಆಡಳಿತಾತ್ಮಾಕ ಸುಧಾರಣೆಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.’ದಾಖಲೆಗಳ ಸಮರ್ಪಕ ನಿರ್ವಹಣೆ ಅಗತ್ಯ. ಇದು ಉತ್ತಮ ಆಡಳಿತದ ತಿರುಳಾಗಿದೆ’ ಎಂದ ಅವರು, ‘ಹಲವಾರು ಸಚಿವಾಲಯಗಳು ಸ್ವಾತಂತ್ರ್ಯ ನಂತರದ ದಿನಗಳಿಂದಲೂ ತಮ್ಮ ದಾಖಲೆಗಳನ್ನು ಸಂಸ್ಥೆಯೊಂದಿಗೆ ಹಂಚಿಕೊಂಡಿಲ್ಲ’ ಎಂದು ವಿಷಾದಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಗೆ ಕಾರ್ ಡಿಕ್ಕಿ!

Mon Dec 26 , 2022
ಜೀವನ ಭೀಮಾನಗರ ಸಂಚಾರ ಠಾಣೆ ಕಾನ್ಸ್ ಟೇಬಲ್ ರಮೇಶ್ ಗೆ ಕಾರ್ ಡಿಕ್ಕಿ ಡಿಕ್ಕಿ ರಭಸಕ್ಕೆ ರಮೇಶ್ ಕಾಲಿನ ಮೂಳೆ ಕಟ್.. ಇದೇ ತಿಂಗಳ 24 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬೈಯಪ್ಪನಹಳ್ಳಿಯ ಕಗ್ಗಾದಾಸನಪುರ ಬಳಿ ಘಟನೆ ರಮೇಶ್ ಕರ್ತವ್ಯದ ವೇಳೆ ಅಡ್ಡ ದಿಡ್ಡಿ ಕಾರು ಚಲಾಯಿಸಿ ಡಿಕ್ಕಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಗಾಯಾಳು ಪೊಲೀಸ್ ರಮೇಶ್ ಗೆ ಹಾಸ್ಮೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಾರ್ ಮಾಲೀಕರ ವಿರುದ್ಧ […]

Advertisement

Wordpress Social Share Plugin powered by Ultimatelysocial