ಪಣಜಿಯಲ್ಲಿ ವೇಶ್ಯಾವಾಟಿಕೆ ಜಾಲಭೇದಿಸಿದ ಪೊಲೀಸರು, ನಟಿ ಸೇರಿದಂತೆ ಮೂವರ ರಕ್ಷಣೆ

ಪಣಜಿ: ಗೋವಾದ ಪಣಜಿ ಸಮೀಪದ ಸಂಗೋಲ್ಡಾ ಗ್ರಾಮದಲ್ಲಿ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ ಕ್ರೈಂ ಬ್ರ್ಯಾಂಚ್ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಲ್ಲದೇ ನಟಿಯೊಬ್ಬರು ಸೇರಿದಂತೆ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.ಕ್ರೈ ಬ್ರ್ಯಾಂಚ್ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ, ಕಿರುತೆರೆ ನಟಿ ಸೇರಿದಂತೆ ಇಬ್ಬರು ಮುಂಬೈ ನಿವಾಸಿಗಳಾಗಿದ್ದು, ಮೂರನೇ ಮಹಿಳೆ ಹೈದರಾಬಾದ್ ನಿವಾಸಿಗಳಾಗಿದ್ದಾರೆ. ಮೂರನೇ ಮಹಿಳೆ ಹೈದರಾಬಾದ್ ನಿವಾಸಿ ಎಂದು ಮಾಹಿತಿ ನೀಡಿದೆ.ಹಫೀಜ್ ಸೈಯದ್ ಬಿಲಾಲ್ ಎಂಬ ವ್ಯಕ್ತಿ ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ಕ್ರೈಂ ಬ್ರ್ಯಾಂಚ್ ಗೆ ಮಾಹಿತಿ ಬಂದಿತ್ತು. ಇದರ ಆಧಾರದ ಮೇಲೆ ಆರೋಪಿ ಸೆರೆಗೆ ಜಾಲ ಬೀಸಲಾಗಿತ್ತು.ಮಾಹಿತಿಯನ್ನು ಪರಿಶೀಲಿಸಿದ ನಂತರ ಗೋವಾ ಕ್ರೈಂ ಬ್ರ್ಯಾಂಚ್ ಪೊಲೀಸರು ಆರೋಪಿ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಹೈದರಾಬಾದ್ ಮೂಲದ ಈ ವ್ಯಕ್ತಿ, ವೇಶ್ಯಾವಾಟಿಕೆಗಾಗಿ ಸಂಗೋಲ್ಡಾ ಗ್ರಾಮದಲ್ಲಿನ ಹೋಟೆಲ್ ವೊಂದನ್ನು ಬುಕ್ ಮಾಡಿದ್ದು, ಮೂವರು ಮಹಿಳೆಯರಿಗೆ 50,000ರೂಪಾಯಿ ಹಣದ ಒಪ್ಪಂದ ನಡೆದಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ್ ದೇವರಕೊಂಡ, ಅನನ್ಯ ಪಾಂಡೆ, ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಾಪಕಿ ಅಪೂರ್ವ ಮೆಹ್ತಾ ಅವರ ಜನ್ಮದಿನಕ್ಕೆ ಹಾಜರಾಗಿದ್ದರು!!

Fri Mar 18 , 2022
ಬಾಲಿವುಡ್‌ನ ಪ್ರಮುಖ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಇಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಧರ್ಮ ಪ್ರೊಡಕ್ಷನ್‌ನ ಸಿಇಒ ಅಪೂರ್ವ ಮೆಹ್ತಾ ಅವರಿಗೆ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬಿ ಟೌನ್‌ನಲ್ಲಿ ಯಾರು ಯಾರು ಎಂದು ಹೇಳಬೇಕಾಗಿಲ್ಲ. ಆದರೆ, ಕಾರ್ಯಕ್ರಮದಲ್ಲಿ ಲಿಗರ್ ತಂಡ ವಿಶೇಷ ಆಕರ್ಷಣೆಯಾಗಿತ್ತು. ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಕಪ್ಪು ಬಟ್ಟೆಯಲ್ಲಿ ಬಂದಿದ್ದರಿಂದ ಗಾಢ ಬಣ್ಣಗಳು ಈವೆಂಟ್‌ಗೆ ಡ್ರೆಸ್ […]

Advertisement

Wordpress Social Share Plugin powered by Ultimatelysocial