ಪಾಕಿಸ್ತಾನ ಪಾಠ ಕಲಿತಿದೆ.

ರಾಚಿ:ಭಾರತದ ಜತೆಗೆ ಮೂರು ಯುದ್ಧಗಳ ಬಳಿಕ ಪಾಕಿಸ್ತಾನ ಪಾಠ ಕಲಿತಿದೆ. ನಮಗೆ ಯುದ್ಧ ಬೇಕಾಗಿಲ್ಲ, ಶಾಂತಿ ಬೇಕು ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ.

ಆಜ್‌ ಅರಬಿಯಾ ಟಿವಿಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ಇದನ್ನು ಹೇಳಿದ್ದಾರೆ.

ʼʼಪಾಕಿಸ್ತಾನಕ್ಕೆ ಶಾಂತಿ ಬೇಕು. ಆದರೆ ಕಾಶ್ಮೀರದಲ್ಲಿ ನಡೆಯುತ್ತಿರುವುದನ್ನು ನಿಲ್ಲಿಸಬೇಕುʼʼ ಎಂದೂ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿದೆ ಎನ್ನಲಾದ ಮಾನವ ಹಕ್ಕು ಉಲ್ಲಂಘನೆಗಳನ್ನು ಕಡೆಗಣಿಸಲಾಗದು ಎಂದಿದ್ದಾರೆ.

ನಾವೀಗ ಭಿಕ್ಷಾ ಪಾತ್ರೆ ಹಿಡಿದು ನಿಂತಿದ್ದೇವೆ, ಆರ್ಥಿಕ ಬಿಕ್ಕಟ್ಟು ಒಪ್ಪಿಕೊಂಡ ಪಾಕ್‌ ಪ್ರಧಾನಿ

ನಮ್ಮಲ್ಲಿ ಎಂಜಿನಿಯರ್ಸ್‌, ಡಾಕ್ಟರ್ಸ್‌, ಕುಶಲ ಉದ್ಯೋಗಿಗಳಿದ್ದಾರೆ. ಈ ಪ್ರತಿಭೆಗಳನ್ನು ಒಳಿತಿಗಾಗಿ ಬಳಸುವ ಉದ್ದೇಶ ನಮ್ಮದು. ಈ ಮೂಲಕ ಎರಡೂ ದೇಶಗಳು ಬೆಳೆಯಬಹುದು. ಶಾಂತಿಯುತವಾಗಿ ಬೆಳೆಯುವುದು ಅಥವಾ ಕಾದಾಡುತ್ತಾ ಸಮಯ ವ್ಯರ್ಥ ಮಾಡುವುದು- ಇವೆರಡರಲ್ಲಿ ಆಯ್ಕೆ ನಮ್ಮದೇ ಆಗಿದೆ. ನಾವು ಭಾರತದ ಜತೆಗೆ ಮೂರು ಯುದ್ಧ ಮಾಡಿದ್ದೇವೆ. ಅವು ನಮಗೆ ಯಾತನೆ, ಬಡತನ, ನಿರುದ್ಯೋಗಗಳನ್ನಷ್ಟೇ ನೀಡಿವೆ. ನಾವು ಪಾಠ ಕಲಿತಿದ್ದೇವೆ. ಸಮಸ್ಯೆಗಳನ್ನು ಮೂಲದಲ್ಲಿ ಪರಿಹರಿಸಿಕೊಂಡು ಶಾಂತಿಯಲ್ಲಿ ಬಾಳಲು ಇಚ್ಛಿಸುತ್ತೇವೆ ಎಂದಿದ್ದಾರೆ.

ಬಾಂಬುಗಳು ಹಾಗೂ ಶಸ್ತ್ರಾಸ್ತ್ರಗಳ ಮೇಲೆ ಹಣ ವ್ಯರ್ಥ ಮಾಡಲು ಪಾಕಿಸ್ತಾನ ಇಚ್ಛಿಸುವುದಿಲ್ಲ. ನಾವಿಬ್ಬರೂ ಪರಮಾಣು ಅಸ್ತ್ರ ಹೊಂದಿದ ದೇಶಗಳು. ಒಂದು ವೇಳೆ ಯುದ್ಧ ಶುರುವಾದರೆ, ಏನಾಯಿತೆಂದು ಹೇಳಲು ಉಳಿಯುವವರಾದರೂ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿಗೆ ಹೆಡ್‌ಫೋನ್ ಪೇಚು, ವಿಡಿಯೋ ವೈರಲ್

