‘ಜಾರ್ಖಂಡ್ ಸರ್ಕಾರ’ ದೇಶದ ಅತ್ಯಂತ ಭ್ರಷ್ಟ ಸರ್ಕಾರ, ಜನರು ಅದನ್ನು ಕಿತ್ತು ಹಾಕುತ್ತಾರೆ: ಅಮಿತ್ ಶಾ

ವದೆಹಲಿ : ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ , 5 ವರ್ಷಗಳಲ್ಲಿ 2 ಲಕ್ಷ ಬಹು ಆಯಾಮದ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳನ್ನು (ಪಿಎಸಿ) ನೋಂದಾಯಿಸಲು ದೊಡ್ಡ ಮೊತ್ತವನ್ನು ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇಂದು ಅಮಿತ್ ಶಾ ಅವರು ಜಾರ್ಖಂಡ್‌ನ ದಿಯೋಘರ್‌ಗೆ ಭೇಟಿ ನೀಡಿ ಇಫ್ಕೋದ ನ್ಯಾನೋ ಯೂರಿಯಾ ಸ್ಥಾವರದ ಶಂಕುಸ್ಥಾಪನೆ ನೆರವೇರಿಸಿ, ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು,

ನ್ಯಾನೋ ಯೂರಿಯಾವು ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಈಗಾಗಲೇ 5 ದೇಶಗಳಿಗೆ ಅದನ್ನು ರಫ್ತು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸಹಕಾರವನ್ನು ಉತ್ತೇಜಿಸಲು ಪ್ರಧಾನಿ ಮೋದಿ ಅವರು ಈ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಪರಿಚಯಿಸಿದ್ದಾರೆ. ಉತ್ಪಾದನಾ ಕ್ಷೇತ್ರದಲ್ಲಿ ಸಹಕಾರದ ಮೇಲೆ 26 ಪ್ರತಿಶತ ತೆರಿಗೆ ವಿಧಿಸಲಾಗುತ್ತಿತ್ತು.ಈಗ ಅದನ್ನು 15 ಪ್ರತಿಶತಕ್ಕೆ ಇಳಿಸಲಾಗಿದೆ ಎಂದು ಷಾ ಹೇಳಿದ್ದಾರೆ

ಜಮ್ತಾರಾ ಮತ್ತು ದಿಯೋಘರ್ ಸೈಬರ್ ಅಪರಾಧಗಳಿಗೆ ಹಾಟ್‌ಸ್ಪಾಟ್‌ಗಳಾಗಿ ಮಾರ್ಪಟ್ಟಿವೆ. ಆದರೆ (ಸಿಎಂ) ಹೇಮಂತ್ ಸೋರೆನ್ ಅವರು ಎಲ್ಲಾ ಸರ್ಕಾರಿ ನೆರವನ್ನು ತಿರಸ್ಕರಿಸಿದ್ದಾರೆ.2024 ರಲ್ಲಿ ನಾವು ಎಲ್ಲಾ 14 ಸ್ಥಾನಗಳನ್ನು ಗೆಲ್ಲುತ್ತೇವೆ. ಜೊತೆಗೆ ಪೂರ್ಣ ಬಹುಮತದೊಂದಿಗೆ ವಿಧಾನಸಭೆ ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ಸಿಎಂ ಸೋರೆನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್ ಸರ್ಕಾರವನ್ನು ದೇಶದ ಅತ್ಯಂತ ಭ್ರಷ್ಟ ಎಂದು ಕರೆದ ಅವರು, ಜನರು ಅದನ್ನು ಕಿತ್ತುಹಾಕುತ್ತಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಕ್ಸಲ್ ಮುಕ್ತವಾಗಿರುವ ಜಾರ್ಖಂಡ್‌ನ ಬುದ್ಧ ಪಹಾಡ್ ಮತ್ತು ಇತರ ಹಲವು ಪ್ರದೇಶಗಳಲ್ಲಿ ಕೇಂದ್ರದ ಪ್ರಯತ್ನಗಳನ್ನು ಉಲ್ಲೇಖಿಸಿ, ಈಗ, ಅಭಿವೃದ್ಧಿಯು ರಾಜ್ಯಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ:

Sat Feb 4 , 2023
ಮಂಗಳೂರು, ಫೆಬ್ರವರಿ 4: ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ ಹೊಡೆದು ಮಂಗಳೂರು ಮೂಲದ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಅಪಘಾತ ನಡೆದಿದೆ ಎನ್ನಲಾಗಿದೆ. ಮಂಗಳೂರು ಮೂಲದ ಅಕೀಲ್, ನಾಸಿರ್, ರಿಝ್ವಾನ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿ ಬಳಿಯ ನಿವಾಸಿ ರಿಝ್ವಾನ್ ಅವರು ಕಳೆದ 4 ತಿಂಗಳ ಹಿಂದಷ್ಟೇ […]

Advertisement

Wordpress Social Share Plugin powered by Ultimatelysocial