ಸ್ಪೀಡ್ ನ್ಯೂಸ್ ರಾಜಕುಮಾರ್ ವರದಿಗಾರರು:ಶಹಾಪುರ ಯಾದಗಿರಿ ಜಿಲ್ಲೆ !

 

ನಗರದಲ್ಲಿ ಆಯೋಜಿಸಿದ್ದ
ಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರು ದೇವರ ಕೃಪಾ ಆಶೀರ್ವಾದದಿಂದ ನಡೆದ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ವತಿಯಿಂದ 5 ರಿಂದ 18 ವರ್ಷದ ಮಕ್ಕಳಿಗಾಗಿ ಯೋಗ ಶಿಬಿರ ಹಮ್ಮಿ ಕೊಳ್ಳಲಾಗಿತ್ತು

ಪ್ರಜ್ಞಾ ಯೋಗ ಶಿಬಿರ ಕಾರ್ಯಕ್ರಮವು ನೆರವೇರಿತು
ಈ ಕಾರ್ಯಕ್ರಮದಲ್ಲಿ ಮಕ್ಕಳು ವಿಶೇಷವಾದ ಪ್ರಜ್ಞೆಯ ಮೂಲಕ ಕಣ್ಣು ಮುಚ್ಚಿ ಓದುವುದು,ಬರೆಯುವುದು, ಚಿತ್ರಗಳನ್ನು ಬಿಡಿಸುವುದು, ಅಂಕಿಗಳನ್ನು ಹೇಳುವುದು,

ಬಣ್ಣಗಳನ್ನು ಗುರುತಿಸುವುದು ಮತ್ತು ಮಕ್ಕಳ ಮನಸ್ಸಿನಲ್ಲಿ ಬರ್ತಕಂತ ಆಲೋಚನೆಗಳನ್ನು ವಿವರಿಸಿವುದು ಹೀಗೆ ಹಲವಾರು ತರಹದ ಪ್ರಕ್ರಿಯೆ ಯನ್ನು ಮಕ್ಕಳು ತಮ್ಮ ಪೋಷಕರ ಮುಂದೆ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರಸ್ತುತ ಪಡಿಸಿದರು.

ಮಕ್ಕಳು ಅತಿ ಉತ್ಸಾಹದಿಂದ ಮತ್ತು ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ದಿನ ನಮ್ಮ ಮನೆಯಲ್ಲಿ ಪ್ರತಿನಿತ್ಯ ಅಭ್ಯಾಸ ಮಾಡುತ್ತಿವೆಂದು ಪ್ರತಿಜ್ಞೆಯನ್ನು ಮಾಡಿದರು.

ಈ ಕಾರ್ಯಕ್ರಮಕ್ಕೆ ಶಹಾಪುರ ನಗರದ ಜನತೆ ಹಾಗೂ ತಂದೆ ತಾಯಂದಿರು ಮತ್ತು ಗಣ್ಯರು ಕಾರ್ಯಕ್ರಮಕ್ಕೆ ಬಂದು ತಮ್ಮ ತಮ್ಮ ಅನಿಸಿಕೆಗಳನ್ನು ಹೇಳಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದ ಕೇಂದ್ರ ಬಿಂದು ಆದ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಆಶ್ರಮದ ಶಿಕ್ಷಕಿ ಸಾದ್ವಿ ವಾಣಿಶ್ರೀ ರಾವ್ ಯೋಗ ಶಿಬಿರವನ್ನು ನಡೆಸಿ ಕೊಟ್ಟರು.

ಈ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆಯ ಸಂಯೋಜಕರಾದ ಶ್ರೀ ಎಸ್ ಎಚ್ ರೆಡ್ಡಿ ಜಿ ಮತ್ತು ಸ್ವಯಂ ಸೇವಕರಾದ. ಮಾಧುರಿ, ಈ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಪೋಷಕರು ಭಾಗವಹಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ವಿರೋಧದ ಸಾಕ್ಷ್ಯಚಿತ್ರವನ್ನು ನಿಷೇಧಿಸಲಾಗುತ್ತದೆ;

Tue Jan 24 , 2023
ಅಸದುದ್ದೀನ್ ಓವೈಸಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗ್ಯನಗರ (ತೆಲಂಗಾಣ) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಇರುವಾಗ ನಡೆದಿದ್ದ ಗಲಭೆಯ ಬಗ್ಗೆ ಬಿಬಿಸಿ ನ್ಯೂಸ್ ಸಾಕ್ಷ್ಯಚಿತ್ರ ತಯಾರಿಸಿತ್ತು. ಅದನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈಗ ಮ. ಗಾಂಧಿ ಇವರ ಹತ್ಯೆ ಮಾಡಿರುವ ಗೋಡ್ಸೆ ಕುರಿತು ಚಲನಚಿತ್ರ ನಿರ್ಮಾಣವಾಗಿದೆ. ಅದನ್ನು ಪ್ರಧಾನಮಂತ್ರಿ ನಿಷೇಧಿಸುವರೆ ? ನಾನು ಈ ಚಲನಚಿತ್ರ ನೋಡಿದ್ದೇನೆ. ಅದರಲ್ಲಿ ಗೋಡ್ಸೆಯವರು ಗಾಂಧಿ ಇವರನ್ನು ಏಕೆ ಹತ್ಯೆ […]

Advertisement

Wordpress Social Share Plugin powered by Ultimatelysocial