‘ಬಾಹುಬಲಿ 2’ ದಾಖಲೆಯನ್ನೂ ಹಿಂದಿಕ್ಕುತ್ತಾ ‘ಪಠಾಣ್’?

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಾಹಂ ಸಿನಿಮಾ ‘ಪಠಾಣ್’ ಬಾಕ್ಸಾಫೀಸ್‌ನಲ್ಲಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮೂರನೇ ಭಾನುವಾರವೂ ‘ಪಠಾಣ್’ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಲೇ ಇದೆ.ಶಾರುಖ್ ಖಾನ್ ಸಿನಿಮಾ ‘ಪಠಾಣ್’ ರಿಲೀಸ್ ಆಗಿ ಇಂದಿಗೆ (ಫೆಬ್ರವರಿ 13) 20 ದಿನಗಳಲ್ಲಿ ಪೂರೈಸಿದೆ.

ಕಳೆದ 19 ದಿನಗಳಲ್ಲಿ ‘ಪಠಾಣ್’ ಬಾಕ್ಸಾಫೀಸ್ ಕಲೆಕ್ಷನ್‌ ಅದ್ಭುತವಾಗಿದೆ. ಈಗಾಗಲೇ ‘ಕೆಜಿಎಫ್ 2’ ಹಿಂದಿ ಅವತರಣಿಯ ಲೈಫ್ ಟೈಮ್ ಕಲೆಕ್ಷನ್‌ ಅನ್ನು ಹಿಂದಿಕ್ಕಿದೆ. ಈಗ ‘ಬಾಹುಬಲಿ 2’ ದಾಖಲೆಯ ಮೇಲೆ ಕಣ್ಣಿಟ್ಟಿದೆ.

ಕಳೆದ 19 ದಿನಗಳಲ್ಲಿ ‘ಪಠಾಣ್’ ಬಾಕ್ಸಾಫೀಸ್ ಕಲೆಕ್ಷನ್ ನೋಡಿ ಸಿನಿಮಾ ಮಂದಿ ಬೆರಗಾಗಿದ್ದಾರೆ. ದಕ್ಷಿಣ ಭಾರತದ ಫಿಲ್ಮ್‌ ಮೇಕರ್ಸ್‌ ಎದೆಯಲ್ಲಿ ಡವಡವ ಶುರುವಾಗಿದೆ. ರಾಜಮೌಳಿ ನಿರ್ದೇಶಿಸಿದ ‘ಬಾಹುಬಲಿ 2’ ಸಿನಿಮಾದ ಹಿಂದಿ ಕಲೆಕ್ಷನ್ ರೆಕಾರ್ಡ್‌ ಬ್ರೇಕ್ ಮಾಡುವ ತರಾತುರಿಯಲ್ಲಿದೆ. ಹಾಗಿದ್ರೆ, ‘ಬಾಹುಬಲಿ 2’ ಹಿಂದಿ ಕಲೆಕ್ಷನ್ ಎಷ್ಟು? 19 ದಿನಗಳಲ್ಲಿ ‘ಪಠಾಣ್’ ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ ಸಖತ್ತಾಗಿಯೇ ಕೈ ಹಿಡಿದಿದೆ. 3ನೇ ಭಾನುವಾರವೂ ಕಲೆಕ್ಷನ್ ಅದ್ಭುತವಾಗಿಯೇ ಇದೆ. 19ನೇ ದಿನ ‘ಪಠಾಣ್’ ಕಲೆಕ್ಷನ್ ನಿರ್ಮಾಪಕರ ಜೇಬು ತುಂಬಿಸಿದೆ ಎನ್ನುತ್ತಿದ್ದಾರೆ. ಈ ಮೂಲಕ ಇಲ್ಲಿವರೆಗೂ ‘ಪಠಾಣ್’ ಹಿಂದಿ ಬೆಲ್ಟ್‌ನಲ್ಲಿ ಸುಮಾರು 469 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಎಲ್ಲಾ ಭಾಷೆಯಿಂದಲೂ ಭಾರತದಲ್ಲಿ ಗಳಿಸಿದ್ದು, 486.25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ದಕ್ಷಿಣ ಭಾರತದ ಡಬ್ ಸಿನಿಮಾ ‘ಬಾಹುಬಲಿ 2’ ಹಿಂದಿ ಬೆಲ್ಟ್‌ನಲ್ಲಿ ದಾಖಲೆ ಕಲೆಕ್ಷನ್ ಬರೆದಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 511 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈಗ ‘ಪಠಾಣ್’ ಹಿಂದಿ ಬೆಲ್ಟ್‌ನಲ್ಲಿ 469 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ‘ಬಾಹುಬಲಿ 2’ ಹಿಂದಿ ದಾಖಲೆಯನ್ನು ಮುರಿಯಬಹುದೇ ಎಂದು ಲೆಕ್ಕ ಹಾಕಲಾಗುತ್ತಿದೆ.