ನವದೆಹಲಿ: ಫ್ರಾನ್ಸ್ ಮೂಲದ ವಿವಾಹೇತರ ಡೇಟಿಂಗ್ ಆಯಪ್ ಗ್ಲೀಡೆನ್ಒಂ ದು ಕೋಟಿ ಬಳಕೆದಾರರ ಗುರಿಯನ್ನು ತಲುಪಿರುವುದಾಗಿ ಸೋಮವಾರ ಘೋಷಿಸಿದೆ. ಈ ಪೈಕಿ ಭಾರತದಿಂದಲೇ 20 ಲಕ್ಷ ಬಳಕೆದಾರರಿದ್ದಾರೆ. ಸೆಪ್ಟೆಂಬರ್‌ನಿಂದ ಇತ್ತೀಚೆಗೆ ಆಯಪ್ ಒಟ್ಟು ಶೇ.11ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಗ್ಲೀಡೆನ್ ಆಯಪ್‌ನ ಒಟ್ಟು ಬಳಕೆದಾರರ ಪೈಕಿ ಶೇ.66ರಷ್ಟು ಬಳಕೆದಾರರು ಟೈರ್ 1 ಸಿಟಿಗಳಿಂದ ಇದ್ದಾರೆ. ಉಳಿದ ಶೇ.44ರಷ್ಟುಬಳಕೆದಾರ ಟೈರ್ 2 ಮತ್ತು 3 ಸ್ತರದ ನಗರವಾಸಿಗಳಾಗಿದ್ದಾರೆ ಎಂದು ಆಯಪ್ ತಿಳಿಸಿದೆ. ಭಾರತವು ವಿವಾಹಗಳು ಮತ್ತು ಏಕಪತ್ನಿತ್ವಕ್ಕೆ ಮಹತ್ವ ನೀಡುವ ದೇಶವಾಗಿದ್ದು, ಅಪ್ಲಿಕೇಶನ್‌ನಲ್ಲಿ ಚಂದಾದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2022ರಲ್ಲಿ ನಮಗೆ ಶೇ.18ಕ್ಕಿಂತ ಹೆಚ್ಚು ಹೊಸ ಬಳಕೆದಾರರು ದೊರೆತಿದ್ದಾರೆ. ಇದು ಡಿಸೆಂಬರ್ 2021 ರಲ್ಲಿ 1.7 ಮಿಲಿಯನ್‌ ಇದ್ದ ಬಳಕೆದಾರರ ಪ್ರಮಾಣ ಈಗ 20 ಲಕ್ಷಕ್ಕೂ ಅಧಿಕವಾಗಿದೆ ಎಂದು ಗ್ಲೀಡೆನ್‌ನ ಇಂಡಿಯಾ ಕಂಟ್ರಿ ಮ್ಯಾನೇಜರ್ ಸಿಬಿಲ್ ಶಿಡ್ಡೆಲ್ ಹೇಳಿದ್ದಾರೆ.

ಈ ಆಯಪ್ ಅನ್ನು ವಿಶೇಷವಾಗಿ ವಿವಾಹಿತರಾಗಿಯೇ ವಿನ್ಯಾಸ ಮಾಡಲಾಗಿದೆ. ಗ್ಲೀಡೆನ್‌ನಲ್ಲಿ ಭಾರತೀಯ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದರೆ, ಏಕಪತ್ನಿತ್ವ ಪರಿಕಲ್ಪನೆ ನಿಧಾನವಾಗಿ ಹೇಗೆ ಬದಿಗೆ ಸರಿಯುತ್ತಿದೆ ಎಂಬುದನ್ನು ಸಾಂಕೇತಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಇದನ್ನುಸೇವಿಸುವವರು ಹೆಚ್ಚು ಬುದ್ದಿವಂತ ಮತ್ತು ಆರೋಗ್ಯಕರವಾಗಿರುತ್ತಾರಾ?

Tue Jan 17 , 2023
ಮೀನು ಆರೋಗ್ಯದ ಜೊತೆಗೆ ರುಚಿಊ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಮೀನಿನಲ್ಲಿ ಪ್ರೋಟೀನ್, ಕಬ್ಬಿಣ, ಖನಿಜ ಲವಣಗಳು, ಅಯೋಡಿನ್, ಎ, ಡಿ ಜೀವಸತ್ವಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿಗಳಿರುವುದರಿಂದ ತೂಕವನ್ನು ಕಳೆದುಕೊಳ್ಳುವುದು ಸುಲಭ. 100 ಗ್ರಾಂ ಸಮುದ್ರ ಮೀನಿನಲ್ಲಿ ಪ್ರೋಟೀನ್ 20 ಗ್ರಾಂ, ಕ್ಯಾಲೋರಿಗಳು 200 ಕ್ಯಾಲೋರಿಗಳು, ಕೊಬ್ಬು 12 ಗ್ರಾಂ, ಕೊಲೆಸ್ಟ್ರಾಲ್ 60 ಗ್ರಾಂ, ಸೋಡಿಯಂ 60 ಗ್ರಾಂ, […]

Advertisement

Wordpress Social Share Plugin powered by Ultimatelysocial