ಪಾತಾಳಕ್ಕೆ ಕುಸಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ

ಆರ್ಥಿಕ ಹೊಡೆತದ ಭೀತಿ: ಪಾತಾಳಕ್ಕೆ ಕುಸಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ

ಮುಂಬಯಿ: ಯುರೋಪ್ ಸೇರಿದಂತೆ ಜಾಗತಿಕವಾಗಿ ಒಮಿಕ್ರಾನ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ಇದರಿಂದ ಆರ್ಥಿಕ ಹೊಡೆತ ಬೀಳಲಿದೆ ಎಂಬ ಆತಂಕದ ಪರಿಣಾಮ ಸೋಮವಾರ (ಡಿಸೆಂಬರ್ 20) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಪಾತಾಳಕ್ಕೆ ಕುಸಿದಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,300 ಅಂಕಗಳಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,329.70 ಅಂಕ ಕುಸಿತದೊಂದಿಗೆ 55,682.04 ಅಂಕಗಳಲ್ಲಿ ವಹಿವಾಟು ನಡೆಸಿದೆ.

ಎನ್ ಎಸ್ ಇ ನಿಫ್ಟಿ 402.70 ಅಂಕಗಳಷ್ಟು ಕುಸಿತಗೊಂಡಿದ್ದು, 16,582.50 ಅಂಕಗಳ ಮಟ್ಟ ತಲುಪಿದೆ. ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,100 ಅಂಕಗಳಷ್ಟು ಕುಸಿತಗೊಂಡಿದ್ದರೆ, ಎನ್ ಎಸ್ ಇ ನಿಫ್ಟಿ 300 ಅಂಕಗಳಷ್ಟು ಇಳಿಕೆಯಾಗಿತ್ತು.

ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಇಂಡಸ್ ಇಂಡ್ ಬ್ಯಾಂಕ್, ಆಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ ಬ್ಯಾಂಕ್, ಮಹೀಂದ್ರ ಆಯಂಡ್ ಮಹೀಂದ್ರ ಷೇರುಗಳು ಶೇ.4ರಷ್ಟು ನಷ್ಟ ಕಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ.19 ರಂದು ದೇಶದ ಪ್ರಮುಖ ನಗರದಲ್ಲಿ ಚಿನ್ನದ ಬೆಲೆ ಹೇಗಿದೆ?

Mon Dec 20 , 2021
ಡಿಸೆಂಬರ್ 19 ರಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಏರಿಳಿತ ಕಂಡಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,680 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,680 ರೂ ಆಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಹತ್ತು ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಹತ್ತು ರೂಪಾಯಿ ಏರಿಕೆ ಕಂಡಿದೆ. ಆದರೆ ಪ್ರಮುಖ ನಗರಗಳಲ್ಲಿ […]

Advertisement

Wordpress Social Share Plugin powered by Ultimatelysocial