‘ಪಠಾಣ್’ ಕೇವಲ ಹಿಂದಿ ಬೆಲ್ಟ್‌ಗಳಲ್ಲಷ್ಟೇ ಅಲ್ಲ. ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ ಕೂಡ ಜೋರಾಗಿದೆ. 19ನೇ ದಿನ ವಿಶ್ವದಾದ್ಯಂತ ಸುಮಾರು 12.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಸುಮಾರು 950 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ. ಇನ್ನು 50 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ, 1000 ಕೋಟಿ ರೂ. ಕ್ಲಬ್ ಸೇರಿದಂತಾಗುತ್ತೆ.

ವಿಶ್ವದಾದ್ಯಂತ ‘ಪಠಾಣ್’ ಸಿನಿಮಾದ ಕಲೆಕ್ಷನ್ 1000 ಕೋಟಿ ರೂ. ಸಮೀಪಿಸುತ್ತಿದೆ. ಈ ಬೆನ್ನಲ್ಲೇ ‘RRR’, ‘KGF 2′ ಸಿನಿಮಾ ವರ್ಲ್ಡ್‌ವೈಡ್ ಕಲೆಕ್ಷನ್ ಅನ್ನು ಹಿಂದಿಕ್ಕಬಹುದೇ? ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ,’ಪಠಾಣ್’ ಕ್ರೇಜ್ ಹೀಗೆ ಮುಂದುವರೆದರೆ, ‘RRR’ ಹಾಗೂ ‘KGF 2’ ಲೈಫ್ ಟೈಮ್ ಕಲೆಕ್ಷನ್‌ ಅನ್ನು ಹಿಂದಿಕ್ಕಬಹುದು ಎಂದು ಅಂದಾಜಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದಾರ್ಥ್- ಕಿಯಾರಾ ಅದ್ಧೂರಿ ರಿಸೆಪ್ಷನ್ ಪಾರ್ಟಿ.

Mon Feb 13 , 2023
ರಾಜಸ್ಥಾನದ ಜೈಸಲ್ಮೇರ್‌ನ ಪ್ಯಾಲೆಸ್‌ ಸೂರ್ಯಗಢದಲ್ಲಿ ಇತ್ತೀಚೆಗೆ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ಹಸೆಮಣೆ ಏರಿದ್ದರು. ಮದುವೆ ವಿಚಾರವನ್ನು ಬಹಳ ರಹಸ್ಯವಾಗಿಯೇ ಇಟ್ಟಿದ್ದ ಜೋಡಿ ಕೊನೆಗೆ ಫೋಟೊಗಳನ್ನು ಶೇರ್ ಮಾಡಿ ವಿವಾಹ ಬಂಧನಕ್ಕೆ ಒಳಗಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದರು. ಮುಂಬೈನಲ್ಲಿ ಕಳೆದ ರಾತ್ರಿ ಸಿದ್ದ್‌ಕಿಯಾರಾ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ‘ಶೇರ್ಷಾ’ ಸಿನಿಮಾದಲ್ಲಿ ಜೋಡಿ ಒಟ್ಟಿಗೆ ನಟಿಸಿತ್ತು. ಆದರೆ ಅದಕ್ಕೂ ಮೊದಲು ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ಸಿದ್ದ್‌ಕಿಯಾರಾ ಭೇಟಿ […]

Advertisement

Wordpress Social Share Plugin powered by Ultimatelysocial