ಮಡಿಕೇರಿಯಲ್ಲಿ ಪ್ಯಾರಾ ಗ್ಲೈಡರ್ ತುರ್ತು ಭೂಸ್ಪರ್ಶ.

 

 

ಡಿಕೇರಿ: ಪೊನ್ನಂಪೇಟೆ ನಿವಾಸಿ ಎಂ. ಮುತ್ತಣ್ಣ ಅವರಿಗೆ ಸೇರಿದ ಪ್ಯಾರಾ ಗ್ಲೈಡರ್ ಹಾರಾಟದ ವೇಳೆ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಪೊನ್ನಂಪೇಟೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ಸಂಭವಿಸಿದೆ.

ಮುತ್ತಣ್ಣ ತಮ್ಮ ಸ್ವಂತ ಸ್ಥಳದಲ್ಲಿ ಕೆಲವು ಸಮಯದಿಂದ ರನ್‌ ವೇ ಸಹಿತ 2 ಸೀಟಿನ ಪ್ಯಾರಾ ಗ್ಲೈಡಿಂಗ್‌ ನಡೆಸುತ್ತಿದ್ದರು.

ಎಂದಿನಂತೆ ಶನಿವಾರ ಸಂಜೆ 4.45ರ ಸಮಯದಲ್ಲಿ ಪ್ಯಾರಾ ಹಾರಾಡುತ್ತಿದ್ದಾಗ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ನಿಯಂತ್ರಣ ಕಳೆದುಕೊಂಡು ನೇರವಾಗಿ ಬಾನಿನಿಂದ ಕೆಳಗೆ ಇಳಿದ ಗ್ಲೆ„ಡರ್‌ ನಿಟ್ಟೂರು ಲಕ್ಷ್ಮಣ ತೀರ್ಥ ನದಿಯ ಸೇತುವೆ ಪಕ್ಕದ ಕಾಂಕ್ರೀಟ್‌ ರಸ್ತೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತು. ಗ್ಲೈಡರ್‌ನ ಮುಂಭಾಗ ಮುರಿಯಲ್ಪಟ್ಟಿದ್ದು, ಚಕ್ರ ಸಹಿತ ಕೆಲವು ಭಾಗಗಳಿಗೆ ಹಾನಿಯಾಗಿದೆ. ಪೈಲಟ್‌ ಹಾಗೂ ಹಿಂಬದಿ ಸವಾರ ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಘಟನೆ ಕುರಿತು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾನಿಗೀಡಾದ ಗ್ಲೈಡರ್‌ ಅನ್ನು ಟ್ರ್ಯಾಕ್ಟರ್‌ ಮೂಲಕ ಸ್ಥಳಾಂತರಿಸಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೇಪಾಳದಲ್ಲಿ ವಿಮಾನ ದುರಂತ .

Sun Jan 15 , 2023
  ಕಠ್ಮಾಂಡ್‌ : ನೇಪಾಳದ ಭೀಕರ ವಿಮಾನ ಅಪಘಾತವಾಗಿದ್ದು, ನಾಲ್ವರು ಭಾರತೀಯರು ಸೇರಿದಂತೆ 72 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಥಾಣೆ ಮೂಲದ ಕುಟುಂಬ ಸಜೀವ ದಹನಗೊಂಡಿದ್ದಾರೆ. ಆಶೋಕ್‌ ಕಲುಮಾರ್‌,ತ್ರಿಪಾಠಿ, ಪತ್ನಿ ವೈಭವಿ ಬಾಂಡೇಕರ್‌ಮಕ್ಕಳಾದ ಧನುಷ್‌, ರಿತಿಕಾ ಸೇರಿದಂತೆ ಐವರು ಸಜೀವ ದಹನಗೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಕಠ್ಮಂಡುದಿಂದ ಪೋಖಾರಾಗೆ ಹೊರಟಿದ್ದ ಯೇತಿ ಏರ್ಲೈನ್ಸ್ನ ಎಟಿಆರ್ 72 ವಿಮಾನವು ಇಂದು ಬೆಳಿಗ್ಗೆ ಕಾಸ್ಕಿ ಜಿಲ್ಲೆಯ ಪೋಖಾರಾದಲ್ಲಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಅಪಘಾತಕ್ಕೀಡಾದ […]

Advertisement

Wordpress Social Share Plugin powered by Ultimatelysocial