ಪಾನ್ ಮಸಾಲಾ ಕಂಪನಿ ಮೇಲೆ DGGI ದಾಳಿ; 150 ಕೋಟಿ ನಗದು ಹಣ ಪತ್ತೆ

BIG NEWS: ಪಾನ್ ಮಸಾಲಾ ಕಂಪನಿ ಮೇಲೆ DGGI ದಾಳಿ; 150 ಕೋಟಿ ನಗದು ಹಣ ಪತ್ತೆ

ಕಾನ್ಪುರ: ಪಾನ್ ಮಸಾಲಾ ಕಂಪನಿ ಮೇಲೆ ತೆರಿಗೆ ಹಾಗೂ ಜನರಲ್ ಆಫ್ ಜಿ ಎಸ್ ಟಿ ಇಂಟಲಿಜೆನ್ಸ್ (ಡಿಜಿಜಿಐ) ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಪುಷ್ಕರ್ ಪಾನ್ ಮಸಾಲಾ ಕಂಪನಿ ಮಾಲೀಕ, ಉದ್ಯಮಿ ಪಿಯೂಷ್ ಜೈನ್ ಮನೆ, ಕಚೇರಿ ಹಾಗೂ ಫ್ಯಾಕ್ಟರಿ ಸೇರಿದಂತೆ ಕನೌಜ್, ಮುಂಬೈ, ಗುಜರಾತ್ ನ ವಿವಿಧ ಸ್ಥಳಗಳಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಡಿಜಿಜಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮನೆಯ ತುಂಬೆಲ್ಲ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, 150 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಜಿ ಎಸ್ ಟಿ ತೆರಿಗೆ ಹಣ ಪಾವತಿಸದೇ ಪಾನ್ ಮಸಾಲಾ ಮಾರಾಟ ಮಾಡುತ್ತಿದ್ದ ಬಗ್ಗೆ ಉದ್ಯಮಿ ವಿರುದ್ಧ ಆರೋಪ ಕೇಳಿಬಂದಿದ್ದು, ಜಿ ಎಸ್ ಟಿ ಕಾಯ್ದೆ ಸೆಕ್ಷನ್ 69ರ ಅನ್ವಯ ಉದ್ಯಮಿಯನ್ನು ವಶಕ್ಕೆ ಪಡೆಯಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಯಮಿ ಮನೆಯಲ್ಲಿ ನೋಟಿನ ರಾಶಿ ಕಂಡು ತಬ್ಬಿಬ್ಬಾದ ಅಧಿಕಾರಿಗಳು: ಒಟ್ಟು ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

Fri Dec 24 , 2021
ಲಖನೌ: ಸುಗಂಧ ದ್ರವ್ಯ ಇಂಡಸ್ಟ್ರಿ ನಡೆಸುತ್ತಿರುವ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್​ ಜೈನ್​ಗೆ ಸಂಬಂಧಿತ ಪ್ರದೇಶಗಳ ಮೇಲೆ ನಡೆದ ದಾಳಿಯ ವೇಳೆ ಈವರೆಗೆ ಬರೋಬ್ಬರಿ 150 ಕೋಟಿ ರೂಪಾಯಿ ನಗದು ಹಣ ವಶಕ್ಕೆ ಪಡೆದಿರುವುದಾಗಿ ಆದಾಯ ತೆರಿಗೆ ಇಲಾಖೆಯ ಮೂಲಗಳು ಶುಕ್ರವಾರ ಬೆಳಗ್ಗೆ ತಿಳಿಸಿದೆ. ದಾಳಿಗೆ ಸಂಬಂಧಿಸಿದ ಫೋಟೋಗ್ರಾಫ್​ಗಳು ಬಿಡುಗಡೆಯಾಗಿದ್ದು, ಅದರಲ್ಲಿ ನೋಟಿನ ಕಂತೆಗಳ ರಾಶಿಯನ್ನು ಕಾಣಬಹುದಾಗಿದೆ. ನೋಟಿನ ಕಂತೆಗಳನ್ನು ಬಹುದೊಡ್ಡ ವಾರ್ಡ್​ರೋಬ್​ಗಳಲ್ಲಿ ತುಂಬಿಡಲಾಗಿತ್ತು.​ ಎಲ್ಲ ನೋಟಿನ […]

Advertisement

Wordpress Social Share Plugin powered by Ultimatelysocial