ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಚಾಲಕ

 

ಎಲ್ಲ ಸರಿ ಇದ್ದು ಜಾಗರೂಕತೆಯಿಂದ ವಾಹನ ಚಲಾಯಿಸಿದರೂ ಅಪಘಾತ ನಡೆಯುವ ಕಾಲ ಇದು. ಇದತ ನಡುವೆ ಚಾಲಕನೊಬ್ಬ ಕುಡಿದು ಮತ್ತೇರಿಸಿಕೊಂಡು ಬಸ್‌ ಚಲಾಯಿಸಿ ಪ್ರಯಾಣಿಕರ ಜೀವವನ್ನೇ ಒತ್ತೆ ಇಟ್ಟ ಘಟನೆಯೊಂದು ಕರಾವಳಿಯಲ್ಲಿ ನಡೆದಿದೆ. ಇದರಿಂದ ಭಯಗೊಂಡ ಪ್ರಯಾಣಿಕರು ಸೇರಿ ಚಾಲಕನನ್ನು  ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಬುಧವಾರ ರಾತ್ರಿ ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ ಆನಂದ್ ಟ್ರಾವೆಲ್ಸ್ ಬಸ್ ಇದಾಗಿದೆ. ಬೆಂಗಳೂರಿನಿಂದ ಕರಾವಳಿಗೆ 30ಕ್ಕೂ ಅಧಿಕ ಪ್ರಯಾಣಿಕರು ಬಸ್‌ನಲ್ಲಿ ಹೊರಟಿದ್ದರು. ಬೆಂಗಳೂರಿನಿಂದ ಹೊರಟು ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಬಸ್‌ ಎರ‍್ರಾಬಿರ‍್ರಿಯಾಗಿ ಚಲಿಸಲು ಆರಂಭವಾಯಿತು. ರಸ್ತೆಯಲ್ಲಿ ಆಚೆಗೊಮ್ಮೆ ಈಚೆಗೊಮ್ಮೆ ಓಲಾಡಲು ಶುರುವಾದಾಗ ಪ್ರಯಾಣಿಕರು ಭಯಗೊಂಡರು, ಸಿಟ್ಟಾದರು.ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು ಬಸ್‌ ಬಿಟ್ಟು ಇಳಿಯುವಂತೆ ಸೂಚಿಸಿದರು. ಬಸ್ ಹಾಳಾದ ಹಿನ್ನಲೆಯಲ್ಲಿ ಹೀಗೆ ಬಸ್ ಚಲಾಯಿಸುತ್ತಿರುವುದಾಗಿ ಚಾಲಕ ವಾದ ಮಾಡಿದ. ನಿಜವೆಂದರೆ, ಬಸ್ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಪಾನಮತ್ತರಾಗಿದ್ದರು ಎನ್ನಲಾಗಿದೆ.ಪ್ರಶ್ನಿಸಿದಾಗ ಸಂಬಂಧವಿಲ್ಲದ ಉತ್ತರ ನೀಡುತ್ತಿದ್ದ ಅವರ ಕೈಯಲ್ಲಿ ತಮ್ಮ ಪ್ರಯಾಣ ಸುರಕ್ಷಿತವಲ್ಲ ಎಂದು ತಿಳಿದ ಪ್ರಯಾಣಿಕರು ಬೇರೆ ವ್ಯವಸ್ಥೆ ಮಾಡುವರೆಗೂ ಸ್ಥಳದಿಂದ ಮುಂದೆ ಹೋಗುವುದಿಲ್ಲ ಎಂದು ಹಠ ಹಿಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಾಳೆಹಣ್ಣು ಫೈಬರ್ ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ.

Thu Jan 5 , 2023
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲೇ ಬದುಕ್ತಿದ್ದಾರೆ. ಕೆಲಸ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟು ಹೀಗೆ ಒಂದಿಲ್ಲೊಂದು ಸಮಸ್ಯೆ ಜನರನ್ನು ಕಾಡುತ್ತಿದೆ. ಒತ್ತಡವು ಪ್ರತಿಯೊಬ್ಬರ ಜೀವನದ ಭಾಗವಾಗಿಬಿಟ್ಟಿದೆ. ಒತ್ತಡವನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮನಸ್ಥಿತಿ ಕೆಟ್ಟದಾಗಿದ್ದರೆ ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮನಸ್ಥಿತಿಯನ್ನು ಸರಿಪಡಿಸುವುದು ಬಹಳ ಮುಖ್ಯ. ನಿಮ್ಮ ಮೂಡ್‌ ಕೆಟ್ಟಾಗ ಅಥವಾ ಮನಸ್ಥಿತಿ ಸರಿಯಿಲ್ಲದೇ ಇದ್ದಾಗ ನೀವು ಕೆಲವು ಹಣ್ಣುಗಳನ್ನು ಸೇವಿಸಬಹುದು. […]

Advertisement

Wordpress Social Share Plugin powered by Ultimatelysocial